Ray Edwin Babu, who served as the pastor of the church for a long 11 years, will retire from his position on Sunday, July 20.

ಗಂಗಾವತಿ: ತಾಲೂಕಿನ ಗಾಳೆಮ್ಮಗುಡಿ ಕ್ಯಾಂಪ್ ಬೇತ್ಸಥಾ ಮೆಥೋಡಿಸ್ಟ್ ಚರ್ಚ್ ಸಭಾ ಪಾಲಕರಾದ ರೇ. ಎಡ್ವಿನ್ ಬಾಬು ರವರು ಸುಮಾರು ಹನ್ನೊಂದು ವರ್ಷಗಳ ಕಾಲ ಇಲ್ಲಿ ಸೇವೆ ಸಲ್ಲಿಸಿ ಜುಲೈ-೨೦ ಭಾನುವಾರ ನಿವೃತ್ತಿ ಹೊಂದಿದರು.
ಅವರು ಕ್ರಿಸ್ತನ ಮಾರ್ಗಗಳನ್ನು ಆತನ ದೇವೋಕ್ತಿಗಳನ್ನು ಭೋಧನೆ ಮಾಡುತ್ತಾ, ಕ್ರಿಸ್ತನು ಈ ಭೂಮಿಯ ಮೇಲೆ ಸಾರಿರುವ ಸಂದೇಶವನ್ನು ಸಾರುತ್ತಾ, ನಿನ್ನಂತೆಯೇ ನಿನ್ನ ನೆರೆ ಹೊರೆಯವರನ್ನು ಪ್ರೀತಿಸು ಎಂಬುದು, ನೀನು ನಿನ್ನ ಸಹೋದರರ ನಿಮಿತ್ಯ ಪ್ರಾಣವನ್ನು ಪಣಕ್ಕಿಟ್ಟು ಪಾಪದಿಂದ ರಕ್ಷಿಸು ಎಂದು ಹೇಳಿದ ಆ ಯೇಸುವಿನ ಸಂದೇಶಗಳು ತಿಳಿಸುತ್ತಾ ಈ ಭೂಮಿಯ ಮೇಲೆ ಮನುಷ್ಯರ ಬದುಕು ಶಾಶ್ವತವಲ್ಲ ನಾವು ಪರಲೋಕದಿಂದ ಬಂದವರು ಮರಳಿ ಪರಲೋಕಕ್ಕೆ ಹಿಂದಿರುಗಬೇಕು ಎಂದು ತಿಳಿಸುತ್ತಾ ತಮ್ಮ ಜೀವನದುದ್ಧದಕ್ಕೂ ಯೇಸುವಿನ ವಿಷಯಗಳನ್ನು ಭೋದಿಸುತ್ತಾ ಬದುಕಿದರು.
ಅದಕ್ಕಾಗಿ ಅವರ ನಿವೃತ್ತಿ ಜೀವನ ಸುಖಕರವಾಗಲಿ ಎಂದು, ಅವರಿಗೆ ಚರ್ಚ್ ವತಿಯಿಂದ ಚಿಕ್ಕ ಅಳಿಲುಸೇವೆಯನ್ನು ಮಾಡುವುದರ ಮುಖಾಂತರ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ. ಸಭೆಯ ಕಾರ್ಯದರ್ಶಿಯಾದ ರಾಜೇಶಕುಮಾರ್, ಉಗ್ರಾಣಿಕರಾದ ಬಂಡಿ ಇಂಜಪ್ಪ, ಸುದರ್ಶನ್, ಜೇಮಿಸ್, ಆನಂದ್, ಊರಿನ ಹಿರಿಯರಾದ ಸಣ್ಣ ತಾಯಪ್ಪ, ಸಣ್ಣ ಭೀಮಣ್ಣ, ಎಂ.ನರಸಿAಹಲು, ಬುಜ್ಜಪ್ಪ, ಯುವಕ, ಯುವತಿಯರು, ಮಹಿಳೆಯರು ಉಪಸ್ಥಿತರಿದ್ದರು