After bear attack, now 13 sheep killed in leopard attack Devappa neem farmer and farmers in distress

ವರದಿ ಮಂಗಳೇಶ ಮೆತಗಲ್ ಮಂಗಳೂರು
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ,: ಕೆಲವು ದಿನಗಳ ಹಿಂದೆ ಇದೇ ಭಾಗ ಮಂಗಳೂರು ಗ್ರಾಮದ ಹತ್ತಿರ ಕರಡಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತಬ್ಬನಿಗೆ ದಾಳಿ ಮಾಡಿತ್ತು. ಈಗ ನೆಲಜೇರಿ ಗ್ರಾಮದಲ್ಲಿ ಬುಧವಾರ ರಾತ್ರಿ ಚಿರತೆ ದಾಳಿ ಮಾಡಿ ಸುಮಾರು 13 ಕುರಿಗಳನ್ನು ಕೊಂದುಹಾಕಿದೆ.
ನೆಲಜೇರಿ ಗ್ರಾಮದ ದೇವಪ್ಪ ಬೇವಿನಗಿಡದ ಅವರಿಗೆ ಸೇರಿದ 13 ಕುರಿಗಳು ಚಿರತೆ ದಾಳಿಗೆ ಬಲಿಯಾಗಿವೆ. ದೇವಪ್ಪ ಅವರ ಕೊಟ್ಟಿಗೆಯಲ್ಲಿ ಇದ್ದ ಕುರಿಗಳ ಮೇಲೆ ಚಿರತೆ ದಾಳಿ ನಡೆಸಿದೆ. ಇದರಿಂದ ರೈತನಿಗೆ ಲಕ್ಷಾಂತರ ನಷ್ಟ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಸರ್ಕಾರದಿಂದ ಪರಿಹಾರ ಕೊಡಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಚಿರತೆ ಹಾವಳಿ ತಪ್ಪಿಸಲು ಆಗ್ರಹ : ಗ್ರಾಮಗಳಲ್ಲಿ ಚಿರತೆ ಬಂದಿದ್ದು, ಇದರಿಂದ ರೈತರು ಹಸು, ಕರು, ಎಮ್ಮೆ ಮೇಕೆ, ಕುರಿಗಳನ್ನು ಮೇಯಿಸಲು ಭಯಪಡುವ ಸ್ಥಿತಿ ಇದೆ. ಚಿರತೆ ದಾಳಿಯಿಂದ ಈಗಾಗಲೇ ಸಾಕು ಪ್ರಾಣಿಗಳನ್ನು ಕಳೆದುಕೊಂಡಿದ್ದೇವೆ. ಚಿರತೆ ಹಾವಳಿ ತಪ್ಪಿಸಲು ಶಾಶ್ವತ ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದರು.
ಅರಣ್ಯ ಇಲಾಖೆಯ ಅಧಿಕಾರಿ ಲಿಂಗರಾಜ ಕನ್ನಾಳ, ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳು ಡಾ. ಬಾಪುಗೌಡ್ ಪಾಟೀಲ್, ಡಾ. ಸುಷ್ಮಾ ಬೆಲ್ಲದ ಅರಣ್ಯ ಇಲಾಖೆ ಸಿಬ್ಬಂದಿಗಳು ಮತ್ತು ಪಶು ಸಂಗೋಪನೆ ಇಲಾಖೆ ಸಿಬ್ಬಂದಿಗಳು ಗ್ರಾ.ಪ. ನೆಲಜೇರಿ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಮತ್ತು ಗ್ರಾಮದ ಎಲ್ಲಾ ಹಿರಿಯರು ಮುಖಂಡರು ಯುವಕ ಮಿತ್ರರು ಹಾಗೂ ಸುತ್ತಮುತ್ತಲಿನ ಅನೇಕರು ನೋಡಲು ಆಗಮಿಸಿದ್ದರು
ವರದಿ ಮಂಗಳೇಶ ಮೆತಗಲ್ ಮಂಗಳೂರು