The park next to Tiptur Lake has become a haven for lovers of the jungle, with plants growing in abundance and lacking in cleanliness.

ತಿಪಟೂರು. ನಗರದ ಕೆರೆಯ ಪಕ್ಕದಲ್ಲಿರುವ ಉದ್ಯಾನವನ ಗಿಡಗಂಟೆಗಳು ಬೆಳೆದು ಮಧ್ಯಪ್ರಿಯರ ಹಾವಳಿ ಹಾಗೂ ಕಾಲೇಜುಗಳಿಗೆ ಚಕ್ಕರ್ ಹಾಕಿ ಪ್ರೇಮಿಗಳು ಪಾರ್ಕಿನಲ್ಲಿ ಸುತ್ತಾಟ ಮಾಡುತ್ತಿರುವುದು ಸಾರ್ವಜದಕರ ಆಕ್ರೋಶಕ್ಕೆ ಕಾರಣವಾಗಿದೆ
ಸರ್ಕಾರ ಸಾರ್ವಜನಿಕ ಹಿತದೃಷ್ಟಿಯಿಂದ 2 ಕೋಟಿ ರೂ ವೆಚ್ಚದಲ್ಲಿ ಕೆರೆಯ ಸಮೀಪ ವಾಯುವಿಹಾರ ಉತ್ತಮ ಪರಿಸರಕ್ಕಾಗಿ ಮಕ್ಕಳ ಅಟಿಕೆಗಳ ನಿರ್ಮಿಸಿ ಅಲ್ಲಲ್ಲಿ ವಿಶ್ರಾಂತಿ ಗೃಹಗಳು ಮತ್ತು ಶೌಚಾಲಯ ಉದ್ದನೆಯ ಪಾದಾಚಾರಿ ಮಾರ್ಗ ನಿರ್ಮಿಸಿ ಕೊಟ್ಟಿದ್ದಾರೆ ಆದರೆ ನಿರ್ವಹಣೆ ಕೊರತೆಯಿಂದ ದಿನನಿತ್ಯ ವಾಯು ವಿಹಾರಕ್ಕೆ ಬರುವ ಹಿರಿಯ ನಾಗರಿಕರಿಗೆ ಸಾರ್ವಜನಿಕರಿಗೆ ಹಾಗೂ ಸಂಜೆ ಸಮಯದಲ್ಲಿ ಮಕ್ಕಳು ತಂದೆ ತಾಯಿಯ ಜೊತೆ ಆಟವಾಡಲು ಬರುವ ಮಕ್ಕಳಿಗೂ ತೊಂದರೆ ಅನುಭವಿಸುವಂತಾಗಿದೆ.
ಆದರೆ ನಗರಸಭೆಯ ನಿರ್ಲಕ್ಷ್ಯದಿಂದ ತಿಪಟೂರು ಕೆರೆಯ ಪಕ್ಕದಲ್ಲೇ ಇರುವ ಪಾರ್ಕಿನಲ್ಲಿ ಸಾರ್ವಜನಿಕರಿಗೆ ರಕ್ಷಣೆ ಇಲ್ಲದೆ ಸೊರಗಿದೆ. ಉತ್ತಮವಾದ ವಾತಾವರಣ ಸೌಕರ್ಯ ವಿದ್ದರೂ ಸಾರ್ವಜನಿಕರಿಗೆ ಅನಾನುಕೂಲವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಇನ್ನಾದರೂ ಕೂಡ ನಗರಸಭೆ ಅಧಿಕಾರಿಗಳು. ಉದ್ಯಾನವನದಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆಯಾಗಲ್ಲಿ ಉದ್ಯಾನ ಪಾಲಕರಾಗಲಿ ಅಥವಾ ಕಣ್ಗಾವಲು ಸಿಬ್ಬಂದಿಯಾಗಲಿ ನೇಮಿಸಿ ಉದ್ಯಾನವನದ ಕಡೆ ಗಮನಹರಿಸಿ ಸಾರ್ವಜನಿಕರಿಗೆ ವಯೋವೃದ್ದರಿಗೆ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕೆಂದು ತಿಳಿಸಿದರು.
ವರದಿ ಮಂಜು ಗುರುಗದಹಳ್ಳಿ