SGVR School wins Golden School Award

ಗಂಗಾವತಿ ವಿದ್ಯಾನಗರ : ಶ್ರೀ ಶಾರದಾ ವಿದ್ಯಾ ಸಂಸ್ಥೆ (ರಿ) ಎಸ್.ಜಿ.ವಿ.ಆರ್ ಆಂಗ್ಲ ಮಾಧ್ಯಮ ಶಾಲೆ 2024-25ನೇ ಸಾಲಿನಲ್ಲಿ ನಡೆದ Indian Talent Olympiad Examination ನಲ್ಲಿ ನಮ್ಮ ಶಾಲೆಯಿಂದ ಒಟ್ಟು 68 ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಸಾಧನೆಗೈದಿದ್ದಾರೆ.
ರಾಜ್ಯ ಪ್ರಶಸ್ತಿ ಪಡೆದ 5ನೇ ತರಗತಿ ಬಾಲಕಿ ಕು. ಎಂ. ಶ್ರಾವ್ಯ ಹಾಗೂ 08 ವಿದ್ಯಾರ್ಥಿಗಳು ಉತ್ತಮ ಸಾಧನೆಗೈದು ಶಾಲೆಗೆ “ಗೋಲ್ಡನ್ ಸ್ಕೂಲ್ ಅವಾರ್ಡ್ “ಮತ್ತು ” ಬೆಸ್ಟ್ ಪ್ರಿನ್ಸಿಪಾಲ್ ಅವಾರ್ಡನ್ನು ಶಾಲೆಯ ಮುಖ್ಯೋಪಾಧ್ಯಾಯಿನಿಯವರಾದ ಶ್ರೀಮತಿ ಉದಯ ಶ್ರೀ ಅವರು ಪಡೆದುಕೊಂಡಿದ್ದಾರೆ. ಈ ಸಾಧನೆಯನ್ನು ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಎಸ್ ಪ್ರಸಾದ ಹಾಗೂ ಕಾರ್ಯದರ್ಶಿಗಳಾದ ಶ್ರೀ ಆರ್.ರಾಜಶೇಖರವರು ರವರು ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಟಿ.ವಿ.ಸತ್ಯನಾರಾಯಣ, ಶ್ರೀ ಕೆ.ವೆಂಕಟೇಶ್ವರರಾವ್, ಶ್ರೀ ಟಿ.ವಿ. ಸುಬ್ಬರಾವ್, ಶ್ರೀ ಕೆ.ಬಿ.ಗೋಪಾಲಕೃಷ್ಣರೆಡ್ಡಿ ಸಂಸ್ಥೆಯ ಆಡಳಿತ ಅಧಿಕಾರಿಗಳಾದ ಶ್ರೀ ವೈ ಸುದರ್ಶನ್ ರಾವ್ , ಶೈಕ್ಷಣಿಕ ಪ್ರಗತಿ ಪರಿಶೀಲನಾಕಾರಿಗಳಾದ ಶ್ರೀ ಪಂಪನಗೌಡರು, ಪರೀಕ್ಷಾ ಸಂಘಟನಾಕಾರರಾದ ಶ್ರೀಮತಿ ಸಂಗಮ್ಮ ಮತ್ತು ಶಿಕ್ಷಕ ವೃಂದಕ್ಕೆ ಸಂಸ್ಥೆಯ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಶುಭ ಹಾರೈಸಿದ್ದಾರೆ.