Breaking News

ಶಿಲ್ಪಾ ಶ್ರೀನಿವಾಸ್ ” ಚಿತ್ರೀಕರಣ ಆರಂಭ

Shilpa Srinivas' shooting begins


Screenshot 2025 07 24 17 56 04 39 E307a3f9df9f380ebaf106e1dc980bb66259703922622344457 1024x555

ಬೆಂಗಳೂರು : ಸ್ನೇಹಾಲಯಂ ಕ್ರಿಯೇಶನ್ಸ್ ಅರ್ಪಿಸುವ ಹಾರರ್, ಸಸ್ಪೆನ್ಸ್ ,ಥ್ರಿಲ್ಲರ್ “ಶಿಲ್ಪಾ ಶ್ರೀನಿವಾಸ್”ಎಂಬ ಕನ್ನಡ ಚಲನಚಿತ್ರದ ಚಿತ್ರೀಕರಣ ಹೊಸಕೋಟೆಯ ಗಟ್ಟಿಗನಬ್ಬೆ ಸುತ್ತಮುತ್ತ ಭರದಿಂದ ಸಾಗಿದೆ.
ಖ್ಯಾತ ನಿರ್ಮಾಪಕರೂ, ೮೦೦ಕ್ಕೂ ಮಿಕ್ಕಿ ಚಲನಚಿತ್ರಗಳ ವಿತರಕರೂ, ಪ್ರಸ್ತುತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷರೂ ಆದ ಶಿಲ್ಪಾ ಶ್ರೀನಿವಾಸ್ ಅವರದೇ ಹೆಸರಿನ ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿದ್ದು ಅವರು ಕ್ಯಾಮರಾ ಗುಂಡಿ ಒತ್ತಿದರೆ, ನಟ ಹಾಗೂ ಸಂಕಲನಕಾರ ನಾಗೇಂದ್ರ ಅರಸ್ ಕ್ಲಾಪ್ ಮಾಡಿ ಚಿತ್ರೀಕರಣಕ್ಕೆ ಚಾಲನೆ ನೀಡದರು. ಸಿನಿಮಾ ಇಂಡಸ್ಟಿçಯಲ್ಲಿ ಒಂದಿಷ್ಟು ಜನ ಸಿನಿಮಾ ರಂಗವನ್ನು ತನ್ನ ತಾಯಿ ಎಂದು ಭಾವಿಸುತ್ತಾರೆ. ಕಲಾಮಾತೆ ಎಂದು ಆರಾಧಿಸುತ್ತಾರೆ . ಇನ್ನು ಕೆಲವರು ಶೋಕಿಗಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು ತನ್ನ ತಾತ ,ಮುತ್ತಾತ, ಅಪ್ಪ-ಅಮ್ಮ ಸಂಪಾದನೆ ಮಾಡಿಕೊಟ್ಟ ಹಣವನ್ನು ನೀರುಪಾಲು ಮಾಡುತ್ತಾರೆ. ಕಲಾಮಾತೆಯನ್ನು ಕೀಳಾಗಿ ನೋಡುತ್ತಾರೆ. ಇಂಥವರಿAದ ಸಿನಿಮಾರಂಗ ಅಧೋಗತಿಗೆ ಇಳಿಯುತ್ತಿದೆ. ಇದನ್ನು ಮಟ್ಟ ಹಾಕಲು ಕಲಾಮಾತೆಯ ನಿಜವಾದ ಆರಾಧಕ ಏನೆಲ್ಲಾ ಮಾಡುತ್ತಾನೆ ಎಂಬ ಕಥಾ ಹಂದರವಿದೆ. ಹೊಸಕೋಟೆ, ಚಿಕ್ಕಬಳ್ಳಾಪುರ, ಗಾಂಧಿನಗರದಲ್ಲಿ ಒಟ್ಟು ಎರಡು ಹಂತಗಳಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ನಿರ್ದೇಶಕ ಆರ್.ಕೆ.ಗಾಂಧಿ ಹೇಳಿದರು.
ತಾರಾಗಣದಲ್ಲಿ- ಕಿಶೋರ್ ಕಾಸರಗೋಡು, ಮಿಸ್ಸೆಸ್ ಇಂಡಿಯಾ ಮತ್ತು ಇಂಟರನ್ಯಾಷನಲ್ ಕ್ವೀನ್ ಟೈಟಲ್ ಗಳನ್ನು ಗೆದ್ದು ಈಗಾಗಲೇ ಒಂದಿಷ್ಟು ಕನ್ನಡ, ತೆಲಗು ಚಿತ್ರಗಳಲ್ಲಿ ನಾಯಕಿಯಾಗಿರುವ ಸ್ವಾತಿ ಲಿಂಗರಾಜ್ ಪ್ರಮುಖ ಪಾತ್ರದಲ್ಲಿದ್ದಾರೆ. ,ಪ್ರಿಯಾಂಕ, ಶೋಭರಾಜ್, ನಾಗೇಂದ್ರ ಅರಸ್, ಕಿರಣಕುಮಾರ್ ಗಟ್ಟಿಗನಬ್ಬೆ, ಸಿ.ಟಿ.ಜಯರಾಮ್, ಹೊಸಕೋಟೆ ಶಿವಕುಮಾರ್, ಲೋಕೇಶ್, ಬೆಂಗಳೂರು ಮನು, ಮಾಸ್ಟರ್ ಮನ್ವಿತ್, ಮಾಸ್ಟರ್ ಅಭ್ಯಂತ್, ಭಕ್ತರಹಳ್ಳಿ ರವಿ, ಮೊದಲಾದವರಿದ್ದು ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ‘ಮುಗಿಲ ಮಲ್ಲಿಗೆ’,’ಲಿಲ್ಲಿ’ ಸಿನಿಮಾದ ಯುವ ನಿರ್ದೇಶಕ, ಹೊಸ ಪ್ರಯೋಗಗಳಿಗೆ ಹೆಸರಾದ ಆರ್ ಕೆ ಗಾಂಧಿ ಕಥೆ ,ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಪ್ರಮೋದ್ ಭಾರತೀಯ ಛಾಯಾಗ್ರಹಣ, ಅನಿರುದ್ಧ ಶಾಸ್ತ್ರಿ ಸಂಗೀತ, ಪ್ರತಾಪ್ ಭಟ್ ಸಾಹಿತ್ಯ, ಥ್ರಿಲ್ಲರ್ ಮಂಜು ಸಾಹಸ, ವಿನಯ್ ಜಿ ಆಲೂರ ಸಂಕಲನ, ಮೋಹನ್ ಕುಮಾರ್ ಪ್ರಸಾಧನ, ಇಂದ್ರಕುಮಾರ್ ಸ್ಥಿರಚಿತ್ರ, ಮಲ್ಲಿಕಾರ್ಜನ್ ಕಲಾ ನಿರ್ದೇಶನ , ಎಂ ಜಿ ಕಲ್ಲೇಶ್, ಡಾ.ಪ್ರಭು ಗಂಜಿಹಾಳ , ಡಾ ವೀರೇಶ ಹಂಡಿಗಿ ಪಿ.ಆರ್.ಓ ಆಗಿದ್ದಾರೆ. ಆದಷ್ಟು ಬೇಗ ಚಿತ್ರವನ್ನು ತೆರೆಗೆ ತರುವ ಆಲೋಚನೆ ನಿರ್ದೇಶಕರು, ಚಿತ್ರತಂಡದ್ದಾಗಿದೆ.
**
-ಡಾ.ಪ್ರಭು ಗಂಜಿಹಾಳ
ಮೊ.೯೪೪೮೭೭೫೩೪೬

About Mallikarjun

Check Also

screenshot 2025 12 17 18 45 28 37 e307a3f9df9f380ebaf106e1dc980bb6.jpg

ಉದ್ಯೋಗ ಖಾತ್ರಿ ಸೇರಿ ಮಹತ್ವದ ಯೋಜನೆಗಳ ಬದಲಾವಣೆಯಿಂದ ಬಡವರಿಗೆ ಅನ್ಯಾಯ: ಎಐಸಿಸಿ ಎಸ್.ಸಿ ವಿಭಾಗದ ರಾಷ್ಟ್ರೀಯ ಸಂಯೋಜಕ ಡಾ. ಆನಂದ್ ಕುಮಾರ್

ಉದ್ಯೋಗ ಖಾತ್ರಿ ಸೇರಿ ಮಹತ್ವದ ಯೋಜನೆಗಳ ಬದಲಾವಣೆಯಿಂದ ಬಡವರಿಗೆ ಅನ್ಯಾಯ: ಎಐಸಿಸಿ ಎಸ್.ಸಿ ವಿಭಾಗದ ರಾಷ್ಟ್ರೀಯ ಸಂಯೋಜಕ ಡಾ. ಆನಂದ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.