MLA M R Manjunath launched the repair of canals that drain water into Ramanagudda Lake.

ವರದಿ : ಬಂಗಾರಪ್ಪ .ಸಿ .
ಹನೂರು :ರೈತರ ಬಹುದಿನಗಳ ಬೇಡಿಕೆಯಾಗಿದ್ದ ರಾಮನ ಗುಡ್ಡ ಕೆರೆಗೆ ನದಿ ನೀರು ಹರಿಸುವ ಮಹತ್ವಾಕಾಂಕ್ಷಿ ಯೋಜನೆ ಕಾರ್ಯಕ್ಕೆ ಚಾಲನೆ ನೀಡಿ ಕಾಲುವೆಗಳನ್ನು ದುರಸ್ತಿ ಪಡಿಸಲಾಗುತ್ತಿದೆ ರೈತರು ಇದಕ್ಕೆ ಸಹಕಾರ ನೀಡುವಂತೆ ಶಾಸಕ ಎಂ.ಆರ್ ಮಂಜುನಾಥ್ ತಿಳಿಸಿದರ.
ಹನೂರು ಪಟ್ಟಣದ ರಾಮನಗುಡ್ಡ ಕೆರೆಗೆ ನದಿಯಿಂದ ನೀರು ಬರುವ ನಾಲೆಯನ್ನು ಕಾಲುವೆ ಮಾದರಿ ದುರಸ್ತಿ ಪಡಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಲು ಭೂಮಿ ಪೂಜೆಯನ್ನು ಸಲ್ಲಿಸಿದ ನಂತರ ಮಾತನಡಿದ ಅವರು
ಮುಂಗಾರು ಮಳೆ ಸಂಪೂರ್ಣವಾಗಿ ದುರ್ಬಲ ಹೀಗಾಗಿ ಹನೂರು ಪಟ್ಟಣ ಸೇರಿದಂತೆ ರಾಮನಗುಡ್ಡ ಕೆರೆ ಅಚ್ಚುಕಟ್ಟು ಪ್ರದೇಶದ ರೈತರಿಗೆ ಹಾಗೂ ವಿವಿಧ ಗ್ರಾಮಗಳಿಗೆ ನೀರಿನ ಮೂಲ ಕಾವೇರಿ ನದಿಯಿಂದ ಪೈಪ್ಲೈನ್ ಅಳವಡಿಸಲಾಗಿದ್ದು ಒಂದು ಕಿಲೋಮೀಟರ್ ದೂರದಲ್ಲಿರುವ ಪೈಪ್ಲೈನ್ ತಳದಿಂದ ತಾತ್ಕಾಲಿಕವಾಗಿ ಕಾಲುವೆ ಮಾಡಿ 15 ದಿನಗಳ ಒಳಗೆ ನೀರನ್ನು ಕೆರೆಗೆ ಹರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಕಾಲುವೆ ಕಾಮಗಾರಿಗೆ ರೈತರು ಸಹಕರಿಸಬೇಕು ಈಗಾಗಲೇ ಕಾಮಗಾರಿಗೆ ಹಿಟಾಚಿ ಯಂತ್ರಗಳನ್ನು ಬಳಸಿಕೊಳ್ಳಲಾಗುತ್ತಿದೆ, ಹೀಗಾಗಿ ರೈತರು ರಾಮನಗುಡ್ಡ ಕೆರೆಗೆ ನೀರು ಬರುವ ಮೂಲ ಕಾಲುವೆಯನ್ನು ತಾತ್ಕಾಲಿಕವಾಗಿ ರೈತರ ಜಮೀನುಗಳ ಬಳಿ ಗಿಡಗಂಟಿ ರಾಡಿಯನ್ನು ತೆಗೆಯಲಾಗುತ್ತಿದ್ದು ರೈತರು ಸಹಾಯಕ್ಕೆ ಪೂರಕವಾಗಿ ಜೊತೆಯಲ್ಲಿದ್ದು ಸಂಪೂರ್ಣ ಸಹಕಾರ ನೀಡಿದರೆ ಆದಷ್ಟು ಬೇಗ ನೀರನ್ನು ಹರಿಸಲು ಅನುಕೂಲವಾಗುತ್ತದೆ ಎಂದರು.
ಕೆರೆ ಒತ್ತುವರಿ ತೆರವಿಗೆ ಕ್ರಮ : ರಾಮನ ಗುಡ್ಡ ಕೆರೆ ನೀರಿನ ಮೂಲವಾಗಿದ್ದು 98 ಎಕರೆ ಸ್ಥಳ ಇರುವುದನ್ನು ನೀರಾವರಿ ಇಲಾಖೆ ಅಧಿಕಾರಿಗಳು ಗುರುತು ಮಾಡಿ ಚೆಕ್ ಬಂದ್ ಗುರುತು ನಿರ್ಮಾಣ ಮಾಡಲಾಗುತ್ತದೆ ಹೀಗಾಗಿ ಅಧಿಕಾರಿಗಳಿಗೂ ಸಹ ತುರ್ತಾಗಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಮಹತ್ವ ಕಛೇಯ ನೀರಾವರಿ ಯೋಜನೆಗೆ ಕ್ರಮ ಕೈಗೊಳ್ಳಲಾಗಿದ್ದು ಈ ಭಾಗದ ರೈತರು ಸದ್ಬಳಕೆ ಮಾಡಿಕೊಂಡು ರಾಮನ ಗುಡ್ಡ ಕೆರೆಗೆ ನೀರು ಹರಿಸಲು ಕ್ರಮ ಕೈಗೊಳ್ಳಲು ಈ ನಿಟ್ಟಿನಲ್ಲಿ ರೈತರು ಮುಂದಾಗಬೇಕು ಎಂದು ತಿಳಿಸಿದರು .
ಇದೇ ಸಂದರ್ಭದಲ್ಲಿ ಮುಖಂಡರಾದ ಗುರುಮಲ್ಲಪ್ಪ , ನಟರಾಜು,ರಾಜುನಾಯ್ಡು,
ಡಿ ಆರ್ ಹಾರ್ಡ್ವೇರ್ ಸೀನ ,ರೈತ್ಯ ಮುಖಂಡರಾದ ಚಂಗಡಿ ಕರಿಯಪ್ಪ,ಮಿತ್ರ,
ಅಮೋಘ, ಮಲ್ಲಣ್ಣ,ವಿಜಯ್ ಕುಮಾರ್,ಪಟ್ಟಣ ರಾಮನಗುಡ್ಡ ತೋಟದ ಜಮೀನಿನ ರೈತರು ಚಿಂಚಳ್ಳಿ ವಿವಿಧ ಗ್ರಾಮಗಳಿಂದ ನೂರಾರು ರೈತರು ಸೇರಿದಂತೆ ಹಲವಾರು ಹಾಜರಿದ್ದರು .