
HAL heralds Akshara Kranti at Salur Guruswamy Punyasamsmarananotsav program: Dr. Nirmalanandanath Swamigal

ವರದಿ: ಬಂಗಾರಪ್ಪ ಸಿ.

ಹನೂರು :ಶ್ರೀ ಸಾಲೂರು ಮಠದಲ್ಲಿ ಲಿಂಗೈಕ್ಯರಾದ ಶ್ರೀ ಗುರುಸ್ವಾಮಿಗಳ ಪುಣ್ಯಸ್ಮರಣೆಯಂದು ಭಾರತಿಯ ಹೆಮ್ಮೆಯ ಸಂಸ್ಥೆಯಾದ
ಹಿಂದುಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಹೊಣೆಗಾರಿಕೆ ನಿಧಿಯಿಂದ (CSR) ನಿರ್ಮಿಸಲು ಹೊರಟಿರುವ ವಿದ್ಯಾರ್ಥಿ ನಿಲಯಕ್ಕೆ ಸುತ್ತುರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೆಂದ್ರ ಮಹಾಸ್ವಾಮಿಗಳು ,ಅದಿ ಚುಂಚನಗಿರಿಯ ಕ್ಷೇತ್ರದ ಜಗದ್ಗುರು ಡಾ,ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿಗಳು , ಶ್ರೀ
ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ಸೇರಿದಂತೆ ಅನೇಕ ಯತಿವರ್ಯರ ಸಮ್ಮುಖದಲ್ಲಿ ಮತ್ತು ಶಾಸಕರದ ಎಮ್ ಅರ್ ಮಂಜುನಾಥ್ ಹಾಗೂ ಹೆಚ್ ಎ ಎಲ್ ನ ಅಧ್ಯಕ್ಷರ ನೇತೃತ್ವದಲ್ಲಿ ಕಟ್ಟಡದ ಗುದ್ದಲಿ ಪೂಜೆಯನ್ನು ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಭಕ್ತರನ್ನೂದ್ದೇಶಿಸಿ ಮಾತನಾಡಿದ ಶ್ರೀ ಡಾ ನಿರ್ಮಲಾನಂದನಾಥ ಶ್ರೀ ಗಳು ಮಾತನಾಡಿ ಶ್ರೀ ಮಠದಲ್ಲಿನ ಗುರುಸ್ವಾಮೀಜಿಗಳ ಪುಣ್ಯ ಸ್ಮರಣೆ ದಿನದ ಅಂಗವಾಗಿ ಇಂದು ಗುರು ಸ್ಮೃತಿ ಲೋಕಾರ್ಪಣೆ ಮಾಡಲಾಗಿರುವುದು ಸಂತೋಷದ ಸಂಗತಿ ,ಭಾರತಿಯ ಸಂಸ್ಕೃತಿಯಲ್ಲಿ ಗುರುಪರಂಪರೆಗೆ ತನ್ನದೆ ಆದ ಇತಿಹಸವಿದೆ , ಭಾರತದ ಅದ್ಬುತ ಶಕ್ತಿಯಾವುದಾದರು ಇದ್ದರೆ ಗುರುಗಳ ಶಕ್ತಿ , ಜ್ಞಾನ ಪರಂಪರೆಯ ತಾಣ ನಮ್ಮದು , ನಾಡಿನ ಗುರುಪರಂಪರೆಯಲ್ಲಿ ಮಠಗಳ ಕೊಡುಗೆ ಅಪಾರ ,
ಈ ದಿನ ಮಕ್ಕಳ ಕಲಿಕ ವಿದ್ಯಾರ್ಥಿನಿಲಯವನ್ನು ಮಾಡಲು ಅಡಿಗಲ್ಲು ಹಾಕಿರುವುದು ಶ್ರೀ ಗಳ ಬಹಳ ಶಿಸ್ತಿನ ಅಭಿವೃದ್ಧಿಯ ಸಂಕೇತಗಳನ್ನು ತೋರಿಸುತ್ತದೆ , ಗುರುಗಳಾದ ನಾವು ಅನೇಕ ಜನ್ಮದ ಕರ್ಮಗಳನ್ನು ಕಳೆಯಲು ಈ ಜನ್ಮ ತಾಳಿದ್ದೇವೆ , ಕುವೆಂಪುರವರ ಹೇಳಿಕೆಯಂತೆ ಒಳಗಿನ ಮನಸ್ಸಿನ ಅರಿವೆ ಗುರುಗಳು ಮಠದಲ್ಲಿ ಅಭಿವೃದ್ಧಿಗೆ ಕಾರಣವೆ ಹೆಚ್ ಎ ಎಲ್ ಮುಖ್ಯಸ್ಥರಾದ ಸುನೀಲ್ ರವರಿಗೆ ಶುಭವಾಗಲಿ .ಎಂದು ಅರ್ಶೀವಚನ ನೀಡಿದರು .
ಶಾಲಾ ಕಟ್ಟಡ ಶಂಕುಸ್ಥಾಪನೆ ಕಾರ್ಯಕ್ಕೆ ಆಗಮಿಸಿ ಮಾತನಾಡಿದ ಅದ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಡಾ ಶ್ರೀ ಡಿ ಕೆ ಸುನಿಲ್ ಮಾತನಾಡಿ ಸಾಲೂರು ಮಠದಲ್ಲಿ ವಿದ್ಯಾರ್ಥಿಗಳಿಗೆ ವಸತಿ ಸೌಕರ್ಯ ಒದಗಿಸುವ ಪ್ರಯತ್ನವನ್ನು ಇದೇ ಮೊದಲು ಮಾಡಿದ್ದೆವೆ , ನಮ್ಮ ದೇಶದಲ್ಲಿ ಒಟ್ಟು ಹದಿನೇಳು ರಾಜ್ಯದಲ್ಲಿ ಇಂತಹ ಕಾರ್ಯ ಮಾಡಿದ್ದೇವೆ ಈ ಕ್ಷೇತ್ರದಲ್ಲಿ ಬಹಳ ಅವಶ್ಯಕತೆ ಇತ್ತು ಇದನ್ನು ಮನಗಂಡು ಪ್ರಾರಂಭಿಸಿದ್ದೇವೆ ಕಟ್ಟಡದ ಕಾಮಗಾರಿಯನ್ನು ಎರಡು ವರ್ಷದಲ್ಲಿ ಪೂರ್ಣ ಮಾಡಲು ತಿರ್ಮಾನಿಸಿದ್ದೇವೆ . ಕಳೆದ ಹತ್ತು ವರ್ಷದಲ್ಲಿ ಶ್ರೀ ಕ್ಷೇತ್ರಕ್ಕೆ ಬರಲು ತಿರ್ಮಾನಿಸಿ ನಂತರ ವಸತಿ ಕೆಲಸ ಮಾಡಲು ಅವಕಾಶ ನೀಡಿದ ಶ್ರೀ ಗಳಿಗೆ ಅಭಿನಂದನೆಗಳು ಎಂದರು ತಿಳಿಸಿದರು .
ಸಿದ್ದಗಂಗಾ ಶ್ರೀ ಗಳು ಮಾತನಾಡಿ ಮಠವು ಬಹಳ ಪವಿತ್ರವಾದ ಕೆಲಸ ಮಾಡಿಕೊಂಡುಬಂದಿದೆ ಶಿಕ್ಷಣದಲ್ಲಿ ಕರ್ನಾಟಕದಲ್ಲಿ ಮಠಗಳ ಪಾತ್ರ ದೊಡ್ಡದಿದೆ ,ಅಸ್ಪತ್ರೆಗಳು ಸೇರಿದಂತೆ ಅನೇಕ ಧಾರ್ಮಿಕ ಕಾರ್ಯವನ್ನು ಮಾಡತೊಡಗಿವೆ ,ಮಹದೇಶ್ವರರು ,ಸಾಲೂರು ಸ್ವಾಮೀಜಿ ಗಳು ಸೇರಿ ಮಾಡಿದ ಮಠವೆ ಸಾಲೂರು ಮಠ , ಅಂದಿನ ತಮಿಳು ನಾಡಿನ ಇಂದು ಕರ್ನಾಟಕದ ಸಾಲೂರು ಮಠವಾಗಿದೆ ಹಾಗೂ ದೇವಾಲಯವಾಗಿದೆ , ದೇವಾಲಯ ಪ್ರಸಾದ ನೀಡುವ ಕೆಲಸವಿದ್ದರೆ ಅದು ಈ ಮಠದ ಸ್ವಾಮಿಗಳಿಗಿದೆ ,ಎಡಗೈಯಲ್ಲಿ ಸೇವೆ ,ಬಲಗೈಯಲ್ಲಿ ಶಿಕ್ಷಣ ಸಂಸ್ಥೆಗಳು ,ನಮ್ಮ ಅಯ್ಕೆಯಾಗಿದೆ, ಭಕ್ತರು ಗುರುವಿಗೆ ತಂದೆ ತಾಯಿಗೆ ಸಮಾನವಾದ ದೊಡ್ಡ ಮಹತ್ತರವಾದ ಪೂಜ್ಯಸ್ಥಾನವನ್ನು ನೀಡಿದ್ದಾರೆ , ಗುರುಸ್ವಾಮಿಗಳು ಗುರುಗಳಾಗಿ ದೈವರಾಗಿದ್ದಾರೆ, ಶಿಕ್ಷಣದ ಜೊತೆಯಲ್ಲಿ ಉತ್ತಮ ಸಂಸ್ಕಾರವನ್ನು ಕೊಡುತ್ತ ಬಂದಿದ್ದಾರೆ , ಬೆಡಗಂಪಣರಿಗೆ ಸಂಸ್ಕಾರವನ್ನು ನೀಡಿ , ಮಾಂಸಹಾರವನ್ನು ತೆಜಿಸಲು ಬಹಳ ಕಾರಣಿಭೂತರಾಗಿದ್ದರೆ ಇವರು ಇಂದಿಗೂ ಕೃಷಿ ಕಾಯಕವನ್ನು ಮಾಡುತ್ತಿದ್ದಾರೆ ,ಗುರುಸ್ವಾಮಿಗಳು ಐವತ್ತೇಂಟು ವರ್ಷ ಸೇವೆಯನ್ನು ಮಾಡಿ ಎಲ್ಲಾರಲ್ಲೂ ಬೆರೆಯುತ್ತಿದ್ದರು , ಅನ್ಯ ಸ್ವಾಮೀಜಿಗಳನ್ನು ಶ್ರೀ ಗಳಿಗೆ ಮಹಾರಾಜ್ ಎಂದು ಸಂಬೊದಿಸುತ್ತ ಯಾವದೇ ಪದವಿಯನ್ನು ಪಡೆಯದೆ ನಿರಂತರ ಶ್ರಮವನ್ನು ಮಾಡಿದವರು ,ಸುತ್ತಮುತ್ತಲಿನ ಪ್ರದೇಸವಾದ ತಪಸೇರೆ ಸೇರಿದಂತೆ ಅನೇಕ ದೈವ ಸನ್ನಿಧಿಯಲ್ಲಿ ನಾವು ಅವರ ಶ್ರಮ ಕಾಣಬಹುದು ,ಲೋಕಕ್ಕಾಗಿ ಕಲ್ಯಾಣ ಅವರ ಕಾಯಕ ಅಪಾರ ಜನಪ್ರಿಯತೆ ಗಳಿಸಿತು ,ಕಳೆದ ಐದು ವರ್ಷಗಳ ಕಾಲ ಮುಂಚೆಯ ಅವರು ಲಿಂಗೈಕೆಯಾಬೇಕಾಗಿತ್ತು ಅದರೆ ಅವರ ಶಿಷ್ಯವೃಂದ ಉತ್ತಮ ಸದಾ ಅರೋಗ್ಯ ಪರಿಸ್ಥಿತಿ ಸುದಾರಿಸುವಂತೆ ಮಾಡಿವೆ . ನಾನು ಮತ್ತು ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳ ಇಬ್ಬರು ಸಂದಿಗ್ಧ ಪರಿಸ್ಥಿತಿಯಲ್ಲಿ ಪಟ್ಟವೆರಿದವರು , ಹೆಚ್ ಎ ಎಲ್ ಸಂಸ್ಥೆಯ ವತಿಯಿಂದ ಬಹು ದೊಡ್ಡ ಕೆಲಸ ಮಾಡಿದ್ದಾರೆ ಅವರಿಗೂ ಶುಭವಾಗಲಿ ಎಂದರು .
ಸುತ್ತುರು ಶ್ರೀ ಗಳು ಮಾತನಾಡಿ ಶ್ರೀ ಮಠವು ಪವಿತ್ರ ತಾಣವಾಗಿದೆ ಇಲ್ಲಿ ತನ್ನದೆ ಆದ ಗುರುಪರಂಪರೆಯನ್ನು ಹೊಂದಿದೆ ,ಗುರುಸ್ವಾಮಿಗಳು ಸಹ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ಮಾಡಿ ಸೇವೆ ಮಾಡುತ್ತಿದ್ದರು , ಮಠಕೊಸ್ಕರ ಸಮಿತಿಯನ್ನು ಮಾಡಿ ನಂತರ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳನ್ನು ಅಯ್ಕೆ ಮಾಡಲಾಯಿತು ,ಇವರು ಕಡಿಮೆ ಅವಧಿಯಲ್ಲಿ ಬಹು ಬೇಗನೆ ಅಭಿವೃದ್ಧಿ ಹೊಂದುತ್ತಿರುವ ಮಠಗಳಲ್ಲಿ ಒಂದಾಗುವಂತೆ ಮಾಡಿ ಡಾಕ್ಟರೇಟ್ ಪದವಿಯನ್ನು ಪಡೆದ ಮೊದಲ ಸ್ವಾಮೀಜಿಯಾಗಿದ್ದಾರೆ ,ಗುರುಸ್ವಾಮಿಗಳು ಹಾದಿಯಲ್ಲಿ ನಾವೆಲ್ಲರೂ ಸಾಗೋಣ , ಹರಿಯುವ ನದಿ ನೀರು ಬಣ್ಣ ಬದಲಾದರು ಒಂದೆ ದಿಕ್ಕಿನಲ್ಲಿ ಚಲಿಸುತ್ತದೆ , ಎಂದು ತಿಳಿಸಿದರು.
ಶಾಸಕ ಎಂ.ಆರ್ ಮಂಜುನಾಥ್ ಭಾಗವಹಿಸಿ ಶ್ರೀ ಮಲೆ ಮಹದೇಶ್ವರ ಕೃತಿ ಲೋಕಾರ್ಪಣೆ ಮಾಡಿ ನಂತರ ಮಾತನಾಡಿದ ಗುರುಸ್ವಮಿಗಳ ಪುಣ್ಯಸಂಸ್ಮರಣೋತ್ಸವ ಕಾರ್ಯಕ್ರಮದ ವೇಳೆ ಎಚ್ ಎ ಎಲ್ ಸಂಸ್ಥೆಯ ಸಹಕಾರದೊಂದಿಗೆ 4.70 ಕೋಟಿ ವೆಚ್ಚದಲ್ಲಿ ವಿಧ್ಯಾರ್ಥಿ ನಿಲಯದ ಶಂಕುಸ್ಥಾಪನೆ ಕಾರ್ಯ ಮಾಡುತ್ತಿರುವುದು ಸಂತೋಷದ ಸಂಗತಿಯಾಗಿದೆ. ಗುರುಸ್ವಾಮಿರವರು ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಬೇಡಗಂಪಣರು ಹಾಗೂ ಆದಿವಾಸಿ ಬುಡಕಟ್ಟು ಜನಾಂಗದರಿಗೆ ದಾರಿದೀಪವಾಗಿದ್ದರೂ ಇವರ ಜೀವನವೇ ನಮಗೆ ಅದರ್ಶವಾಗಿದೆ. ಅವರ ಹಾದಿಯಲ್ಲಿಯೇ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿರವರು ತಮ್ಮ ಗುರುಗಳನ್ನು ತಂದೆಯವರ ರೀತಿಯಲ್ಲಿ ನೋಡಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಶಾಸಕರಾದ ಆರ್ ನರೇಂದ್ರ ಅವರು ಮಠಕ್ಕೂ ನಮ್ಮ ಮನೆತನಕ್ಕೂ ಅವಿನಾಭಾವ ಸಂಬಂಧವಿದೆ ,ಶ್ರೀ ಗಳಿಗೂ ನನಗೂ ಇಪ್ಪತ್ತೇರಡು ವರ್ಷಗಳ ಸಂಬಂಧವಿದೆ ನಮ್ಮ ಭಾಗ ಮಾತ್ರವಲ್ಲದೆ ಇನ್ನಿತರ ಪ್ರದೇಶದ ಮಕ್ಕಳಿಗೂ ಸಹ ಶಿಕ್ಷಣ ಕ್ರಾಂತಿಯನ್ನು ಮಾಡಿದ ಕೀರ್ತಿ ಮಠಕ್ಕೆ ಸಲ್ಲುತ್ತದೆ ನಾವು ಮಠದ ಭಕ್ತರು ಸದಾ ಅವರ ಒಳತನ್ನು ಬಯಸಿ ಅವರಿಂದ ಆರ್ಶಿವಾದ ಪಡೆಯೋಣವೆಂದರು ..
ಇದೇ ಸಂದರ್ಭದಲ್ಲಿ ಸಾಲೂರು ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳು ,ಗುರುಮಲ್ಲೇಶ್ವರ ಮಹಾಸಂಸ್ಥಾನ ದಾಸೋಹ ಮಠದ ಶ್ರೀಮಹಾಂತಸ್ವಾಮಿಗಳು,ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮಿಗಳು,ಕುಂದೂರು ಮಠದ ಡಾ.ಶ್ರೀ ಶರತ್ ಚಂದ್ರ ಸ್ವಾಮಿಗಳು,ಹರಿಹರ ವೀರಬಾಲಸ ಪಂಚಮಸಾಲಿ ಲಿಂಗಾಯತ ಮಠದ ಶ್ರೀ ವಚನಾನಂದ ಸ್ವಾಮಿಗಳು,ಸಿದ್ದಗಂಗಾ ಸ್ವಾಮಿಗಳು,ಶ್ರೀ ಪುರುಷೋತ್ತಮ ಸ್ವಾಮಿಗಳು, ಡಾ.ಶ್ರೀ ಮುಮ್ಮಡಿ ಶಿವರುದ್ರಸ್ವಾಮಿಗಳು , ಕೃಷ್ಣಮೂರ್ತಿ, ಮಾಜಿ ಶಾಸಕರುಗಳಾದ ,ಪರಿಮಳ ನಾಗಪ್ಪ ,ಸೇರಿದಂತೆ ಅಂದಿಯೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎ.ಜಿ ವೆಂಕಟಾಚಲಂ, ಹೆಚ್ ಎ ಎಲ್ ಅಧ್ಯಕ್ಷಕರು ಹಾಗೂ ವ್ಯವಸ್ಥಾಪಕರಾದ ನಿರ್ದೇಶಕರಾದ ಡಾ. ಡಿ.ಕೆ ಸುನಿಲ್ , ಎಚ್ ಎ ಎಲ್ ನಿರ್ದೇಶಕರುಗಳಾದ ರವಿ ಕೆ , ಎಂ.ಜಿ ಬಾಲ ಸುಬ್ರಹ್ಮಣ್ಯ ,ಲೇಖಕರು ,ಬಾಹ್ಯಾಕಾಸ ಮತ್ತು ರಕ್ಷಾಣ ವಿಶ್ಲೇಷಕರಾದ ಶ್ರೀ ಗಿರೀಶ್ ಲಿಂಗಣ್ಣ , ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ದತ್ತೇಶ್ ಕುಮಾರ್,ಪ್ರಾಧಿಕಾರದ ಕಾರ್ಯದರ್ಶಿ ರಘು, ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತರು( ನಿ ) ರಾಜೇಂದ್ರ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು…




