Gaddi: Current cover-up: Farmers outraged, warning of siege by GESCOM

ವಿದ್ಯುತ್ ಕೊರತೆಯಿಂದ ಸಕಾಲಕ್ಕೆ ನೀರು ದೊರೆಯದೆ ಬೆಳೆ ನಾಶ
ಗಂಗಾವತಿ : ತಾಲೂಕಿನ ಉಡುಮಕಲ್ ಗಡ್ಡಿ ಇತರೆ ಭಾಗಗಳಲ್ಲಿ ರೈತರ ಪಂಪಸೆಟ್‌ಗೆ ನೀಡುವ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಸಕಾಲಕ್ಕೆ ನೀರು ದೊರೆಯದೆ ಸಾವಿರಾರು ಎಕರೆ ಬೆಳೆ ನಾಶವಾಗುತ್ತಿದೆ, ರೈತರು ಅಕ್ರೋಶಗೊಂಡಿದ್ದು, ಇದೇ ರೀತಿ ಮುಂದುವರೆದರೆ ಜೆಸ್ಕಾಂ ಮುತ್ತಿಗೆಗೆ ಜನತೆ ನಿರ್ಧರಿಸಬೇಕಾಗುತ್ತದೆ ಎಂದು ಕನಕಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ರೈತ ಮೋರ್ಚಾ ತಾಲೂಕು ಅಧ್ಯಕ್ಷ ಬಸವರಾಜ್ ಹೇರೂರು ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನಿಯಮದಂತೆ ಬೆಳಗ್ಗೆ ೧೦.೩೦ ರಿಂದ ಸಂಜೆ ೦೫: ಗಂಟೆ ವರೆಗೆ ವಿದ್ಯುತ್ ನೀಡಬೇಕಾಗಿರುವ ಜೆಸ್ಕಾಂ ಕೇಲವ ಒಂದರೆಡು ಗಂಟೆ ವಿದ್ಯುತ್ ನೀಡಿ ಲೈನ್ ಫಲ್ಟ್ ನೆಪದಲ್ಲಿ ರೈತರನ್ನು ಯಾಮಾರಿಸುತ್ತಿದೆ. ಅಧಿಕಾರಿಗಳು, ಲೈನ್ ಮ್ಯಾನ್‌ಗಳು ಜೆಇಗಳು ಫೋನ್ ಸಂಪರ್ಕಕ್ಕೆ ಸಿಗುತ್ತಿಲ್ಲ. ಗಡ್ಡಿ ಭಾಗಕ್ಕೆ ಆಗೋಲಿ ಎಫ್೧ ಮೂಲಕ ವಿದ್ಯುತ್ ಸಂಪರ್ಕ ಇದ್ದು, ಜೆಸ್ಕಾಂ ನಿರ್ಲಕ್ಷö್ಯಕ್ಕೆ ರೈತರು ಇಡಿ ಶಾಪ ಹಾಕುತ್ತಿದ್ದಾರೆ. ಸಾವಿರಾರು ರು ಹೂಡಿಗೆ ಮಾಡಿ ಬಿತ್ತನೆ ಮಾಡಿದ್ದು, ಬೆಳೆ ಬೆಳವಣೆಗೆಯ ಸಂದರ್ಭದಲ್ಲಿ ನೀರಿನ ಕೊರತೆ ಉಂಟಾಗಿ ಹಾಳಾಗಿ ಹೋಗುತ್ತಿವೆ ಇದರ ಬಗ್ಗೆ ಜೆಸ್ಕಾಂ ತಲೆ ಕೆಡಿಸಿಕೊಳ್ಳುತ್ತಿಲ್ಲ, ರೈತರ ನಷ್ಟದ ಬಗ್ಗೆ ಕಿಂಚತ್ತು ಕಾಳಜಿ ಇಲ್ಲ ಕೂಡಲೆ ಎಚ್ಚೆತ್ತು ರೈತರಿಗೆ ನಿಗದಿತ ಸಮಯಕ್ಕೆ ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಕೊಡಬೇಕು ಇಲ್ಲದಿದ್ದಲ್ಲಿ ಜೆಸ್ಕಾಂ ಹಾಗು ಸಚಿವ ಶಿವರಾಜ್ ತಂಗಡಗಿ ನಿವಾಸದ ಎದುರು ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು.