Demand for roads, drainage, cleanliness, etc. in Maibubu city
ಕೊಪ್ಪಳ ನಗರದ ಒಂದನೇ ವಾರ್ಡ್ ಮೈಬುಬು ನಗರದ ರಸ್ತೆ, ಚರಂಡಿ, ಸ್ವಚ್ಛತೆ,

ಸೊಳ್ಳೆ ಹಾವಳಿ, ಇನ್ನಿತರ ಮೂಲಭೂತ ಸೌಕರ್ಯವಿಲ್ಲದೆ ನಿವಾಸಿಗಳು ಪರದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿ.
ಕೊಪ್ಪಳದದ ಮೆಹಬೂಬು ನಗರದಲ್ಲಿ ಕಳೆದ 15 ವರ್ಷಗಳಿಂದ ಆಶ್ರಯ ನಿವೇಶನಗಳಲ್ಲಿ ಮನೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಈ ನಗರಕ್ಕೆ ಕನಿಷ್ಠ ಮೂಲಭೂತ ಸೌಕರ್ಯಗಳು ಇಲ್ಲದಿರುವುದು ಅತ್ಯಂತ ನೋವಿನ ಸಂಗತಿ. ಮಳೆ ಬಂದರೆ ಸಾಕು ಚರಂಡಿ ನೀರು, ರಸ್ತೆ ಮೇಲೆ ಬಂದು ಓಡಾಡೋದಕ್ಕೂ ಆಗುವುದಿಲ್ಲ. ಮಕ್ಕಳು, ವೃದ್ಧರು, ಈ ರಸ್ತೆಯಲ್ಲಿ ಜಾರಿ ಬಿದ್ದು ಕೈಕಾಲು ಮುರಿದುಕೊಂಡು ಆಸ್ಪತ್ರೆ ಸೇರುವಂತ ಪರಿಸ್ಥಿತಿ ಇದೆ. ನೀರು ಹರಿಯಲು ಯಾವುದೇ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮನೆ ಒಳಗಡೆ ನುಗ್ಗುತ್ತಿದೆ.
ಕೊಪ್ಪಳದಿಂದ ಹಿರೇ ಸಿಂದೋಗಿಮಾರ್ಗ ಮೆಹಬೂಬ್ ನಗರದ ಹತ್ತಿರ ಇರುವ ಕಿರು ಹಳ್ಳ ತುಂಬಿಕೊಂಡು ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಅನಾರೋಗ್ಯ ತೊಂದರೆಗಳು, ಸೊಳ್ಳೆ ಹಾವಳಿಯಿಂದ ಡೆಂಗಿ ಜ್ವರ ಮುಂತಾದ ಸಂಕ್ರಾಮಿಕ ರೋಗಗಳು ಬಡ ಜನರನ್ನು ನೆಮ್ಮದಿ ಹಾಳು ಮಾಡುತ್ತಿದೆ.
ಈ ಸಮಸ್ಯೆ ಕುರಿತು ಹಲವಾರು ಬಾರಿ ನಮ್ಮ ನಗರಸಭೆಗೆ ಮನವಿ ಸಲ್ಲಿಸಿದರು ಸಮಸ್ಯೆಗೆ ಪರಿಹರ ಸಿಕ್ಕಿಲ್ಲ. ಕೂಡಲೆ ರಸ್ತೆಗೆ ಡಾಂಬರಿಕರಣ ಮಾಡಬೇಕು , ಚರಂಡಿ ನಿರ್ಮಾಣ ಮಾಡಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು. ಬೀದಿ ದೀಪಗಳ ಇಲ್ಲದೆ ಹೋಣಿಯಲ್ಲಿ ಕತ್ತಲು ಆವರಿಸಿದೆ. ಇಂಥ ಜಾಗದಲ್ಲಿ ದಿನನಿತ್ಯ ಹಾವು,ಚೇಳು, ಕಡಿಸಿಕೊಂಡು ಅನಾಹುತ ಘಟನೆಗಳು ನಡೆದಿದ್ದು ನಿವಾಸಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಈ ಎಲ್ಲ ಸಮಸ್ಯೆಗಳನ್ನು ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಮಾಡಿ ಪರಿಹಾರ ಕ್ರಮ ಕೈಗೊಳ್ಳಬೇಬೇಕೆಂಬುದು ನಗರದ ನಿವಾಸಿಗಳಾದ ದ್ಯಾಮಣ್ಣ ಡೊಳ್ಳಿನ,ಶಂಕ್ರಪ್ಪ ಜಲ್ಲಿ ಅವರ ಒತ್ತಾಯವಾಗಿದೆ.