Breaking News

ನೊಂದವರಿಗೆ ನೆರವು ದೊರಕಿಸಿಕೊಡುವಲ್ಲಿ ಪತ್ರಿಕಾ ರಂಗ ತೀವ್ರ ಪರಿಣಾಮಕಾರಿಯಾಗಿದೆ.

The media has been extremely effective in providing assistance to those affected.

ನವಲಗುಂದ : ನೊಂದವರಿಗೆ ನೆರವು ದೊರಕಿಸಿಕೊಡುವಲ್ಲಿ ಪತ್ರಿಕಾ ರಂಗ ತೀವ್ರ ಪರಿಣಾಮಕಾರಿಯಾಗಿದೆ. ಸ್ವಾತಂತ್ರ ಸಂಗ್ರಾಮದಲ್ಲಿ ಪತ್ರಿಕಾ ಮಾದ್ಯಮ ಮಾಡಿದ ಹೋರಾಟ ಸ್ಮರಣೀಯ ಎಂದು ನವಲಗುಂದ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ವಿಕಾಸ ತದ್ದೇವಾಡಿ ಹೇಳಿದರು.

ಅವರು ಗುರುವಾರ ಪ್ರವಾಸಿ ಮಂದಿರ ಸಭಾಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ತಾ ಪಂ ಅಧ್ಯಕ್ಷ ನಿಂಗಪ್ಪ ಬಾರಕೇರ ಮಾತನಾಡಿ ಪತ್ರಕರ್ತರನ್ನು ದುಂಬಿಗಳಂತೆ ಸಮಾಜದ ಮೂಲೆಮೂಲೆಗಳಿಂದ ಸುದ್ದಿಗಳನ್ನು ಸಂಗ್ರಹಿಸಿ, ವಾಸ್ತವಿಕತೆಯನ್ನು ನೈಜ ಸುದ್ದಿಗಳಿಂದ ಹೊರತರಬೇಕು. ಈ ವೃತ್ತಿಯಲ್ಲಿ ಅನೇಕ ಅಡೆತಡೆಗಳು ಎದುರಾದರೂ, ಅವುಗಳನ್ನು ಮೆಟ್ಟಿ ನಿಂತು ವೃತ್ತಿ ಗೌರವಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡುತ್ತಿರುವ ಪತ್ರಕರ್ತರ ಕಾರ್ಯ ಶ್ಲಾಘನಿಯ ಎಂದರು.

ಪೆನ್ನು ಹಿಡಿದು ದೇಶದ ಜನರಲ್ಲಿ ಅರಿವು ಮೂಡಿಸುವ ಮೂಲಕ ಸಮಾಜದ ಡೊಂಕು ಹಾಗೂ ಮೂಡನಂಬಿಕೆಯನ್ನು ನಿರ್ಮೂಲನೆ ಮಾಡುವಲ್ಲಿ ಹೋರಾಟ ಮಾಡಿದವರು ಪತ್ರಕರ್ತರು ಎಂದು ಮಾಬೂಸಾಬ ಯರಗುಪ್ಪಿ ಉಪನ್ಯಾಸ ನೀಡಿದರು.

ಬಸನಗೌಡ ಪಾಟೀಲ್ ಪ್ರಸ್ತಾವಿಕವಾಗಿ ಮಾತನಾಡಿ ಪತ್ರಕರ್ತರು ಸರ್ಕಾರದಿಂದ ಯಾವುದೇ ಸೌಲಭ್ಯ ಪಡೆಯದೆ ಪ್ರತಿ ನಿತ್ಯ ಸಮಾಜ ಸೇವೆ ಮಾಡುತ್ತಾರೆ. 24 ಘಂಟೆಗಳ ಕಾಲ ಜಾಗೃತರಾಗಿ ಸಮಾಜಕ್ಕಾಗಿ ಅರ್ಪಣೆ ಮಾಡಿಕೊಂಡು ಸೇವೆ ಮಾಡುತ್ತಿರುವವರು ಪತ್ರಕರ್ತರು ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತಧ್ವನಿ ಸಂಘದ ತಾಲ್ಲೂಕು ಅಧ್ಯಕ್ಷ ನಂದೀಶ ಸಂಗಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಉಚಿತ ಬಸ್ ಪಾಸ್ ಕೊಡುತ್ತೀವೆ ಅಂತಾ ಹೇಳಿದ ಸರಕಾರ ಈವರೆಗೂ ಯಾವುದೇ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸಿಕ್ಕಿಲ್ಲ ಕೂಡಲೇ ಉಚಿತ ಬಸ್ ಪಾಸ್ ನೀಡಬೇಕು ಜೊತೆಗೆ ಪತ್ರಿಕಾ ವಿತರಕರಿಗೂ ಉಚಿತ ಬಸ್ ನೀಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿಕೊಂಡರು. ಇದೆ ವೇಳೆ ಗಣ್ಯರನ್ನು ಸನ್ಮಾನಿಸಲಾಯಿತು

ನವಲಗುಂದ ತಾಲ್ಲೂಕು ವಿತರಕರ ಸಂಘದ ಅಧ್ಯಕ್ಷ ದೇವರಾಜಸ್ವಾಮಿ ಹಿರೇಮಠ, ಶಿವು ನಾಯ್ಕ, ಸಂಜಯ ಗುರಿಕಾರ, ಗಂಗಾಧರ ಕತ್ತಿ, ಈರಣ್ಣ ಪೂಜಾರ, ನಿಂಗಪ್ಪ ಕುಂಬಾರ, ಅಬ್ದುಲರಝಾಕ್ ನದಾಫ್ ಇತರರು ಇದ್ದರು

About Mallikarjun

Check Also

ಗ್ಯಾರಂಟಿ ಮೂಲಕ ಬಡ ಮಧ್ಯಮ ವರ್ಗದ ಜನರಿಗೆ ಸಹಕಾರ : ರೇವಣ್ಣ

Cooperation for poor and middle class people through guarantees: Revanna ಕೊಪ್ಪಳ: ಸಿದ್ದರಾಮಯ್ಯ – ಡಿ.ಕೆ. ಶಿವಕುಮಾರ …

Leave a Reply

Your email address will not be published. Required fields are marked *