Death Certificate” filming completes

ಬೆಂಗಳೂರು : ಶ್ರೀಗೌರಿ ಕಂಬೈನ್ಸ್ ಇವರ ಮೂರನೆಯ ಕಾಣಿಕೆ ‘ಡೆಥ್ ಸರ್ಟಿಫಿಕೆಟ್’ ಚಲನಚಿತ್ರದ ಚಿತ್ರೀಕರಣವು ಸದ್ದಿಲ್ಲದೆ ಭರದಿಂದ ಸಾಗಿ ಮುಕ್ತಾಯಗೊಂಡಿದೆ.
ಸಿದ್ದನಕೊಳ್ಳದ ಪೂಜ್ಯಶ್ರೀ ಡಾ. ಶಿವಕುಮಾರ ಸ್ವಾಮೀಜಿ ಕ್ಯಾಮರಾ ಚಾಲನೆ, ಹುನಗುಂದ ಮತಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ವೀರಶೈವ ಲಿಂಗಾಯತ ಅಭಿವೃದ್ದಿ ಮಂಡಳಿಯ ಅಧ್ಯಕ್ಷರಾದ ಮಾನ್ಯ ವಿಜಯಾನಂದ ಕಾಶಪ್ಪನವರು ಕ್ಲ್ಯಾಪ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದ್ದರು. ಉತ್ತರ ಕರ್ನಾಟಕದ ನೈಜ ಭಾಷೆ, ವಾಸ್ತವಿಕ ಕಥಾಹಂದರ, ಗ್ರಾಮೀಣತೆಯ ಸೊಗಡು, ಮೇಕಪ್ ರಹಿತ ಕಲಾವಿದರು ಮುಂತಾದ ವೈಶಿಷ್ಟ್ಯಗಳಿಂದ ಕೂಡಿರುವ ಈ ಚಿತ್ರವು ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಭರವಸೆ ಮೂಡಿಸುತ್ತದೆ.
ಹುನಗುಂದ ತಾಲೂಕಿನ ವೀರಾಪುರ ಹಾಗೂ ಇನ್ನಿತರ ಸ್ಥಳಗಳಲ್ಲಿ ಸತತ ಚಿತ್ರೀಕÀರಣವನ್ನು ನಡೆಸಿ ಒಂದೇ ಹಂತದಲ್ಲಿ ಚಿತ್ರೀಕರಣ ಮುಕ್ತಾಯಗೊಳಿಸಲಾಗಿದೆ. ನೈಜ ಘಟನೆಯನ್ನು ಕಥೆಯಾಗಿ ಬರೆದ ಮಹಾಂತೇಶ ಹಳ್ಳೂರ ಕಥೆ, ಚಿತ್ರಕಥೆ ಸಂಭಾಷಣೆಯನ್ನು ಬರೆದಿದ್ದಾರೆ. ಛಾಯಾಗ್ರಹಣದ ಜೊತೆ ನಿರ್ದೇಶನದ ಹೊಣೆಯನ್ನು ಗುರುದತ್ತ ಮುಸುರಿ , ನಾಯಕ ನಟನ ಪಾತ್ರದೊಂದಿಗೆ ಚಿತ್ರ ನಿರ್ಮಾಣವನ್ನು ಮನ್ವೀತ್ ಎಸ್ ವಹಿಸಿಕೊಂಡಿದ್ದಾರೆ. ಸಹಾಯಕ ನಿರ್ದೇಶನ ಶೇಷಗಿರಿ ಸಂಕಲನ, ಡಿಸೈನ್ ಅನೀಲ , ಸಹ ನಿರ್ದೇಶನ ಬಸಲಿಂಗಪ್ಪ ತೋಟದ , ಮಾಧ್ಯಮ ಸಂಪರ್ಕ ಡಾ. ಪ್ರಭು ಗಂಜಿಹಾಳ ಡಾ.ವೀರೇಶ ಹಂಡಿಗಿ, ಪ್ರೊಡಕ್ಷನ್ ಮ್ಯಾನೇಜರ್ ಮಹಾಂತೇಶ ಮಠ ಆಗಿದ್ದಾರೆ.
ತಾರಾಗಣದಲ್ಲಿ ಮನ್ವೀತ್, ವಿಜಯಲಕ್ಷ್ಮಿ, ಮಹಾಂತೇಶ ಹಳ್ಳೂರ, ಬಸಲಿಂಗಪ್ಪ ತೋಟದ, ಜಯದೇವ ಗಂಜಿಹಾಳ, ಪ್ರವೀಣ ಭತ್ತದ, ಬಂಡು ಕಟ್ಟಿ, ಡಾ.ಚಂದ್ರನಾಥ ಒಂಟಕುದರಿ, ಮಂಜುಶ್ರೀ ಮಣಿ, ಹನಮಂತ ಮಸ್ಕಿ,ಮಹಾಂತೇಶ ಅಂಗಡಿ, ಮಹಾಂತೇಶ ಮಠ, ಮಹಾಂತೇಶ ಅಗಸಿಮುಂದಿನ, ಮಹಾಂತೇಶ ಅಂಗಡಿ, ನಾಗಪ್ಪ ಪೂಜಾರಿ, ಚಂದ್ರಶೇಖರ ಶಾಸ್ರ‍್ತಿ , ಸಂಗು ಮಠ, ಬಸನಗೌಡಾ ಹಿರೇಗೌಡ್ರ , ಮಹಾಂತೇಶ ಗಜೇಂದ್ರಗಡ, ವಿನೋದ ಹೂಗಾರ, ಢವಳಚಂದ ಪವಾರ, ಅನಂತ ಬಬಲೇಶ್ವರ, ಗುಡದೂರಕಲ್ಮಠ, ಗುರು ಮಠ, ಭೀಮರಾವ್ ಹಾಗೂ ವೀರಾಪುರ ಗ್ರಾಮದ ಸಮಸ್ತ ಜನತೆ ಅಭಿನಯಿಸಿದ್ದಾರೆ. ಆದಷ್ಟು ಬೇಗ ಚಿತ್ರದ ಸಂಪೂರ್ಣ ಕೆಲಸ ಮುಗಿಸಿ ತೆರೆಗೆ ತರುವ ಯೋಚನೆ ನಿರ್ಮಾಪಕರು,ಚಿತ್ರತಂಡದ್ದಾಗಿದೆ.