Let the parks develop; let the fence fall into encroachment.

ಸಚೀನ ಆರ್ ಜಾಧವ
ಜಮಖಂಡಿ: ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ೩೫ ಉದ್ಯಾನವನಗಳಿದ್ದು, ಕಳೆದ ೫ ವರ್ಷದಲ್ಲಿ ಒಟ್ಟು ೯೪ ಹೊಸ ಲೇಔಟ್‌ಗಳು ಸೇರಿದಂತೆ ಒಟ್ಟು ೧೧೦ಕ್ಕೂ ಹೆಚ್ಚು ಉದ್ಯಾನವಾಗಳಿವೆ. ಕೆಲವು ಖಾಸಗಿಯವರ ಪಾಲಾದರೆ, ಕೆಲವು ಹೆಸರಿಗಷ್ಟೆ ಉದ್ಯಾನವನಗಳಾಗಿದ್ದು. ಬೆರಳೆನಿಕೆಯಷ್ಟು ಮಾತ್ರ ಎಲ್ಲ ಸೌಕರ್ಯಗಳನ್ನು ಹೊಂದಿವೆ. ಉದ್ಯಾನವನಗಳ ಉಳಿವಿದೆ ಬೇಕಿದೆ ಪರಿಹಾರ ಎಂದು ಸಾರ್ವಜನಿಕರ ಒತ್ತಾಯವಾಗಿದೆ.
ಜಮಖಂಡಿ ನಗರದಲ್ಲಿ ಹಲವಾರು ಉದ್ಯಾನವನಗಳಿಗೆ ಗತಿ ಇಲ್ಲದಂತಾಗಿದ್ದು, ವಾಯುವಿಹಾರಕ್ಕೆಂದು ತೆರಳುವ ಸಾರ್ವಜನಿಕರಿಗೆ ಅನಾನೂಕುಲಗಳಾಗಿವೆ, ಕೆಲವು ಒತ್ತುವರಿಯಿಂದ ಖಾಸಗಿಗಳ ಪಾಲಾಗಿವೆ. ಇನ್ನು ಕೆಲವು ಮೂಲ ಸೌಕರ್ಯಗಳಾದ, ಕುಳಿತುಕೊಳ್ಳಲು ಆಸನಗಳ ಕೊರತೆ, ಮಕ್ಕಳಿಗೆ ಆಟಿಕೆ ಸಾಮಗ್ರಿಗಳು, ಸರಿಯಾದ ರಸ್ತೆಗಳಿಲ್ಲದೆ, ನಿಂತ ಮಳೆ ನೀರು, ಬೆಳೆದ ಗಿಡಗಂಟಿಗಳಿAದ ತುಂಬಿದ್ದು ವಾಯುವಿಹಾರಕ್ಕೆ ತೆರಳುವ ಸಾರ್ವಜನಿಕರಿಗೆ ಶುದ್ದ ಗಾಳಿಗೆ ಬದಲಾಗಿ, ಅಶುದ್ದ ವಾತಾವರಣ ನಿರ್ಮಾಣಗೊಂಡು ರೋಗರುಜುಣುಗಳಿಗೆ ಕಾರಣವಾಗಿದೆ.
ವಾಯು ವಿಹಾರ, ವಿಶ್ರಾಂತಿ ಹಾಗೂ ಮಕ್ಕಳ ಆಟೋಟದ ಉದ್ದೇಶದಿಂದ ನಿರ್ಮಿಸಲಾಗಿದ್ದ ಉದ್ಯಾನಗಳು ಪ್ರಭಾವಿಗಳ ಅತಿಕ್ರಮಣದಿಂದ ಮಾಯವಾಗುತ್ತಿದ್ದು, ಬೆಳಗಿನ ಜಾವ ಮನೋಲ್ಲಾಸ ಹಾಗೂ ದೈಹಿಕ ಆರೋಗ್ಯಕ್ಕಾಗಿ ನಿರ್ಮಿಸಲಾಗಿರುವ ನಗರದಲ್ಲಿನ ಹಲವಾರು ಉದ್ಯಾನಗಳು ಖಾಸಗಿಯವರ ಪಾಲಾಗುತ್ತಿವೆ. ನಗರದ ಕಡೇವಾಡಿ ಆಸತ್ರೆ ಹತ್ತಿರದ ನಗರಸಭೆ ವ್ಯಾಪ್ತಿಗೆ ಒಳಪಡುವ ಉದ್ಯಾನವನದ ಸರಕಾರಿ ಆಸ್ತಿಯನ್ನು ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು ಕಾಂಪೌಂಡ್ ಒಡೆದು ಪ್ರವೇಶ ದ್ವಾರದ ಗೇಟ್ ಮಾಡಿ ಕೊಂಡು ಉದ್ಯಾನವನದ ಜಾಗವನ್ನು ಸ್ವಂತಕ್ಕಾಗಿ ಬಳಸಿಕೊಳ್ಳುತ್ತಿವೆ, ಇನ್ನು ನಗರದ ಕೇಂದ್ರ ಬಿಂದುವಾಗಿದ್ದ ಪರಶುರಾಮ ಗಾರ್ಡನ್ ಆಟೋರಿಕ್ಷಾ ಸ್ಟಾಂಡ ಆಗಿ ಬದಲಾಗಿದೆ. ಇನ್ನು ಕೆಲವೆಡೆ ಅಭಿವೃದ್ದಿಕಾಣದೆ ಹಾಳಾಗಿ ದುಸ್ಥಿತಿಯಲ್ಲಿವೆ. ನಗರದಲ್ಲಿನ ಉದ್ಯಾನಗಳನ್ನು ಅಭಿವೃದ್ಧಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಡಬೇಕು ಎನ್ನುತ್ತಾರೆ ಸಾರ್ವಜನಿಕರು.
1) ಬಾಕ್ಸ-೧ ಉತ್ತಮ ಕಾರ್ಯ ಬೇಗ ಪೂರ್ಣಗೊಳ್ಳಲಿ
ಸ್ಥಳೀಯ ನಗರ ಯೋಜನಾ ಪ್ರಾಧಿಕಾರದಲ್ಲಿನ ಕೆರೆ ಅಭಿವೃದ್ಧಿ ಖಾತೆಯಲ್ಲಿ ಜಮಾ ಆಗಿರುವ ೧.೨೦ ಕೋಟಿ ಬಳಸಿಕೊಂಡು ಸಣ್ಣ ನೀರಾವರಿ ಇಲಾಖೆಗೆ ಸುಸಜ್ಜಿತ ಉದ್ಯಾನವಣ ನಿರ್ಮಿಸುವ ನೀಡಲಾಗಿದೆ. ಲಕ್ಕನಕೆರೆಯ ಒಂದು ಎಕರೆ ಜಾಗದಲ್ಲಿ ಅಂದಾಜು ೬೦ ಲಕ್ಷ ವೆಚ್ಚದಲ್ಲಿ ಇಗ ಉದ್ಯಾನವಣದ ಶೇ೭೦ರಷ್ಟು ಕಟ್ಟಡದ ಕಾರ್ಯ ನಿರ್ಮಾನಗೊಂಡಿದ್ದು, ೮ ಅಡಿ ಎತ್ತರದ ಪಂಚಲೋಹದ ಸ್ವಾಮಿ ವಿವೇಕಾನಂದರ ಪುತ್ಥಳಿ, ಎತ್ತರದ ತ್ರಿವರ್ಣ ರಾಷ್ಟ್ರಧ್ವಜ, ಗಿಡ ಮರಗಳನ್ನು ನಡುವುದು, ಎಲ್ಲ ವಯೋಮಾನದ ಜನರಿಗೆ ಉಪಯುಕ್ತವಾಗುವ ಸುಸಜ್ಜಿತ ಉದ್ಯಾನ ಸಹಿತ ಮಕ್ಕಳಿಗೆ ಕ್ರೀಡಾ ಚಟುವಟಿಕೆ, ಮನರಂಜನೆ, ರಾತ್ರಿ ವೇಳೆಯಲ್ಲಿ ವಿದ್ಯುತ್ ಅಲಂಕಾರ ದೀಪಗಳ ಅಳವಡಿಕೆ ಕಾಮಗಾರಿ ಬಾಕಿ ಇದೆ ಶಿಘ್ರವೇ ಪೂರ್ಣಗೊಳ್ಳಿದೆ.
-ಅನ್ವರ ಮೋಮಿನ.
ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷರು ಜಮಖಂಡಿ.
ಉದ್ಯಾನವನ ಅಭಿವೃದ್ದಿಗೆ ಆಸಕ್ತಿ ವಹಿಸುತ್ತೇವೆ ದೇಸಾಯಿ ವೃತ್ತದ ಪರಶುರಾಮ ಗಾರ್ಡನ್, ಪಿಡಬ್ಲ್ಯೂಡಿ ಕಾಂಪೌಂಡ್ ಕೆಡವಿದ್ದರು ಅದು ಡಿಸಿ ಕೋರ್ಟ್ನಿಂದ ಬಂದಿದ್ದು ಡಿಪಿಆರ್ ಸಿದ್ದವಾಗಿದ್ದು ಟೆಂಡರ ಕರೆಯುವ ಹಂತದಲ್ಲಿದೆ. ಒತ್ತುವರಿಯಾದ ಕಡ್ಲೆವಾಡಿ ದಬವಾಖಾನೆ ಹತ್ತಿರದ ಉದ್ಯಾನವನ ಶೀಘ್ರವೆ ಅಲ್ಲಿ ಸರ್ವೇ ಮಾಡಿಸಿ ಅಲ್ಲಿನ ನೂತನ ಅದ್ಯಕ್ಷರಿಂದ ಅಗಸ್ಟನಲ್ಲಿ ಉದ್ಘಾಟನೆಗೊಳಿಸುವ ಪ್ರಯತ್ನದಲ್ಲಿದ್ದೆವೆ. ಶೇ.೭೦ ರಷ್ಟು ಉದ್ಯಾನವನ ಅಭಿವೃದ್ಧಿ ಹೊಂದಿವೆ. ಕೆಲವು ಅತಿಕ್ರಮಣ ಗೊಂಡ ಉದ್ಯಾನವನಗಳ ಬಗ್ಗೆ ಈಗಾಗಲೇ ಕೆಲವೆಡೆ ನೋಟಿಸ್ ನೀಡಿದ್ದು, ಮಾಹಿತಿ ಕಲೆ ಹಾಕಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
–ಜ್ಯೋತಿ ಗಿರೀಶ
ನಗರಸಭೆ ಪೌರಾಯುಕ್ತ, ಜಮಖಂಡಿ.