Jyoti Gondaba’s advice for gaining health and financial strength

ಕೊಪ್ಪಳ: ಆರೋಗ್ಯವನ್ನು ಕಾಪಾಡಿಕೊಳ್ಳುವ ಮೂಲಕ ದೇಹ, ಮನಸ್ಸು ಸದೃಢವಾಗಿ ಇಟ್ಟುಕೊಂಡರೆ ಆರ್ಥಿಕ ಶಕ್ತಿ ಮತ್ತು ಸಾಮಾಜಿಕ ಗೌರವ ದೊರೆಯುತ್ತದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯೆ ಜ್ಯೋತಿ ಎಂ. ಗೊಂಡಬಾಳ ಸಲಹೆ ನೀಡಿದರು.
ಅವರು ನಗರದ ಪ್ರಮೋದ ಮಂದಿರದಲ್ಲಿ ನಡೆಯುತ್ತಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಸತಿ ನಿಲಯದ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಮಹಿಳೆ ನಿಜವಾಗಲೂ ಶಕ್ತಿಶಾಲಿ, ಆದರೆ ಪುರುಷ ವ್ಯವಸ್ಥೆಯಲ್ಲಿ ತನ್ನನ್ನು ಗುರುತಿಸಿಕೊಳ್ಳುವಲ್ಲಿ ಆಕೆ ವಿಫಲವಾಗುತ್ತಿದ್ದಾಳೆ, ಭಯ ಮತ್ತು ಆತಂಕದ ಜೀವನ ಜೊತೆಗೆ ಆರ್ಥಿಕ ಸ್ವಾವಲಂಭನೆಯ ಹಿನ್ನಡೆ ಕಾರಣಕ್ಕೆ ಆಕೆ ಪುರುಷರ ಬಲದಲ್ಲಿ ಹುದುಗಿ ಹೋಗುತ್ತಿದ್ದಾಳೆ, ಅದಕ್ಕೆ ಆರೋಗ್ಯ, ಆರ್ಥಿಕ ಬಲ ಮತ್ತು ಸಾಮಾಜಿಕ ಶಕ್ತಿ ಸಂಪಾದಿಸಲು ವಿದ್ಯಾರ್ಥಿ ಜೀವನದಲ್ಲಿ ನೂರರಷ್ಟು ಅದಕ್ಕೆ ಬದ್ಧರಾಗಿ ಓದಿ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಮಾಜ ಸೇವಕರಾದ ಶಾರದಾ ಪಾನಘಂಟಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕ ಅಧಿಕಾರಿ ನಾಗರತ್ನ, ಅಧಿಕಾರಿ ರಮೇಶ ಹುಬ್ಬಳ್ಳಿ, ವಾರ್ಡನ್‌ಗಳಾದ ಸುಧಾ, ಗಿರಿಜಾ ಇತರರು ಇದ್ದರು.
Kalyanasiri Kannada News Live 24×7 | News Karnataka
