A massive protest was held by Sri Kottureshwara Vidyavardhaka Sangha demanding the inclusion of Gangavathi Urban Center in the new Kishkinda district.
ಕೊಪ್ಪಳ ಜಿಲ್ಲೆಯಲ್ಲಿ ಅಧಿಕ ತೆರಿಗೆ ಪಾವತಿಸುವ ಗಂಗಾವತಿ ವಿಧಾನಸಭಾ ಕ್ಷೇತ್ರ… ಶಾಸಕ ಪರಣ್ಣ ಮುನವಳ್ಳಿ ಹೇಳಿಕೆ.




ಗಂಗಾವತಿ… ಕೊಪ್ಪಳ ಜಿಲ್ಲೆಯಲ್ಲಿ ಗಂಗಾವತಿ ವಿಧಾನಸಭಾ ಕ್ಷೇತ್ರ ರಾಜ್ಯ ಸರ್ಕಾರಕ್ಕೆ ಹೆಚ್ಚು ತೆರಿಗೆ ಪಾವತಿಸುವ ಅತ್ಯಂತ ಪ್ರಮುಖ ಕೇಂದ್ರವಾಗಿದೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು .
ಅವರು ಶನಿವಾರದಂದು ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘ ಅಡಿಯಲ್ಲಿ ಬರುವ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳ ಹಾಗೂ ಪ್ರಾಚಾರ್ಯ ಮುಖ್ಯೋಪಾಧ್ಯಾಯ ಹಾಗೂ ಶಿಕ್ಷಕರುಗಳ. ಹಾಗೂ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಲ್ಮಠದ ಡಾಕ್ಟರ್ ಕೊಟ್ಟೂರು ಮಹಾಸ್ವಾಮಿಗಳವರ ನೇತ್ರತ್ವದಲ್ಲಿ ಜರುಗಿದ ಗಂಗಾವತಿ ನಗರ ಕೇಂದ್ರವಾದ ನೂತನ ಕಿಸ್ಕಿಂದ ಜಿಲ್ಲಾ ರಚನೆಗೆ ಆಗ್ರಹಿಸಿ ನಡೆಸಲಾದ ಪ್ರತಿಭಟನ ಹಾಗೂ ತಹಸೀಲ್ದಾರರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಪತ್ರ ಸಲ್ಲಿಸುವುದರ ಮೂಲಕ ಶ್ರೀ ಕೃಷ್ಣದೇವರಾಯ ವೃತ್ತದಲ್ಲಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಪ್ರಾಗೈತಿ ಹಾಸಿಕ ಐತಿಹಾಸಿಕ. ಇತಿಹಾಸ ಪ್ರಸಿದ್ದಿಯೊಂದಿಗೆ ರಾಮಾಯಣ ವಾಲಿ ಸುಗ್ರೀವ. ಹಾಗೂ ಕಿಷ್ಕಿಂದ ಶ್ರೀ ಆಂಜನೇಯ ಜನ್ಮ ತಾಳಿದ ಪುಣ್ಯ ಭೂಮಿಯಾಗಿದೆ. ಶ್ರೀ ಚನ್ನಬಸವ ತಾತನವರ ಆಶಯದಂತೆ ಗಂಗಾವತಿ ಮುಂದೊಂದು ದಿನ ಛೋಟಾ ಬಾಂಬೆ ಆಗಲಿದೆಯಂಬ ನುಡಿಯಂತೆ ಈಗಾಗಲೇ ಸರ್ವ ಕ್ಷೇತ್ರದಲ್ಲಿ ದಿಟ್ಟ ಹೆಜ್ಜೆಯನ್ನು ಇಟ್ಟಿರುವ ಗಂಗಾವತಿಯನ್ನು ನೂತನ ಕಿಸ್ಕಿಂದ ಜಿಲ್ಲೆಯನ್ನಾಗಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರ ಮುಂದಾಗಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ. ಕಲ್ಮಠದ ಡಾಕ್ಟರ್ ಕೊಟ್ಟೂರು ಮಹಾಸ್ವಾಮಿಗಳು. ಮಾಜಿ ಸಂಸದ ಶಿವರಾಮೇಗೌಡ.. ಚನ್ನಬಸಯ್ಯಸ್ವಾಮಿ. Hm ಮಂಜುನಾಥ್. ಶರಣೇಗೌಡ ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು