Hanumesh Batari elected as new president of Gangamat Samaj
ಗಂಗಾವತಿ.ಜುಲೈ.20: ಹೊಸಳ್ಳಿ ರಸ್ತೆ ಬಳಿಯ ವಿವೇಕ ಭಾರತಿ ಶಾಲೆಯಲ್ಲಿ ಗಂಗಾಮತ ಸಮಾಜದ ನೂತನ ತಾಲೂಕು ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಜಿಲ್ಲಾ ಅಧ್ಯಕ್ಷ ಹಾಗೂ ಪದಾಧಿಕಾರಿಗಳು, ಸಮಾಜದ ಮುಖಂಡರ ಸಮ್ಮುಖದಲ್ಲಿ ಭಾನುವಾರದಂದು ನಡೆಯಿತು.

ಗಂಗಾಮತ ಸಮಾಜದ ತಾಲೂಕ ನೂತನ ಅಧ್ಯಕ್ಷರನ್ನಾಗಿ ಹನುಮೇಶ ಬಟಾರಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ತಾಲೂಕು ಶ್ರೀ ನಿಜ ಶರಣ ಅಂಬಿಗರ ಚೌಡಯ್ಯ ಯುವಕ ಸಂಘಕ್ಕೆ ಅಧ್ಯಕ್ಷರಾಗಿ ಬೈರೇಶ್ ಆಯ್ಕೆಯಾದರು. ಗಂಗಾಮತ ಸಮಾಜದ ಜಿಲ್ಲಾ ಅಧ್ಯಕ್ಷ ಸೋಮಣ್ಣ ಬಾರಿಕೇರ ಇವರ ನೇತೃತ್ವದಲ್ಲಿ ಹೊಸಳ್ಳಿ ರಸ್ತೆ ಬಳಿಯ ವಿವೇಕ ಭಾರತಿ ಶಾಲೆಯಲ್ಲಿ ಸಭೆ ಸೇರಿ ತಾಲೂಕು ವ್ಯಾಪ್ತಿಯ ಪ್ರತಿಯೊಂದು ಹಳ್ಳಿಗಳ ಜನರ ಅಭಿಪ್ರಾಯ ಪಡೆದು ನೂತನ ಅಧ್ಯಕ್ಷರನ್ನು ಘೋಷಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಗೌರವ ಅಧ್ಯಕ್ಷ ರಾಜಶೇಖರ ಮುಷ್ಟೂರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಂಕಪ್ಪ ಮಾಸ್ತರ್, ಜಿಲ್ಲಾ ಉಪಾಧ್ಯಕ್ಷ ಪರಶುರಾಮ ಮಡ್ಡೇರ್, ಸಂಘಟನಾ ಕಾರ್ಯದರ್ಶಿ, ನಾಗರಾಜ್ ಲಿಂಗರಾಜಪ್ಪ, ಕಾರಟಗಿ ತಾಲೂಕು ಅಧ್ಯಕ್ಷ ಅಯ್ಯಪ್ಪ ಸಂಗಟಿ, ಕನಕಗಿರಿ ತಾಲೂಕ ಅಧ್ಯಕ್ಷ ಟಿ.ಜಿ.ರಾಜಶೇಖರ, ಮುಖಂಡರಾದ ಬಿ.ಅಶೋಕ್, ಅಂಜಿನಪ್ಪ ಆನೆಗುಂದಿ, ಈ.ಧನರಾಜ್, ಕಾಯಿ ಗಡ್ಡೆ ಶರಣಪ್ಪ, ವೈ.ಬಿ.ವಿರೂಪಾಕ್ಷಪ್ಪ ವಕೀಲರು, ಸಿದ್ದಪ್ಪ ಕರೆಕುರಿ ಹೆಬ್ಬಾಳ, ಯಮನೂರಪ್ಪ ವಕೀಲ, ಗಂಗಾವತಿ ನಗರದ ಹಿರಿಯ ಮುಖಂಡರು, ಯುವಕರು ಹಾಗೂ ಗಂಗಾವತಿ ತಾಲೂಕು ಸಮಸ್ತ ಗ್ರಾಮದ ಹಿರಿಯರು ಯುವಕರು ಈ ವೇಳೆ ಉಪಸ್ಥಿತರಿದ್ದರು.