We all need to develop a questioning attitude: H Viranna
ಅಖಿಲ ಭಾರತ ಕಮ್ಯುನಿಸ್ಟ್ ಪಕ್ಷವು ( ಸಿಪಿಐ ) ಯಾವುದೇ ರೀತಿ ರಾಜಕೀಯ ಮಾಡದೆ ಕಮ್ಯೂನಿಸ್ಟ್ ಪಕ್ಷವು ದೀನ ದಲಿತರ ಮತ್ತು ಸಮಾಜದ ತುಳಿತಕ್ಕೊಳಗಾದ ವ್ಯಕ್ತಿಯ ಪರವಾಗಿ ಕೆಲಸ ಮಾಡುತ್ತೇವೆ ಎಂದು ಸಿಪಿಐ ಪಕ್ಷದ ವಿಜಯನಗರ ಜಿಲ್ಲೆಯ ಕಾರ್ಯದರ್ಶಿ ಹೆಚ್ ವಿರಣ್ಣ ಹೇಳಿದರು.

ಕೊಟ್ಟೂರು : ಪಟ್ಟಣದ ರೇಣುಕಾ ಸಭಾಂಗಣದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದಿಂದ ಎರಡನೇ ತಾಲೂಕು ಸಮ್ಮೇಳನವನ್ನು ಬುಧವಾರ ಏರ್ಪಡಿಸಿದ್ದರು.
ವೇದಿಕೆಯ ಮೇಲೆ ಇರುವ ಎಲ್ಲಾ ಕಾಮ್ರೆಡ್ ಮತ್ತು ಸಂಗಾತಿಗಳಿಂದ ಗಿಡಕ್ಕೆ ನೀರು ಹಾಕುವ ಮೂಲಕ ಸಮ್ಮೇಳನಕ್ಕೆ ಚಾಲನೆ ದೊರಕಿತು.
ನಂತರ ಕಮ್ಯುನಿಸ್ಟ್ ಪಾರ್ಟಿಯ ವಿಜಯನಗರ ಜಿಲ್ಲಾ ಕಾರ್ಯದರ್ಶಿಯಾದ ಹೆಚ್ ವಿರಣ್ಣ ಅವರು ಮಾತನಾಡಿ ಕೊಟ್ಟೂರು ತಾಲೂಕು ಘೋಷಣೆಯಾಗಿ ಸುಮಾರು ಐದಾರು ವರ್ಷ ಕಳೆದರೂ ಯಾವುದೇ ರೀತಿಯ ಕಚೇರಿಗಳು ತೆರೆದಿಲ್ಲ ಇದರಿಂದ ಸಾಕಷ್ಟು ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ಕೊಟ್ಟೂರು- ಕೂಡ್ಲಿಗಿ ತಾಲೂಕಿನ ಕಚೇರಿಗಳಿಗೆ ಪ್ರತಿನಿತ್ಯ ಪರದಾಡುತ್ತಿದ್ದಾರೆ. ಪಟ್ಟಣದಲ್ಲಿ ಇನ್ನು ಸರಿಯಾಗಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಎಷ್ಟು ಬಡವರಿಗೆ ಸರ್ಕಾರದ ವಸತಿ ಯೋಜನೆಗಳು ಬಡವರಿಗೆ ಸಿಗುತ್ತಿಲ್ಲ ಹಾಗೂ ಕಟ್ಟಡ ಕಾರ್ಮಿಕರಿಗೆ ಯಾವುದೇ ರೀತಿ ಸಾಮಾಜಿಕ ಭದ್ರತೆ ಸಿಗುತ್ತಿಲ್ಲ .ಬಡವರಿಗೆ ಎಂದು ಸರ್ಕಾರವು ಹಲವು ಯೋಜನೆಗಳು ತಂದಿವೆ ಆದರೆ ಈ ಯೋಜನೆಗಳು ಬಡವರ ಕೈ ಸೇರುತ್ತಿಲ್ಲ ಸರ್ಕಾರ ಸೌಲಭ್ಯಗಳು ಪಡೆಯಬೇಕಾದರೆ ನಮ್ಮ ಹೋರಾಟ ನಿರಂತರವಾಗಿ ಇದ್ದರೆ ಮಾತ್ರ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಬಹುದು ಮತ್ತು ಪ್ರಶ್ನಿಸುವ ಮನೋಭಾವನೆ ನಮ್ಮೆಲ್ಲರಲ್ಲಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ತದನಂತರ ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನದ ಜಿಲ್ಲಾಧ್ಯಕ್ಷರಾದ ಕೆ ಕೊಟ್ರೇಶ್ ಮಾತನಾಡಿ ಕಮ್ಯುನಿಸ್ಟ್ ಪಕ್ಷ ಸಿದ್ಧಾಂತಗಳನ್ನು ಒಳಗೊಂಡಿದ್ದು ಯಾವಾಗಲೂ ಶೋಷಿತರ ಪರವಾಗಿ ಧ್ವನಿಯಾಗಿ ಅನ್ಯಾಯದ ವಿರುದ್ಧ ದ್ವನಿ ಎತ್ತುತ್ತದೆ
ಮತ್ತು ಕಮ್ಯೂನಿಸ್ಟ್ ಪಕ್ಷದಿಂದ ಸೂರಿಗಾಗಿ ಸಮರ ಕಡುಬಡವರಿಗೆ ನಿವೇಶನ ಕೊಡಿಸುವಲ್ಲಿ ನಿರಂತರ ಪ್ರತಿಭಟನೆಗಳು ಮಾಡುತ್ತೇವೆ. ಎಂದು ಹೇಳಿದರು
ಹಡಗಲಿ ತಾಲೂಕಿನ ಎಐ ಡಿ ಆರ್ ಎಂ ತಾಲೂಕು ಅಧ್ಯಕ್ಷ ಹಲಗಿ ಸುರೇಶ್ ಹಾಗೂ ಸಿಪಿಐ ತಾಲೂಕು ಕಾರ್ಯದರ್ಶಿ ಕೆ ರೇಣುಕಮ್ಮ ಹರಪನಹಳ್ಳಿ ತಾಲೂಕಿನ ಕಾರ್ಯದರ್ಶಿ ಬಳಿಗನೂರು ಕೊಟ್ರೇಶ್ ಇತರರು ಮಾತನಾಡಿದರು.
ಈ ಸಂದರ್ಭದಲ್ಲಿ ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ ಸಂಘಟನೆಯ ಜಿಲ್ಲಾಧ್ಯಕ್ಷರಾದ ಕೆ ಕೊಟ್ರೇಶ್ ಸಿ ಪಿ ಐ ಪಕ್ಷದ ತಾಲೂಕು ಕಾರ್ಯದರ್ಶಿ ಕೆ ರೇಣುಕಮ್ಮ ತಾಲೂಕು ಎ ಐ ಡಿ ಆರ್ ಎಂ ಸಂಘಟನೆ ತಾಲೂಕು ಅಧ್ಯಕ್ಷ ತೆಗ್ಗಿನಕೇರಿ ಕೊಟ್ರೇಶ್, ಬಿಸಿ ಊಟ ಕಾರ್ಯಕರ್ತೆ ರೂಪ ಸಹಕಾರದರ್ಶಿ ಬಿ ರೇಣುಕಮ್ಮ, ಕಿಸಾನ್ ಸಭಾ ಘಟಕದ ಅಧ್ಯಕ್ಷ ಕೊಟ್ರಬಸಪ್ಪ, ಎಚ್ ಬಿ ಹಳ್ಳಿ ತಾಲೂಕು ಘಟಕದ ಗಂಗಾಧರ್ ಅಂಗನವಾಡಿ ಕಾರ್ಯಕರ್ತೆ ದಾಕ್ಷಣಮ್ಮ ಇತರರು ಉಪಸ್ಥಿತರಿದ್ದರು