Relief for CM's wife in Muda scam - Supreme Court lashes out at ED!

ನವದೆಹಲಿ : ಮುಡಾ ನಿವೇಶನ ಹಂಚಿಕೆ ಹಗರಣದಲ್ಲಿ ಸಿಎಂ ಪತ್ನಿ ಪರ‍್ವತಿ ವಿರುದ್ದ ಪ್ರಕರಣದ ದಾಖಲಿಸಿದ್ದ ಜಾರಿ ನರ‍್ದೇಶನಾಲಯಕ್ಕೆ ಸುಪ್ರೀಂಖಿಗಿ ಕರ‍್ಟ್ ಚಾಟಿ ಬೀಸಿದೆ. ಹೈಕರ‍್ಟ್ ಆದೇಶವನ್ನು ಪ್ರಶ್ನಿಸಿ ಇ.ಡಿ ಸಲ್ಲಿಸಿದ್ದ ರ‍್ಜಿಯನ್ನು ಸುಪ್ರೀಂ ಕರ‍್ಟ್ ವಜಾಗೊಳಿಸಿದೆ.
ಇದರಿಂದ ಸಿಎಂ ಸಿದ್ದರಾಮಯ್ಯ ಅವರಿಗೆ ಮತ್ತೊಂದು ಮಹತ್ವದ ಗೆಲುವು ದೊರತಂತಾಗಿದೆ.
ಸಾಮಾಜಿಕ ಕರ‍್ಯರ‍್ತ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ದೂರನ್ನಾಧರಿಸಿ ಜಾರಿ ನರ‍್ದೇಶನಾಲಯದ ತನಿಖೆ ಕೈಗೊಂಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದ ಜಾರಿ ನರ‍್ದೇಶನಾಲಯವನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಧೀಶರು ರಾಜಕೀಯ ಯುದ್ಧ ಚುನಾವಣೆಯಲ್ಲಿ ನಡೆಯಲಿ. ನ್ಯಾಯಾಲಯದಲ್ಲಿ ಬೇಡ. ರಾಜಕೀಯ ದಾಳವಾಗಿ ಇದನ್ನು ಪರಿರ‍್ತಿಸಬೇಡಿ ಎಂದು ಹೇಳಿದ್ದಾರೆ. ಅಲ್ಲದೇ ಇಂಥಾ ಚಟುವಟಿಕೆ ಮುಂದುವರೆಸಿದರೆ ಇ.ಡಿ ಬಗ್ಗೆ ಕಠಿಣವಾಗಬೇಕಾಗುತ್ತದೆ ಎಂದು ಸುಪ್ರಿಂ ಎಚ್ಚರಿಕೆಯನ್ನೂ ರವಾನಿಸಿದೆ.
ಸಿಎಂ ಪತ್ನಿ ವಿರುದ್ದ ದಾಖಲಿಸಲಾಗಿದ್ದ ಪ್ರಕರಣವನ್ನು ಹೈಕರ‍್ಟ್ ರದ್ದುಪಡಿಸಿತ್ತು. ಹೈಕರ‍್ಟ್ ಆದೇಶವನ್ನು ಪ್ರಶ್ನಿಸಿ ಇ.ಡಿ ಸುಪ್ರೀಂ ಕರ‍್ಟ್ ಮೆಟ್ಟಿಲೇರಿತ್ತು. ಪ್ರಕರಣವನ್ನು ಪರಿಶೀಲಿಸಿದ ಉಚ್ಚ ನ್ಯಾಯಾಲಯ ಹೈಕರ‍್ಟ್ ಆದೇಶವನ್ನು ರದ್ದುಪಡಿಸಲು ನಿರಾಕರಿಸಿದೆ.
ಮೈಸೂರಿನ ಮುಡಾ ಕಚೇರಿ ಮೇಲೆ ಧಿಡೀರ್ ದಾಳಿ ನಡೆಸಿದ್ದ ಜಾರಿ ನರ‍್ದೇಶನಾಲಯ , ಮೊದಲು ನಮಗೆ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪರ‍್ವತಿ ಸಿದ್ದರಾಮಯ್ಯ ಅವರ ನಿವೇಶನಗಳ ಮೂಲ ದಾಖಲೆ ಕೊಡಿ ಎಂದು ಮುಡಾ ಅಧಿಕಾರಿಗಳಿಗೆ ತಾಕೀತು ಮಾಡಿತ್ತು.
ಸುಮಾರು ೮ ಅಧಿಕಾರಿಗಳು ಆಗಮಿಸಿದ್ದು, ಮುಡಾ ಆಯುಕ್ತ ರಘುನಂದನ್ ಅವರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಮುಡಾದಲ್ಲಿ ನಡೆದಿರುವ ೫೦:೫೦ ಹಗರಣದ ಬಗ್ಗೆ ತನಿಖೆ ನಡೆಸಲಾಗಿತ್ತು.
ಪರ‍್ವತಿ ಸಿದ್ದರಾಮಯ್ಯ ಅವರ ಮೂಲ ದಾಖಲಾತಿ ಕೇಳಿದಾಗ, ನಕಲು ಪ್ರತಿ ಸಾಕೇ ಎಂದು ಮುಡಾ ಅಧಿಕಾರಿಗಳು ನುಣುಚಿಕೊಳ್ಳಲು ಯತ್ನಿಸಿದ್ದಾರೆಂದು ವರದಿಯಾಗಿತ್ತು. ಈ ವೇಳೆ ನಮಗೆ ಮೂಲ ದಾಖಲೆಯೇ ಬೇಕು ಪಟ್ಟು ಹಿಡಿದಿದ್ದ ಇ.ಡಿ. ಅಧಿಕಾರಿಗಳು, ಪರ‍್ವತಿ ಸಿದ್ದರಾಮಯ್ಯ ಕೇಸ್ ಸಂಬಂಧ ೨೦೦೪ ರಿಂದ ೨೦೨೩ರವರಗಿನ ಮೂಲ ದಾಖಲೆ ತಕ್ಷಣ ಒದಗಿಸಿ ಎಂದು ತಾಕೀತು ಮಾಡಿದ್ದರು. ಜೊತೆಗೆ, ಮುಡಾ ಕರ‍್ಯರ‍್ಶಿ ಪ್ರಸನ್ನ ಕುಮಾರ್ ಅವರನ್ನ ದಾಖಲೆ ತರಲು ಹೊರಗೆ ಕಳುಹಿಸಿದ ಅಧಿಕಾರಿಗಳು, ೫೦:೫೦ ವಿಚಾರ ಏನು, ಇಲ್ಲಿಯವರೆಗೆ ಎಷ್ಟು ಸೈಟ್ ಗಳು ಹಂಚಿಕೆಯಾಗಿದೆ ಎಂದು ಪರಿಶೀಲನೆ ನಡೆಸಿದ್ದರು.