N Satyanarayana elected as Vice President of Milk Federation

ಕಾರಟಗಿ: ಗಂಗಾವತಿ ಕಾರಟಗಿ ಕನಕಗಿರಿ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘದ ರಾಯಚೂರು ಬಳ್ಳಾರಿ ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಯ ಹಾಲು ಒಕ್ಕೂಟದ ಬಳ್ಳಾರಿ ಜಿಲ್ಲೆಯ ದಿನಾಂಕ :10/07/2025 ರಂದು ನಡೆದ ಚುನಾವಣೆಯಲ್ಲಿ ಎನ್. ಸತ್ಯನಾರಾಯಣ, ರವರು ನಿರ್ದೇಶಕರಾಗಿ ದ್ದರು. 25/07/2025 ರಂದು ನಡೆದ ಅಧ್ಯಕ್ಷರು/ ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕೊಪ್ಪಳ ಶಾಸಕರಾದ ರಾಘವೇಂದ್ರ ಹಿಟ್ನಾಳ್ ಇವರು ಒಕ್ಕೂಟದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ, ಉಪಾಧ್ಯಕ್ಷರಾಗಿ ಎನ್ ಸತ್ಯನಾರಾಯಣ ಕೋಟೆಯ ಕ್ಯಾಂಪ್, ಇವರು ಆಯ್ಕೆಯಾಗಿದ್ದಾರೆ. ನಂತರದಲ್ಲಿ ಮಾಧ್ಯಮದೊಂದಿಗೆ ಒಕ್ಕೂಟದ ನೂತನ ಉಪಾಧ್ಯಕ್ಷರಾದ ಎನ್ ಸತ್ಯನಾರಾಯಣ ಅವರು ಮಾತನಾಡಿ, ಒಕ್ಕೂಟ ನಷ್ಟದಲ್ಲಿದ್ದು ಒಂದು ದುರಸ್ತ ವ್ಯವಸ್ಥೆಯಲ್ಲಿದೆ, ವ್ಯವಸ್ಥೆಯನ್ನು ಸರಿ ದುಗಿಸಲು, ಆಡಳಿತ ಮುಂದಿನ ಒಂದು ಸಭೆಯನ್ನು ಕರೆದು ನಂತರದಲ್ಲಿ ಅಧಿಕಾರಿಗಳ ಸಭೆ ನಡೆಸಿ, ಒಕ್ಕೂಟದ ವ್ಯವಸ್ಥೆ ಬಗ್ಗೆ ಚರ್ಚಿಸಿ, ಸಂಘದಲ್ಲಿ ದುಡಿಯುವ ಕಾರ್ಯದರ್ಶಿಗಳಿಗೆ, ಸಂಘದ ಸುವ್ಯವಸ್ಥೆಯಿಂದ ಹಾಲು ಸರಬರಾಜು ಮಾಡುವಂತ ರೈತರಿಗೆ ಒಕ್ಕೂಟದಿಂದ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದರು, ಈ ಸಂದರ್ಭದಲ್ಲಿ ಒಕ್ಕೂಟದ ಮಾಜಿ ಅಧ್ಯಕ್ಷರಾದ ಎಮ್ ಸತ್ಯನಾರಾಯಣ, ಒಕ್ಕೂಟದ ಮಾಜಿ ಅಧ್ಯಕ್ಷರು ನಿರ್ದೇಶಕರು ಸಹಕಾರ ಸಂಘದ ಅಧ್ಯಕ್ಷರು ನಿರ್ದೇಶಕರು ಕಾರ್ಯದರ್ಶಿಗಳು ಹಾಗೂ ಒಕ್ಕೂಟದ ಅಧಿಕಾರಿಗಳು ಭಾಗಿಯಾಗಿದ್ದರು.
Kalyanasiri Kannada News Live 24×7 | News Karnataka
