Implement internal reservation without delay: Massive protest by Dalit Student Council

ವಿಜಯಪುರ. ಜೂನ್, 23 : ಒಳಮೀಸಲಾತಿ ಜಾರಿ ಮಾಡುತ್ತೇವೆ ಎಂದೇಳಿ ಕಾಲಹರಣ ಮಾಡುತ್ತಿರುವ ರಾಜ್ಯ ಸರ್ಕಾರದ ವಿಳಂಬ ನೀತಿ ಖಂಡನೀಯ. ಒಳಮೀಸಲಾತಿ ಜಾರಿ ವಿಳಂಬದಿಂದ ಒಳಮೀಸಲಾತಿ ನಿರೀಕ್ಷೆಯಲ್ಲಿರುವ ಸಮುದಾಯಗಳಿಗೆ ಮತ್ತು ಇದರಿಂದ ಯಾವುದೇ ಹೊಸ ನೇಮಕಾತಿಗಳಿಲ್ಲದೇ ಎಲ್ಲಾ ವರ್ಗದಿಂದ ಬರುವ ಲಕ್ಷಾಂತರ ವಿದ್ಯಾರ್ಥಿ, ನಿರುದ್ಯೋಗಿ ಯುವಜನರ ಅಂತಕದಲ್ಲಿ ಇದ್ದಾರೆ ಎಂದು ಜಿಲ್ಲಾ ಸಂಚಾಲಕರಾದ ಆದರ್ಶ ಗಸ್ತಿ ಯವರ ಹೇಳಿದರು.
ದಲಿತ ವಿದ್ಯಾರ್ಥಿ ಪರಿಷತ್ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಜಿಲ್ಲಾ ಉಪಾಧ್ಯಕ್ಷರಾದ ಸುದೀಪ್ ಐಹೊಳೆ ಅವರು,ಮೂರು ದಶಕಗಳಿಂದ ಒಳಮೀಸಲಾತಿಗಾಗಿ ಹೋರಾಡುತ್ತಿರುವ ಹೋರಾಟಗಾರ ತಾಳ್ಮೆ ಕಟ್ಟೆ ಒಡೆದಿದೆ ಇದರ ಜೊತೆಗೆ ಉದ್ಯೋಗ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿ, ನಿರುದ್ಯೋಗಿ ಯುವಜನರ ವಯಸ್ಸು ಮೀರುತ್ತಿದೆ, ವಿದ್ಯಾರ್ಥಿಗಳು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಹಲವಾರು ಹುದ್ದೆಗಳು ಖಾಲಿಯಿದ್ದು, ರಾಜ್ಯದಲ್ಲಿ ಪೋಲೀಸ್ ಅಧಿಕಾರಿಗಳ ಕೊರತೆ ಅಧಿಕವಾಗಿ ಇರುವುದಕ್ಕೆ ಇತ್ತೀಚೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಘಟನೆಯೇ ಸಾಕ್ಷಿ ಎಂದರು.
ಇದಲ್ಲದೇ ರಾಜ್ಯದಲ್ಲಿ ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ದಿ ಇಲಾಖೆ, ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಇಂಧನ ಇಲಾಖೆ, ಆರ್ಥಿಕ ಇಲಾಖೆ, ಲೋಕೋಪಯೋಗಿ ಇಲಾಖೆ, ಸಾರಿಗೆ ಇಲಾಖೆ, ತೋಟಗಾರಿಕಾ ಇಲಾಖೆ, ಶಿಕ್ಷಣ ಇಲಾಖೆ ಜೊತೆಗೆ ಇನ್ನೂ ಹಲವಾರು ಇಲಾಖೆಗಳಲ್ಲಿನ ಅಧಿಸೂಚನೆಗಳು ನೆನೆಗುದಿಗೆ ಬಿದ್ದಿದ್ದೂ ಒಳಮೀಸಲಾತಿ ವರದಿ ವಿಳಂಬದಿಂದಾಗಿ ಯಾವುದೇ ನೇಮಕಾತಿಗಳಿಲ್ಲದೇ ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಆದ್ದರಿಂದ ಮಾನ್ಯ ರಾಜ್ಯ ಸರ್ಕಾರ ಮೂರು ದಶಕಗಳಿಂದ ಒಳಮೀಸಲಾತಿಗಾಗಿ ಹೋರಾಡುತ್ತಿರುವ ಹೋರಾಟಗಾರ ತ್ಯಾಗ ಮತ್ತು ಬಲಿದಾನ ಜೊತೆಗೆ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಗೌರವಿಸುವ ಮೂಲಕ ಶೀಘ್ರವೇ ಒಳಮೀಸಲಾತಿ ಜಾರಿಮಾಡಿ, ಹೊಸ ನೇಮಕಾತಿ ಅಧಿಸೂಚನೆ ಹೊರಡಿಸುವ ಮೂಲಕ ನಾಡಿನ ಎಲ್ಲಾ ವರ್ಗದ ವಿದ್ಯಾರ್ಥಿ ಯುವಜನರಿಗೆ ಉದ್ಯೋಗ ನೀಡಬೇಕು ಎಂದು ಸುದೀಪ ಐಹೊಳೆ ಹೇಳಿದರು.
ಈ ವೇಳೆ ಮುಖಂಡರಾದ ಮಾಂತೇಶ ಸನದಿ, ಪರಶುರಾಮ್ ಭಜಂತ್ರಿ,
ಶಿವಂ ಕಾಂಬಳೆ, ಅಮಿತ್ ಪೂಜಾರಿ, ತುಷಾರ್ ಪೂಜಾರಿ, ಅಕ್ಷಯ್ ಮ್ಯಾಗೇರಿ, ರಾಹುಲ್ ಕಾಂಬಳೆ, ಅಲ್ಲದೇ ಹಲವು ವಿದ್ಯಾರ್ಥಿ ಯುವಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.