State government withdraws land acquisition of Devanahalli farmers' lands: Welcome

ಗಂಗಾವತಿ: ದೇವನಹಳ್ಳಿ ರೈತರ ಕೃಷಿ ಜಮೀನುಗಳನ್ನು ಭೂಸ್ವಾಧೀನಪಡಿಸಿಕೊಳ್ಳಲು ಮುಂದಾಗಿದ್ದ ರಾಜ್ಯ ಸರ್ಕಾರದ ವಿರುದ್ಧ ರೈತರು, ಪ್ರಗತಿಪರರು ಹಾಗೂ ವಿವಿಧ ಸಂಘ-ಸAಸ್ಥೆಗಳು ಹೋರಾಟ ನಡೆಸಿದ್ದಕ್ಕಾಗಿ ಸರ್ಕಾರ ರೈತರ ಪರ ನಿಲುವು ಹೊಂದಿ, ಭೂಸ್ವಾಧೀನ ಕ್ರಮವನ್ನು ಹಿಂಪಡೆದಿರುವುದು ಸ್ವಾಗತಾರ್ಹವಾಗಿದೆ ಎಂದು ಕ್ರಾಂತಿಚಕ್ರ ಬಳಗದ ರಾಜ್ಯಾಧ್ಯಕ್ಷರಾದ ಭಾರಧ್ವಾಜ್ ಪ್ರಕಟಣೆಯಲ್ಲಿ ತಿಳಿಸಿದರು.
ಸುಮಾರು ದಿನಗಳಿಂದ ನಡೆಯುತ್ತಿರುವ ಈ ಹೋರಾಟವು ತೀವ್ರಗೊಂಡು, ಸರ್ಕಾರಕ್ಕೆ ಗಡುವು ನೀಡಿ ಒತ್ತಾಯಿಸಲಾಗಿತ್ತು.
ರೈತರ ಈ ಒತ್ತಾಯಕ್ಕೆ ಮಣಿದ ಸರ್ಕಾರ ರೈತರ ಭೂಮಿಗಳ ಭೂಸ್ವಾಧೀನಪಡಿಸಿಕೊಳ್ಳುವ ಕ್ರಮವನ್ನು ಹಿಂಪಡೆದಿರುವುದರಿAದ ರೈತರ ಹೋರಾಟಕ್ಕೆ ಜಯ ಸಿಕ್ಕಿದೆ. ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಹಾಗೂ ರೈತ ಮುಖಂಡರಿಗೆ ಕ್ರಾಂತಿಚಕ್ರ ಬಳಗ ಅಭಿನಂದಿಸುತ್ತದೆ ಎಂದು ತಿಳಿಸಿದರು.