Become an owner, not an employee: S. Shivarama Gowda

ಗಂಗಾವತಿ :ದಿನಾಂಕ 23 7 2025 ,ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಯ ನಂತರ ಕೇವಲ ನೌಕರಿಯ ಅನ್ವೇಷಕರಾಗಿ ತಮ್ಮ ಜೀವನದ ಬಹು ಭಾಗವನ್ನು ಕಳೆದುಕೊಳ್ಳುತ್ತಾರೆ. ಕೆಲವರು ಅಲ್ಪ ವೇತನಕ್ಕೆ ದುಡಿಯುತ್ತಾ ಕಷ್ಟಕರ ಜೀವನವನ್ನು ಅನುಭವಿಸುತ್ತಾರೆ .ಆದರೆ ವಿದ್ಯಾರ್ಥಿಗಳಲ್ಲಿ ತಾವು ನೌಕರರಾಗದೆ, ಮಾಲಕರಾಗಿ ನಾಲ್ಕು ಜನರಿಗೆ ನೌಕರಿ ಕೊಡಬೇಕೆಂಬ ಮನೋಭಾವನೆ ಬೆಳೆಯಬೇಕು. ಇವತ್ತು ಜಾಗತೀಕರಣದ ಫಲವಾಗಿ ಉದ್ಯಮ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳು ಸೃಷ್ಟಿಯಾಗಿವೆ .ನಮ್ಮ ಜ್ಞಾನವನ್ನು ಬಳಸಿಕೊಂಡು ಉದ್ಯಮಪತಿಗಳಾಗಿ ಬೆಳೆಯಲು ಸಾಕಷ್ಟು ಅವಕಾಶಗಳಿವೆ.
ಈ ನಿಟ್ಟಿನಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಆಲೋಚಿಸಬೇಕೆಂದು ಮಾಜಿ ಸಂಸದರು ,ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಎಸ್ ಶಿವರಾಮಗೌಡ ಅವರು ಕರೆ ನೀಡಿದರು. ಅವರು ಇಂದು ನಡೆದ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಗುಂಜಳ್ಳಿ ಹಿರೇ ನಾಗಪ್ಪ ವಾಣಿಜ್ಯ ಮಹಾವಿದ್ಯಾಲಯದ ಎಂ.ಕಾಂ ಸ್ನಾತಕೋತ್ತರ ಪದವಿ ಕೊರ್ಸಿನ ಅಂತಿಮ ವರ್ಷದ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘ ದಲ್ಲಿ ಎಲ್ ಕೆಜಿ ಯಿಂದ ಪಿಜಿಯವರಿಗೆ ಅಧ್ಯಯನ ಮಾಡಿ ಮತ್ತು ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ನೌಕರಿ ತರಬೇತಿ ಕೇಂದ್ರದಲ್ಲಿ ತರಬೇತಿ ಹೊಂದಿ ನೌಕರಿ ಪಡೆದ ಕುಮಾರಿ ರಕ್ಷಿತಾ ಅವರಿಗೆ ಸನ್ಮಾನಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಕೆ ಚನ್ನಬಸಯ್ಯ ಸ್ವಾಮಿ ಅವರು ಮಾತನಾಡಿ ವಿದ್ಯಾರ್ಥಿಗಳು ನೌಕರರಾಗಲಿ ಅಥವಾ ಉದ್ಯಮಪತಿಗಳಾಗಲಿ ಜೊತೆಗೆ ಸಾಮಾಜಿಕ ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.
ಮತ್ತೊಬ್ಬ ಅತಿಥಿಗಳಾದ ಡಾ. ಶರಣಬಸಪ್ಪ ಕೋಲ್ಕಾರ್ ಅವರು ಮಾತನಾಡಿ ಇಂದುದು ಜಾಗತೀಕರಣದ ಪರಿಣಾಮವಾಗಿ ಆರ್ಥಿಕ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ. ವಿದ್ಯಾರ್ಥಿಗಳು ತಮ್ಮ ಜ್ಞಾನ ವಿಸ್ತರಣೆಯ ಜೊತೆಗೆ ಕೌಶಲ್ಯ ಅಭಿವೃದ್ಧಿಯನ್ನು ಪಡೆದುಕೊಂಡು ಹೊಸ ಉದ್ಯೋಗಗಳ ಅನ್ವೇಷಿಗಳಾಗಿ , ಸೃರ್ಷಿಕತೃರಾಗಿ ,ಜಾಗತಿಕ ಅಗತ್ಯಕ್ಕೆ ತಕ್ಕಂತೆ ಸ್ವಯಂ ಉದ್ಯೋಗಪತಿಗಳಾಗಿ ಯಶಸ್ವಿಯಾಗಬಹುದೆಂದು ಮಾರ್ಗದರ್ಶನ ಮಾಡಿದರು .ಸಾನಿಧ್ಯ ವಹಿಸಿದ್ದ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ.ಕೊಟ್ಟೂರು ಮಹಾಸ್ವಾಮಿಗಳು ಮಾತನಾಡಿ ನಮ್ಮ ಭಾಗದ ವಿದ್ಯಾರ್ಥಿಗಳಿಗಾಗಿ ನಮ್ಮ ಸಂಸ್ಥೆಯಲ್ಲಿ ಕೇಜಿಯಿಂದ ಪಿಜಿ ವರೆಗೆ- ಪಿಜಿಯಿಂದ ನೌಕರಿವರೆಗೆ ಎಂಬ ದೇಯವಾಕ್ಯವನ್ನು ಇಟ್ಟುಕೊಂಡು ನಾವು ಪರಿಶ್ರಮಿಸುತ್ತಿದ್ದೇವೆ. ಇವತ್ತು ನಮ್ಮ ಸಂಸ್ಥೆಯಲ್ಲಿ ಎಂಕಾಂ ಸ್ನಾತಕೋತ್ತರ ಪದವಿ ಪಡೆದ ಮೊದಲ ತಂಡವನ್ನು ಸಮಾಜದ ಸೇವೆಗೆ ಸಮರ್ಪಿಸಲು ತುಂಬಾ ಸಂತೋಷವಾಗುತ್ತದೆ.
ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸನ್ನು ಪಡೆದುಕೊಂಡು ಸಮಾಜದ ಶಕ್ತಿಗಳಾಗಲಿ ಎಂದು ಹಾರೈಸಿದರು .ಪ್ರಾಚಾರ್ಯರಾದ ಜಿ ಬಸವರಾಜ್ ಅಯೋಧ್ಯ ಅವರು ಮಾತನಾಡಿ ಸ್ನಾತಕೋತ್ತರ ಕೋರ್ಸ್ ಪ್ರಾರಂಭದ ಹಿನ್ನೆಲೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಮತ್ತು ಚಟುವಟಿಕೆಗಳ ಬಗ್ಗೆ ವಿವರಿಸಿದರು ಕಾಲೇಜಿನಲ್ಲಿ ಅತ್ಯಂತ ಗುಣಮಟ್ಟದ ಶಿಕ್ಷಣಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂಬುದನ್ನು ತಿಳಿಸಿದರು ವೇದಿಕೆಯಲ್ಲಿ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಶರಣೇಗೌಡ ಮಾಲಿ ಪಾಟೀಲ್ ಸಾಮಾನ್ಯ ಸದಸ್ಯರಾದ ಗುಂಜಳ್ಳಿ ತಿಪ್ಪೇಶ್ ರಾಚಯ್ಯ ಸ್ವಾಮಿ ,ಸ್ನಾತಕೋತ್ತರ ಕೋರ್ಸಿನ ಸಂಯೋಜಕರಾದ ಎಸ್ ಕೆ ಸೋಮನಗೌಡ , ಉಪನ್ಯಾಸಕಿ ಜಯಲಕ್ಮೀ ಮತ್ತು ವಿದ್ಯಾರ್ಥಿ ಪ್ರತಿನಿಧಿಗಳಾದ ಬಸವನಾಯಕ್ ಮತ್ತು ಕುಮಾರ ಅನಿತಾ ಉಪಸ್ಥಿತರಿದ್ದರು