Karnataka Media Journalists..! Preparatory meeting for Press Day celebration,,

ಕೊಪ್ಪಳ : ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘಟನೆಯಿಂದ ಇದೇ ಜು31ರಂದು ಪತ್ರಿಕಾ ದಿನಾಚರಣೆಯನ್ನು ರಾಜ್ಯಾಧ್ಯಕ್ಷ ಎಂ.ರಾಜಶೇಖರ್ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದು ಅದರ ಪೂರ್ವಭಾವಿ ಸಭೆಯನ್ನು ಕರೆಯಲಾಗಿತ್ತು.
ನಗರದ ನೀರಿಕ್ಷಣಾ ಮಂದಿರದಲ್ಲಿ ಕರೆದ ಸಭೆಯಲ್ಲಿ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ (ರಿ) ದ ರಾಜ್ಯ ಕಾರ್ಯ ಸಮಿತಿ ಸದಸ್ಯ ಎಚ್.ಮಲ್ಲಿಕಾರ್ಜುನ ಮಾತನಾಡಿ ಇದೇ ತಿಂಗಳು 31ರಂದು ಜರುಗುವ ಪತ್ರಿಕಾ ದಿನಾಚರಣೆ ಅಂಗವಾಗಿ ವಿವಿಧ ವಿಷಯಗಳ ಕುರಿತು ಚರ್ಚಿಸಿದರು.
ಪತ್ರಿಕಾ ದಿನಾಚರಣೆಯಲ್ಲಿ ರಾಜ್ಯದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೇರಿದಂತೆ ವಿವಿಧ ಗಣ್ಯವ್ಯಕ್ತೀಗಳಿಗೆ ಆಹ್ವಾನಿಸಲಾಗಿದ್ದು, ರಾಜ್ಯಾದ್ಯಂತ ನಮ್ಮ ಸಂಘಟನೆಯ ಸದಸ್ಯರು ಪದಾಧಿಕಾರಿಗಳು ಪಾಲ್ಗೋಳ್ಳಲಿದ್ದಾರೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮ ಕ್ಕೆ ಕೊಪ್ಪಳ ಜಿಲ್ಲೆಯಿಂದ 60,70 ಹೋಗುವ ನಿರಿಕ್ಷೆ ಇದೆ. ಎಲ್ಲರೂ ತಪ್ಪದೇ ಭಾಗವಹಿಸಲು ಜಿಲ್ಲಾ ಅಧ್ಯಕ್ಷ ರಮೇಶ್ ಕೋಟಿ ವಿನಂತಿಸಿದರು
ಈ ಸಂದರ್ಭದಲ್ಲಿನ ರಾಘವೇಂದ್ರ ಅರಕೇರಿ, ಪಂಚಯ್ಯ ಹಿರೇಮಠ, ಮಂಗಳೇಶ, ನಿಂಗರಾಜ, ಲೋಕೆಶ ಬಜೇಂತ್ರಿ ಸೇರಿದಂತೆ ಇನ್ನಿತರ ಸದಸ್ಯರು ಇದ್ದರು.