
One of the Kukanur,,! Adakka leaf plates, cloth bags manufacturing business,,
ಪರಿಸರ ಪೂರಕ ಉತ್ಪನ್ನಗಳ ತಯಾರಕ ನಾಗರಾಜ ದೇಸಾಯಿ,,
ವರದಿ : ಪಂಚಯ್ಯ ಹಿರೇಮಠ.
: ಗತ ಕಾಲದಲ್ಲಿ ಮನುಷ್ಯ ಸುಮಾರು ಎಂಬತ್ತರಿಂದ ನೂರು ವರ್ಷಗಳ ಆರೋಗ್ಯ ಜೀವನ ಸಾಗಿಸ್ತಿದ್ದ, ಕಾಲ ಕ್ರಮೇಣ ಐವತ್ತರಿಂದ ಅರವತ್ತಕ್ಕೆ ಬಂದು ನಿಂತಿದ್ದಾನೆ.
ಹೌದು,,!
ಅವರೆಲ್ಲಾ ನೂರಾರು ವರ್ಷ ಆರೋಗ್ಯ ಪೂರಾಣವಾಗಿರಲೂ ಕಾರಣ ಅವರ ಆಹಾರ ಪದ್ದತಿ, ದಿನ ನಿತ್ಯ ಮೈಮುರಿದ ನಡೆಸುವ ಜೀವನ, ನಿತ್ಯದ ಬಳಕೆಯಲ್ಲಿ ಬಳಸುವ ವಸ್ತುಗಳು ಹೀಗೆ ಹಲವಾರು ಆಯಾಮಗಳಲ್ಲಿ ನೋಡಿದಾಗ ಅವರ ಬದುಕಿನ ಪದ್ದತಿಗೆ ಹಾಗೂ ಪರಿಸರಕ್ಕೆ ಒಂದು ಮಹತ್ವದ ಕಾಲ ಇತ್ತು ಆಗ.
ಆದರೆ ಇಂದಿನ ವೈಜ್ಞಾನಿಕ ಯುಗದಲ್ಲಿ ಪಾಸ್ಟ್ ಪುಡ್, ಮನೆ ಬಳಕೆಯಲ್ಲಿ ಹೆಚ್ಚಿದ ಪ್ಲಾಸ್ಟಿಕ್ ಹಾವಳಿ, ದಣಿವಿಲ್ಲದ ಉದ್ಯೋಗದಿಂದ ಆರೋಗ್ಯ ಮಟ್ಟ ಕುಸಿಯುತ್ತಾ, ಹಲವಾರು ರೋಗ ರುಜಿನಗಳೊಂದಿಗೆ, ಇಂದು ಕಾಯಿಲೆಗಳೇ ಇಲ್ಲದ ಸಾವಿಗೆ ನೂರಾರು ಸಾವಿರಾರು ಸಂಖ್ಯೆಯಲ್ಲಿ ಮನುಷ್ಯ ಸಾವಿಗಿಡಾಗುತ್ತಿದ್ದಾನೆ.
ಹೌದು,, ಮಾರಕವಾಗುವ ಪ್ಲಾಸ್ಟಿಕ್ ಬಳಕೆಯನ್ನು ತಡೆಗಟ್ಟಲೆಂದೇ ಪಟ್ಟಣದಲ್ಲೊಬ್ಬ ಉಪನ್ಯಾಸಕರು ತಮ್ಮ ಸರಕಾರಿ ಉದ್ಯೋಗಕ್ಕೆ ಗುಡ್ ಬೈ ಹೇಳಿ ಪರಿಸರ ಪೂರಕ ವಸ್ತುಗಳ ತಯಾರಿಕೆಗೆ ಪಣ ತೊಟ್ಟು ಭೂಮಿ ಎಂಟರ್ ಪ್ರೈಸಸ್ ಎನ್ನುವ ನಾಮಾಂಕಿತದೊಂದಿಗೆ ನಾಗರಾಜ ಶಿವಣ್ಣ ದೇಸಾಯಿಯವರ ಒಂದು ಕಿರು ಕೈಗಾರಿಕಾ ಉಧ್ಯಮ ಪ್ರಾರಂಭಿಸಿ ಹತ್ತಾರು ದುಡಿಯುವ ಕೈಗಳಿಗೆ ಆಸರೆಯಾಗಿದ್ದಾರೆ.
ಇವರು ಪಟ್ಟಣದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಉಪನ್ಯಾಸಕರಾಗಿ ಪ್ರತಿ ತಿಂಗಳು 80ಸಾವಿರ ರೂಪಾಯಿ ಬರುವ ಸರಕಾರಿ ನೌಕರಿಗೆ ವಿದಾಯ ಹೇಳಿ ಪಟ್ಟಣದ ಸುಪ್ರಸಿದ್ದ ಮಹಾಮಾಯ ದೇವಿಯ ದೇವಸ್ಥಾನದ ಹಿಂದೆ ಇರುವ ಇವರ ಮನೆಯ ಅಂಗಳದಲ್ಲಿ ಭೂಮಿ ಎಂಟರ್ ಪ್ರೈಸಸ್ ನಡೆಸುತ್ತಾ ಪರಿಸಕ್ಕೆ ಮಾರಕವಾದ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ಪರಿಸರ ಪೂರಕ ಅಡಕೆ ಮರದ ಎಲೆಗಳಿಂದ ಊಟ-ಉಪಹಾರದ ತಟ್ಟೆ, ಲೋಟಗಳನ್ನು ವಿವಿಧ ಆಕಾರ ಮತ್ತು ಗಾತ್ರಗಳಲ್ಲಿ ತಯಾರಿಸುತ್ತಾರೆ. ಇದಲ್ಲದೇ ವಿವಿಧ ಗಾತ್ರದ ಪರಿಸರ ಪೂರಕ ಬಟ್ಟೆಯ ಚೀಲ ( ಹ್ಯಾಂಡ್ ಕವರ್)ಗಳನ್ನು ತಯಾರಿಕೆ ಮಾಡಿ ದಾವಣಗೆರೆ, ಹರಿಹರ, ಉಡುಪಿ, ಮಂಗಳೂರು, ಬೀದರ, ಕಲಬುರ್ಗಿ, ಬಾಗಲಕೋಟ, ಬಳ್ಳಾರಿ, ಬೆಂಗಳೂರು ಸೇರಿದಂತೆ ಬೇರೆ ಬೇರೆ ರಾಜ್ಯಗಳಿಗೆ ರಪ್ತು ಮಾಡುತ್ತಿದ್ದಾರೆ.
ತಟ್ಟೆಗಳಿಗೆ ಉಪಯೋಗಿಸಿದ ಅಡಿಕೆ ಮರದ ಕಚ್ಚಾ ವಸ್ತುಗಳನ್ನು ಗೊಬ್ಬರವಾಗಿ ಮಾರ್ಪಾಡು ಮಾಡಿ ಕೃಷಿಗೆ ಯೋಗ್ಯ ಗೊಬ್ಬರವನ್ನಾಗಿಸಿ ಮಾರಾಟ ಮಾಡುತ್ತಾರೆ. ಹಾಗೂ ಬಟ್ಟೆಗಳಿಂದ ತಯಾರಿಸುವ ಚೀಲಗಳಿಂದ ಉಳಿದ ಬಟ್ಟೆಯ ಕಚ್ಚಾ ವಸ್ತುಗಳಿಂದ ವಿವಿಧ ಅಲಂಕಾರಿಕ ಹಾರಗಳನ್ನು ತಯಾರಿಸುತ್ತಾರೆ. ಒಟ್ಟಾರೇ ಇವರು ತಯಾರಿಕೆ ಎಲ್ಲಾ ಉತ್ಪನ್ನಗಳು ಪರಿಸರಕ್ಕೆ ಪೂರಕವಾಗಿದ್ದು ಖರೀದಿಗಾಗಿ ಹಬ್ಬ ಹರಿದಿನಗಳಂದು ಇವರಿಗೆ ಬಿಡುವಿಲ್ಲದ ಬೇಡಿಕೆ ಬರುತ್ತದೆ ಎನ್ನುತ್ತಾರೆ ನಾಗರಾಜ ಅವರು.
ತಾವು ತಯಾರಿಸುವ ತಟ್ಟೆಗಳು ಗ್ರಾಹಕರಿಗೆ ಬೇಕಾದ ಸೈಜಿನಲ್ಲಿ ದೊರೆಯುತ್ತಿದ್ದು, ಪ್ರಸಾದದ ಬಟ್ಟಲು ಸೇರಿದಂತೆ ವಿವಿಧ ಬಗೆಯಲ್ಲಿ ತಟ್ಟೆಗಳನ್ನು ತಯಾರಿಸಲಾಗುತ್ತದೆ. ಬಟ್ಟೆಯ ಚೀಲಗಳು ದಿನ ನಿತ್ಯದ ಬಳಕೆಯಲ್ಲಿ ಬೇಕಾಗುವ ವಿಧದ ಸೈಜಿನಲ್ಲಿ ದೊರೆಯುತ್ತಿದ್ದು, ಬಟ್ಟೆಯ ಬ್ಯಾಗ್ ಗಳ ಮೇಲೆ ಹುಟ್ಟು ಹಬ್ಬ, ಮದುವೆ, ಅಂಗಡಿಯ ಹೆಸರುಗಳನ್ನು ಮುದ್ರಣ ಮಾಡಿ ಕೊಡಲಾಗುತ್ತಿದ್ದು, ಕಿರು ಉದ್ಯಮ ಪ್ರಾರಂಭಿಸುವವರು ಭೇಟಿಯಾಗಬಹುದು ಎಂದು ತಿಳಿಸಿದ್ದಾರೆ. ಸಂಪರ್ಕಿಸಬಹುದಾದ ಮೊ. ಸಂಖ್ಯೆ -+91 94813 06097 ಈ ನಂಬರ್ ಗೆ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ.