Magalamani demands inspection of poor electrical poles.

ಗಂಗಾವತಿ— 15-ಗಂಗಾವತಿ ನಗರದಲ್ಲಿ ಅಳವಡಿಸುತ್ತಿರುವ ವಿದ್ಯುತ್ ಕಂಬಗಳು ಕಳಪೆ ಮಟ್ಟಗಳಿಂದ ಕೂಡಿವೆ ಸಂಭಂದ ಪಟ್ಟ ಅಧಿಕಾರಿಗಳು ಪರಿಶೀಲನೆ ಮಾಡಬೇಕೆಂದು ಕೊಪ್ಪಳ ಜಿಲ್ಲಾ ಸರ್ವಾ0ಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಆಗ್ರಹಿಸಿದ್ದಾರೆ. ಮೊದಲಿದ್ದ ಕಂಬಗಳೇ ಉತ್ತಮವಾಗಿದ್ದು ಈಗ ಅಳವಡಿಸುತ್ತಿರುವ ಕಂಬಗಳು ತೀರಾ ಕಳಪೆ ಯಿಂದ ಕೂಡಿವೆ ಅವುಗಳಿಗೆ ಬಣ್ಣ ಹಚ್ಚಿ ಅಲಂಕಾರ ಮಾಡಿ ಹಣ ಹೊಡೆಯುವ ಕೆಲಸವಾಗುತ್ತಿದೆ ಎಂದು ಮ್ಯಾಗಳಮನಿ ಆರೋಪಿಸಿದ್ದಾರೆ. ಇದರ ಬಗ್ಗೆ ಗಂಭೀರವಾಗಿ ತೆಗೆದುಕೊಳ್ಳಬೇಕು. ಹೇಗೋ ಮಾಡಿ ಕೆಲಸ ಮುಗಿತು ಬಿಲ್ ಎತ್ತಿಬಿಡೋಣ ಎನ್ನುವ ಮನಸಿದ್ದರೆ, ಅದನ್ನು ಮನಸ್ಸಿನಿಂದ ತೆಗೆದುಬಿಡಿ ಎಂದು ಗುತ್ತಿಗೆದಾರರಿಗೆ ಹಾಗೂ ಹಾಗೂ ಸಂಬಂಧಪಟ್ಟ ಇಂಜನೀಯರ್ ಗೆ ಎಚ್ಚರಿಕೆ ಘಂಟೆ ಎಂದಿದ್ದಾರೆ. ನಾವು ಕಳಪೆಗೆ ಅವಕಾಶ ನೀಡುವದಿಲ್ಲ. ಲೋಕಾಯುಕ್ತರಿಗೆ ದೂರು ನೀಡಿ ಭ್ರಷ್ಟಾಚಾರದಲ್ಲಿ ಭಾಗವಹಿಸಿದ ಅಧಿಕಾರಿಗಳ ಕ್ರಮಕ್ಕಾಗಿ ಹಾಗೂ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಕಾನೂನು ಹೋರಾಟ ಹಮ್ಮಿಕೊಳ್ಳಲಾಗುವದು. ಅದಕ್ಕೆ ಅವಕಾಶ ಮಾಡದೇ ಕೂಡಲೇ ಕಳಪೆ ಕಂಬಗಳನ್ನು ತೆಗೆದು ಉತ್ತಮ ಕಂಬಗಳನ್ನು ಅಳವಡಿಸಲು ಮುಂದಾಗಬೇಕೆಂದು ಮ್ಯಾಗಳಮನಿ ಆಗ್ರಹಿಸಿದ್ದಾರೆ.ಗಂಗಾವತಿ ನಗರದಲ್ಲಿ ನಡೆಯುವ ವಿದ್ಯುತ್ ಕಂಬಗಳ ಹಾಗೂ ರಸ್ತೆ ನಿರ್ಮಾಣಕ್ಕಾಗಿ ಯಾವ ಇಲಾಖೆಯಿಂದ ಎಷ್ಟು ಹಣ ಮಂಜೂರಾಗಿದೆ,ಗುತ್ತಿಗೆದಾ ರರ ಹೆಸರು, ಇಂಜನೀಯರ್ ಹೆಸರು. ಇನ್ನಿತರ ಮಾಹಿತಿಗಳುಳ್ಳ ನಾಮ ಫಲಕ ಸಾರ್ವಜನಿಕ ಮಾಹಿತಿಗಾಗಿ ಹಾಕದೆ ಹೇಳುವವರಿಲ್ಲ, ಕೇಳುವವರಿಲ್ಲ ಎಂದು ತಿಳಿದುಕೊಂಡು ಹುಚ್ಚರ ಮದುವೆಯಲ್ಲಿ ಉಂಡವರೇ ಜಾಣರೆಂದು ಯಾರಾದರೂ ತಿಳಿದುಕೊಂಡಿದ್ದರೆ ಅದು ಅವರ ಮೂರ್ಖತನ ಗಂಗಾವತಿಯ ಜನರ ಸಹನೆ ಮತ್ತು ಸಹಕಾರ ದುರುಪಯೋಗ ಪಡಿಸಿಕೊಳ್ಳಬಾರದೆಂದು ಇದೇ ವೇಳೆ ಮ್ಯಾಗಳಮನಿ ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ಚಂದ್ರು ನಿಸರ್ಗ, ಜಡಿಯಪ್ಪ ಹಂಚಿನಾಳ, ರಾಘು ಕಡೆಬಾಗಿಲು, ದುರ್ಗೇಶ್ ಹೊಸಳ್ಳಿ, ಕೃಷ್ಣ ಮೆಟ್ರಿ, ರಾಮಣ್ಣ ರುದ್ರಾಕ್ಷಿ, ಬಸವರಾಜ್ ನಾಯಕ, ಮಂಜುನಾಥ ಚನ್ನಾದಾಸರ, ಪಂಪಾಪತಿ ಕುರಿ,ಮುತ್ತು, ನರಸಪ್ಪ, ಹಾಲಪ್ಪ, ಜಂಬಣ್ಣ, ಹುಲ್ಲೇಶ್, ರಮೇಶ್ ಮತ್ತಿತರರು ಇದ್ದರು.