Vachana Shravan-2025 from July-24 in Gangavathi

ಗಂಗಾವತಿ: ಸ್ಥಳೀಯ ಬಸವಪರ ಸoಘಟನೆಗಳಿಂದ ಜುಲೈ-೨೪ ರಿಂದ ಆಗಸ್ಟ್-೨೮ ರವರೆಗೆ ಒಂದು ತಿಂಗಳ ಪರ್ಯಂತ ಆಯ್ದ ಮೂವತ್ತು ಮನೆಗಳಲ್ಲಿ ವಚನ ಶ್ರಾವಣ ಕಾರ್ಯಕ್ರಮ ಪ್ರಾರಂಭಗೊಳ್ಳಲಿರುವುದು.
ಕುವೆಂಪು ಬಡಾವಣೆಯಲ್ಲಿರುವ ವಕೀಲರಾದ ನಾಗರಾಜ ಗುತ್ತೇದಾರ ಇವರ ಮನೆಯಲ್ಲಿ ಮೊದಲ ದಿನದ ವಚನ ನಿರ್ವಚನ ನಡೆಯಲಿದ್ದು, ಕಾರಟಗಿಯ ಶ್ರೀಮತಿ ಲೀಲಾ ಮಲ್ಲಿಕಾರ್ಜುನ ಇವರು “ಇಳೆ ನಿಂಬು ಮಾವು ಮಾದಲಕ್ಕೆ ಹುಳಿ ನೀರನೆರೆದವದಾರಯ್ಯಾ” ಎನ್ನುವ ಅಕ್ಕಮಹಾದೇವಿಯವರ ವಚನದ ಕುರಿತು ಮಾತನಾಡಲಿರುವರು.
ಅಧ್ಯಕ್ಷತೆಯನ್ನು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಜೆ. ನಾಗರಾಜ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕಂಪ್ಲಿಯ ಅಕ್ಕಿಗಿರಣಿ ಮಾಲೀಕರ ಸಂಘದ ಅಧ್ಯಕ್ಷರಾದ ಕೆ.ಎಂ. ಹೇಮಯ್ಯಸ್ವಾಮಿ ಹಾಗೂ ಕೆ. ಬಸವರಾಜ, ವೀರೇಶರಡ್ಡಿ, ಎಚ್. ಶರಣಪ್ಪ ಇವರ ಉಪಸ್ಥಿತಿ ಇರುವುದು.
ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಲ್ಲದೆ ಕಂಫ್ಲಿ, ಎಮ್ಮಿಗನೂರು, ಶ್ರೀರಾಮನಗರ, ಸಿಂಧನೂರು, ಕೊಪ್ಪಳ, ಹೊಸಪೇಟೆಯ ಹಲವಾರು ಶರಣರು ವಚನ ನಿರ್ವಚನಗೈಯ್ಯಲಿರುವರು.
ಆಸಕ್ತರು ಕಾರ್ಯಕ್ರಮದ ಸದುಪಯೋಗಪಡಿಸಿಕೊಳ್ಳುವಂತೆ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಶ್ರೀಶೈಲ ಪಟ್ಟಣಶೆಟ್ಟಿ ಇವರು ಪತ್ರಿಕಾ ಪ್ರಕಟಣೆಯ ಮೂಲಕ ವಿನಂತಿಸಿರುತ್ತಾರೆ.