Breaking News

376 ನೇ ಶಿವಾನುಭವ ಗೋಷ್ಠಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಂಗೀತ ಕಾರ್ಯಕ್ರಮ

376th Shivanubhava Concert: Talent Award for Students

ಯಲಬುರ್ಗಾ : ಗುರು ಸ್ಮರಣೆ ಗುರು ಮಹತ್ವ ಬೆಳಕು ವಿಷಯ ಚಿಂತನ ಗೋಷ್ಠಿಯಲ್ಲಿ ಮಾತನಾಡಿದ ಶ್ರೀ ಗಳು ನಮ್ಮಲ್ಲಿರುವ ಅಜ್ಞಾನವನ್ನು ಹೋಗಲಾಡಿಸಿ ಸುಜ್ಞಾನದ ಕಡೆಗೆ ಕರೆದುಕೊಂಡು ಹೊಗುವದೆ ಗುರುವಿನ ಕಾರ್ಯವಾಗಿದೆ, ಗುರುವಿನ ಮಹತ್ವ ಅಪಾರವಾಗಿದೆ ಎಂದು ಗಿಣಿಗೇರಿಯ ಸರಸ್ವತಿ ಪೀಠದ ಶ್ರೀಕಂಠಸ್ವಾಮೀಜಿ ಅವರು ದಮ್ಮೂರ ಗ್ರಾಮದ ಶ್ರೀ ಭೀಮಾಂಬಿಕಾದೇವಿ ಶಿವಾನುಭವ ಸೇವಾ ಸಮಿತಿಯ ೩೭೬ ನೇ ಶಿವಾನುಭವ ಗೋಷ್ಠಿಯಲ್ಲಿ ಸಸಿಗೆ ನೀರು ಹಾಕಿ ಚಾಲನೆ ನೀಡಿ ಮಾತನಾಡಿದರು. ಗುರು ಸಮುದ್ರ ಇದ್ದ ಹಾಗೆ, ಅವರಲ್ಲಿರುವ ಜ್ಞಾನವನ್ನು ಎಷ್ಟೂ ಸಂಪಾದನೆ ಮಾಡಿದರು ಕಾಲಿಯಾಗುವುದಿಲ್ಲ ,ಆದ್ದರಿಂದ ನಾವೆಲ್ಲರೂ ಗುರುಗಳ ಮಾರ್ಗದರ್ಶನದಲ್ಲಿ ಸಾಗಬೇಕು ನಾವು ಹತ್ತು ದೇವರು ಪೂಜಿಸುವುದಕ್ಕಿಂತ ಹೆತ್ತ ತಂದೆ ತಾಯಿಯವರನ್ನು ಪೂಜಿಸಬೇಕು ಎಂದು ಬಿಸರಳ್ಳಿಯ ಯುವ ಸಾಹಿತಿ ಪವನ ಕುಮಾರ ಕಮ್ಮಾರ ಮಾತನಾಡಿದರು. ವಿದ್ಯಾರ್ಥಿಗಳು ಕಲಿಯುವ ಹಂತದಲ್ಲಿ ಕಲಿಯುವ ವಯಸ್ಸಿನಲ್ಲಿ ಓದುವ ಹವ್ಯಾಸವನ್ನು ರೂಡಿಸಿಕೊಂಡಾಗ ಉತ್ತಮ ಅಂಕ ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಇದರಿಂದ ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಎಂದು ದಮ್ಮೂರಿನ ಪ್ರೌಢಶಾಲೆಯ ಮುಖ್ಯ ಗುರು ಎಫ್.ಎಂ. ಕಳ್ಳಿ ಅವರು ಮಾತನಾಡಿದರು. ಗುರುಗಳಿಂದ ಮಾರ್ಗದರ್ಶನ ಜ್ಞಾನ ಪಡೆದುಕೊಂಡು ಅವರನ್ನು ಮೀರಿಸುವಂತೆ ಬೆಳೆಯಬೇಕು ಆಗ ಗುರುಗಳು ಆನಂದದಿಂದ ಇರಲು ಸಾಧ್ಯ ಎಂದು ವಕೀಲರಾದ ಮಲ್ಲನಗೌಡ ತರಲಕಟ್ಟಿ ಅವರು ಮಾತನಾಡಿದರು. ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅವರಿಗೆ ಪ್ರೋತ್ಸಾಹ ಮಾಡಿ ಅವರ ವಿದ್ಯಾಭ್ಯಾಸ ಉನ್ನತ ಮಟ್ಟಕ್ಕೆ ಸಾಗಲಿ ಎಂದು ಶಿವಾನುಭವ ಸೇವಾ ಸಮಿತಿಯಿಂದ ಕಾರ್ಯಕ್ರಮ ಪ್ರತಿ ವರ್ಷ ಆಯೋಜನೆ ಮಾಡುತ್ತಿದೆ ಇದರ ಸದುಪಯೋಗವನ್ನು ಪಡೆಯಬೇಕು ಎಂದು ಪ್ರಾಸ್ತವಿಕವಾಗಿ ಗುರುಮೂರ್ತಿ ಡಿ ಬಡಿಗೇರ ಅವರು ಮಾತನಾಡಿದರು. ಶ್ರೀಮಠದ ಒಡೆಯರಾದ ಹನುಮಂತಪ್ಪಜ್ಜ ಧರ್ಮ ಮಠ ಹಾಗೂ ಶರಣಯ್ಯ ಹಿರೇಮಠ ಸಾನಿಧ್ಯವನ್ನು ವಹಿಸಿದ್ದರು. ಶ್ರೀ ಭೀಮಾಂಬಿಕಾದೇವಿ ಶಿವಾನುಭವ ಸೇವಾ ಸಮಿತಿ ಅಧ್ಯಕ್ಷ ಶರಣಬಸಪ್ಪ ದಾನಕೈ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ನಿಡುಗುಂದಿಯ ಮು.ಗುರು ಆನಂದ ಸೋಬಗಿನ, ದಮ್ಮೂರಿನ ಮು.ಗುರು ಕನಕಪ್ಪ ಕಂಬಳಿ, ಮಹದೇವಪ್ಪ ಕಮ್ಮಾರ, ದೇವೇಂದ್ರಪ್ಪ ಬಡಿಗೇರ, ಅಮರೇಶ ಬಡಿಗೇರ, ಐಇಸಿ ಸಂಯೋಜಕ ಶರಣಪ್ಪ ಹಾಲಕೇರಿ, ರಸೂಲ ಸಾಬ ಹಿರೇಮನಿ,ಡಾ.ಪ್ರಕಾಶ ರಾವಣಕಿ,ರಷೀದ ಮಿಯಾ ಖಾಜಿ, ನಿಂಗಪ್ಪ ಹಳ್ಳಿಕೇರಿ, ನೀಲಕಂಠಪ್ಪ ರೋಡ್ಡರ,ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೊಳಿಯಮ್ಮ ಹಳ್ಳಿಕೇರಿ, ಈರಪ್ಪ ರಾವಣಕಿ, ಕಳಕಪ್ಪ ಹಡಪದ,ಚಂದಪ್ಪ ಜಕ್ಕಲಿ,ಯಮನೂರಪ್ಪ ಹಳ್ಳಿಕೇರಿ,ಭೀಮಣ್ಣ ಜರಕುಂಟಿ,ಭೀಮಣ್ಣ ಹವಳಿ, ಸಂಗಯ್ಯ ಶಾಸ್ತ್ರಿಮಠ, ಅಂದಾನಯ್ಯ ಹಿರೇಮಠ , ಶರಣಯ್ಯ ದ್ಯಾಮನಗೌಡ್ರ, ಗಣೇಶ ನಿಡಗುಂದಿ ಸೇರಿದಂತೆ ಇತರರು ಇದ್ದರು ಕನ್ನಡ ಕೋಗಿಲೆ ಅರ್ಜುನ ಇಟಗಿ, ಹಾಗೂ ಸಂಗೀತ ಕಲಾವಿದ ಡಿ ಮೌನೇಶ ಬಡಿಗೇರ ಇವರಿಗೆ ಸಂಗೀತ ಕಲಾ ರತ್ನ ಪ್ರಶಸ್ತಿಯನ್ನು ಸಮಿತಿವರಿಂದ ನೀಡಲಾಯಿತು . ನಂತರ ಕನ್ನಡ ಕೋಗಿಲೆ ಅರ್ಜುನ ಇವರಿಂದ ಸಂಗೀತ ಕಾರ್ಯಕ್ರಮ ಜರುಗಿತು.ನಂತರ ಅನ್ನ ಸಂತರ್ಪಣೆ ಜರುಗಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

About Mallikarjun

Check Also

ಶ್ರೀ ಶಾರದಾಂಬೆಗೆ ಶರನ್ನವರಾತ್ರಿಯ ಸಂಭ್ರಮ.

Sharannavarathri celebrations for Shri Sharadambrama ಗಂಗಾವತಿ: ಸರ್ವ ಜನಾಂಗದ ಮಹಿಳೆಯರ ಪಾಲ್ಗೊಳ್ಳುವಿಕೆಯಿಂದಾಗಿ ಶಾರದಾ ಶರನ್ನವರಾತ್ರಿಯ ಪ್ರಥಮ ದಿನದಂದು ದಾಖಲೆಯ …

Leave a Reply

Your email address will not be published. Required fields are marked *