Poor drainage work blamed on negligence of officials: HC Hanchinala.

ಗಂಗಾವತಿ: ಚರಂಡಿ ಮೇಲೆ ಇರುವ (ಕಟ್ಟಡಗಳು)
ಗೋಡೆಗಳನ್ನು ಮೊದಲ ತೆರವುಗೊಳಿಸಿ,ನಂತರ ಚರಂಡಿ ಕಾಮಗಾರಿ ಮಾಡಿ.ಚರಂಡಿಯನ್ನು ಒತ್ತುವರಿ ಮಾಡಿಕೊಂಡು ಅದರ ಮೇಲೆ ಮನೆಯ ಶೆಡ್ ಗಳು ನಿರ್ಮಾಣ ಮಾಡಿದ್ದಾರೆ. ಸಂಭದ ಪಟ್ಟ ಅಧಿಕಾರಗಳು ಎಲ್ಲಾ ಗೊತ್ತಿದ್ದರೂ ಮೌನವಾಗಿದ್ದಾರೆ ಎಂದು ಎಚ್ ಸಿ.ಹಂಚಿನಾಳ. ಆರೊಪಿಸಿದ್ದಾರೆ.
ನಗರಸಭೆ ಅಧಿಕಾರಿಗಳು ಅದನ್ನು ತೆರವುಗೊಳಿಸಿ ಚರಂಡಿ ಕಾಮಗಾರಿ ಮಾಡಬೇಕು ಎಂದು ಎಚ್ ಸಿ ಹಂಚಿನಾಳ ಹೇಳಿದರು.
ನಗರಸಭೆ ವ್ಯಾಪ್ತಿಯಲ್ಲಿ ಬರುವ ವಾರ್ಡ್ ಚಲುವಾದಿ ಹಿರೇಜಂತಕಲ್ಲ. ಈ ವಾರ್ಡ ಸ್ಲಾಮ್ ನಿವಾಸಿಗಳು ಇರುವ ವಾರ್ಡ್ ಅದರೆ ಅಭಿವೃದ್ಧಿ ವಿಚಾರದಲ್ಲಿ ತುಂಬಾ ಹಿಂದುಳಿದ ವಾರ್ಡ.ವಿಶೇಷವಾಗಿ ಕೊಳ ಗೇರಿ ಅಭಿವೃದ್ಧಿ ಮಂಡಳಿಯಿಂದ ಬರುವ ಅನುದಾನದ ( ಸ್ಲಾಮ್ ನಿಧಿ)ಬಳಸಿಕೊಂಡು ವಾರ್ಡ ನ ಅಭಿವೃದ್ಧಿ ಮಾಡಬೇಕು. ಸ್ಲಾಮ್ ನಿಧಿಯ 2024 ಮತ್ತು2025 ನೇ ಸಾಲಿನಲ್ಲಿ ಬಂದ ಅನುದಾನ ಸುಮಾರು ಅರುವತ್ತು ಐದು (65) ಲಕ್ಷ ರೂಪಾಯಿ. ಈ ಕಾಮಗಾರಿ ಮಾಡಲು ನಿರ್ಮಿತಿ ಕೇಂದ್ರ ಗುತ್ತಿಗೆದಾರರು ತೆಗಕೊಂಡು ಕಾಮಗಾರಿ ಮಾಡುತ್ತಿದ್ದಾರೆ. ಸಿಸಿರಸ್ತೆ ಮತ್ತು ಶೌಚಾಲಯ ,ಚರಂಡಿ ಕಾಮಗಾರಿ ನಡೆಯುತ್ತಿದೆ.
ಆಗಲೇ ಸಿಸಿ ರಸ್ತೆಯು ಕಳಪೆ ಮಟ್ಟದ ಕಾಮಗಾರಿ ಮಾಡಿ,೩೦ ಲಕ್ಷ ರೂಪಾಯಿ ಎತ್ತವಳಿ ಮಾಡಿದ್ದಾರೆ. ಇನ್ನೂ ಉಳಿದ ಅನುದಾನದ ಚರಂಡಿ ಕಾಮಗಾರಿ ಮಾಡಿ.ಎತ್ತವಳಿ ಮಾಡವವರು ತಕ್ಷಣ ನಗರಸಭೆ ಪೌರಯುಕ್ತರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಬಂದು ಸ್ಥಳ ಪರಿಶೀಲಿಸಿ ಕಾಮಗಾರಿ ಮಾಡಬೇಕು ಎಂದು ತಿಳಿಸಿದರು.
ಚರಂಡಿ ಕಾಮಗಾರಿ ಅರಂಭವಾಗಿದ್ದು.ಅದರೆ ಹಳೆಯ ಚರಂಡಿ ಮೇಲೆ ಕಾಂಕ್ರೀಟ್ ಹಾಕಿ ಅದಕ್ಕೆ ತೆಪೆ ಹಚ್ಚಿ ಅರೆ ಬರೆ ಕಾಮಗಾರಿ ಮಾಡಿ ಬಿಲ್ ಎತ್ತವಳಿ ಮಾಡುತ್ತಿದ್ದಾರೆ.ಚರಂಡಿಯನ್ನು ವತ್ತುವರಿ ಮಾಡಿ ಶೌಚಾಲಯ ನಿರ್ಮಾಣ ಮಾಡಿದ್ದಾರೆ. ಅದನ್ನು ತೆರವುಗೊಳಿಸದೆ.ಬೇಕ ಬಿಟ್ಟಿಗೆ ಚರಂಡಿ ನಿರ್ಮಾಣ ಮಾಡುತ್ತಿರುವುದ ಸರಿಯಲ್ಲ ಎಂದು ಹೇಳಿದರು. ಗುತ್ತಿಗೆದಾರರು ಹಾಗೂ ನಗರಸಭೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಕಾಮಗಾರಿ
ಮುಂದುವರಿಸಬೇಕು.ಬೇಕ ಬಿಟ್ಟಿಗೆ ಕಳೆಪ ಕಾಮಗಾರಿ ಮಾಡಿದ್ರೆ ಹೋರಾಟ ಮಾಡಬೇಕಾದ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು. ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪ ಮಾಡಿದ್ದರು. ನಗರಸಭೆ ಇಂಜಿನಿಯರ್ ( ಲ್ಯಾಂಡ್ ಅರ್ಮಿ) ರವರ ಸರಿಯಾಗಿ ಕಾಮಗಾರಿ ಮಾಡದೆ ಹಳೆಯ ಚರಂಡಿಗೆ ಬಣ್ಣ ಹಚ್ಚುವ ಮೂಲಕ ಗುತ್ತಿಗೆದಾರರು ಬಿಲ್ ಎತ್ತವಳಿ ಮಾಡಿದ್ದಾರೆ. ಖುದ್ದು ನಗರಸಭೆ ಅಧಿಕಾರಿಗಳು ಬಂದ ಪರಿಶೀಲಿಸಿ ಅಮೇಲೆ ಬೇಕಾದರೆ ಕಾಮಗಾರಿ ಮಾಡಿ ಎಂದು ತಿಳಿಸಿದರು.