Anegundi… The new tower of Sri Veerabhadreshwara Temple is being built and the fire pit festival is being held…

ಗಂಗಾವತಿ… ಇತಿಹಾಸ ಪ್ರಸಿದ್ಧ ಆನೆಗುಂದಿ ಗ್ರಾಮದಲ್ಲಿ ದಿನಾಂಕ ನಾಲ್ಕರಂದು ಸೋಮವಾರದಂದು ಶ್ರೀವೀರಭದ್ರೇಶ್ವರ ದೇವಸ್ಥಾನದ ನೂತನ ಗೋಪುರ ಕಳಸಾರೋಹಣ ಮಹೋತ್ಸವ ಹಾಗೂ ಅಗ್ನಿಕುಂಡ ಅಗ್ನಿ ಪುಟರಾದನೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ದಿವಸ ದೇವಸ್ಥಾನ ಸಮಿತಿ ಅಧ್ಯಕ್ಷ ಡಾಕ್ಟರ್ ಶಂಕ್ರಯ್ಯ ವಿರೂಪಾಕ್ಷಯ್ಯ ಹಿರೇಮಠ. ಸಂಜಯ್ ಹಿರೇಮಠ ಹೇಳಿದರು.
ಭಾರಿ ಮುಖ್ಯ ಕಾರ್ಯಕ್ರಮದ ಅಂಗವಾಗಿ ದಿನಾಂಕ 3 ರಂದು ಮಹಾಗಣಪತಿ ಪೂಜೆ ಪಂಚಾಚಾರ್ಯರ ಧ್ವಜಾರೋಹಣ ರುದ್ರ ಹೋಮ ಆಯೋಜಿಸಲಾಗಿದ್ದು ದಿನಾಂಕ 4 ರಂದು ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ವೀರಭದ್ರೇಶ್ವರ ದೇವರಿಗೆ ಮಹಾ ರುದ್ರಾಭಿಷೇಕ ಗಂಗೆ ಪೂಜೆ ಅಗ್ನಿಕುಂಡ ಮಹೋತ್ಸವ ಮುತ್ತೈದೆಯರಿಗೆ ಉಡಿ ತುಂಬುವಿಕೆ ಸೇರಿದಂತೆ ಉಜ್ಜಯಿನಿ ಜಗದ್ಗುರುಗಳ ಪುರ ಪ್ರವೇಶವನ್ನು ಪೂರ್ಣ ಕುಂಭ ಕಳಸ ಸಕಲ ವಾದ್ಯಗಳಿಂದ ಹಾಗೂ ಕಂಚಿ ಮೇಳ ಪುರವಂತರಿಂದ ಪುರ ಪ್ರವೇಶಿಸಲಾಗುವುದು. ಮಲ್ಲಿಕಾ ಹತ್ತು ಮೂವತ್ತರಿಂದ ಒಂದು ಗಂಟೆಯವರೆಗೆ ಧರ್ಮಸಭೆ ಜರುಗಲಿದ್ದು ಉಜ್ಜಯಿನ್ ಅಧರ್ಮ ಸಿಂಹಾಸನಾದೀಶರಾದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ನಾಡಿನ ಹರ ಗುರು ಚರ ಮೂರ್ತಿಗಳ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿದ್ದು ಶಸ್ತ್ರ ಧಾರಣೆ. ಧರ್ಮ ಉಪದೇಶ ಆಶೀರ್ವಾದ ನಡೆಯಲಿದೆ.
ಈ ಒಂದು ಧಾರ್ಮಿಕ ಕಾರ್ಯಕ್ರಮದಲ್ಲಿ ಸಚಿವರು ಸಂಸದರು ಶಾಸಕರು ಉದ್ಯಮಿಗಳು ಸಮಾಜದ ಮುಖಂಡರು ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಅಪಾರ ಭಕ್ತಾದಿಗಳು ಭಾಗವಹಿಸುವರು ಎಂದು ಹೇಳಿದರು..
Kalyanasiri Kannada News Live 24×7 | News Karnataka
