Preparatory meeting on the occasion of 79th Independence Day.
Tehsildar calls for meaningful celebration of Independence Day.

ಗಂಗಾವತಿ.. ಆಗಸ್ಟ್ 15ರಂದು ಜರುಗಲಿರುವ 79ನೆಯ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣದಿಂದ ಆಚರಿಸಲು ಸರ್ವರ ಸಹಕಾರ ಮುಖ್ಯವಾಗಿದೆ ಎಂದು ತಹಸಿಲ್ದಾರ್ ರವಿ ಅಂಗಡಿ ಹೇಳಿದರು. ಅವರು ಮಂಗಳವಾರದಂದು ತಾಲೂಕಾ ಪಂಚಾಯತ್ ಮಂಥನ ಸಭಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.. ಆಯಾ ಇಲಾಖೆಯ ಅಧಿಕಾರಿಗಳು ನಿಗದಿಪಡಿಸಿದ ಸಮಯದೊಳಗೆ ಧ್ವಜಾರೋಹಣವನ್ನು ನೆರವೇರಿಸಿಕೊಂಡು ಬಂದು ತಾಲೂಕ ಕ್ರೀಡಾಂಗಣದಲ್ಲಿ ಜರುಗಲಿರುವ ಸಾರ್ವಜನಿಕ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರು ಭಾಗವಹಿಸು ವಂತೆ ತಿಳಿಸಿದರು. ಉಳಿದಂತೆ ಈ ಹಿಂದಿನಂತೆ ಇಲಾಖೆಗಳಿಗೆ ವಹಿಸಿದ ಆಯಾ ಜವಾಬ್ದಾರಿಗಳನ್ನು ಅಚ್ಚುಕಟ್ಟನಿಂದ ಕಾರ್ಯನಿರ್ವಹಿಸಬೇಕೆಂದು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳ ಮುಖಂಡರು. ಹಾಗೂ ಮಾಧ್ಯಮದವರು. ಸರಕಾರದ ನಿಯಮಾವಳಿಯಂತೆ ನಿಗದಿಪಡಿಸಿದ ಸಮಯದೊಳಗೆ ಧ್ವಜಾರೋಹಣ ಜರುಗುವ ವ್ಯವಸ್ಥೆ ಮಾಡಬೇಕು. ವಿದ್ಯಾರ್ಥಿಗಳಿಗೆ ವಾಹನ ಸೌಲಭ್ಯ. ಅಲ್ಪೋಪಹಾರ. ಶುದ್ಧವಾದ ಕುಡಿಯುವ ನೀರು ಸೇರಿದಂತೆ ಸರಕಾರಿ ಶಾಲೆಯ ಮಕ್ಕಳನ್ನು ಹೆಚ್ಚು ಹೆಚ್ಚು ಬಳಸಿಕೊಂಡು ಶಾಲೆಗಳನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕೆಂದು ಚನ್ನಬಸವ ಜೆಕಿನ್. ಬಸವರಾಜ ಮ್ಯಾಗಳ ಮನಿ. ಸಲಹೆ ನೀಡಿದರು. ಉಳಿದಂತೆ ದ್ವಜಸ್ತಂಬ ಶೃಂಗಾರ. ನಗರ ಪ್ರಮುಖ ವೃತ್ತಗಳಿಗೆ ವಿದ್ಯುತ್ ದೀಪಾವಲಂಕಾರ. ತಳಿರು ತೋರಣ ಬಾಳೆ ಕಂಬಗಳಿಂದ ಅಲಂಕಾರ ಆಚರಣೆ ಪ್ರಯುಕ್ತ ಪ್ರಬಂಧ ಸ್ಪರ್ಧೆ ಭಾಷಣ ಸ್ಪರ್ಧೆ ನಡೆಸುವುದರ ಮೂಲಕ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಿ ಗೌರವಿಸಿ ಪೋರ್ಚುಗೀಸುವ ಕೆಲಸವಾಗಬೇಕೆಂದು ತಾಲೂಕ್ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಮರೆಡ್ಡಿ ಹೇಳಿದರು ನಗರ ಸಭೆ ಅಧ್ಯಕ್ಷ ಹೀರಾಬಾಯಿ ನಾಗರಾಜ್.. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಬಹುತೇಕ ಎಲ್ಲಾ ಇಲಾಖೆಯ ಅಧಿಕಾರಿಗಳು ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದರು.