Gangavathi DySP Siddalingappa Gowda Patil and City Station PI Prakash Mali were honored by SP Dr. Rama L. Arasiddi with letters of appreciation.

ಗಂಗಾವತಿ: ಗಂಗಾವತಿ ಪೊಲೀಸ್ ಉಪವಿಭಾಗದಲ್ಲಿ ದೀರ್ಘಕಾಲ ದಿಂದ ಬಾಕಿ ಇರುವ ಪ್ರಕರಣಗಳಲ್ಲಿ ತಲೆಮರಿಸಿಕೊಂಡಿದ್ದ ಅಪರಾಧಿಗಳನ್ನು ಹಾಗೂ ಅನೇಕ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಕ್ರಮಕೈಗೊಂಡ ಗಂಗಾವತಿ ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ, ನಗರ ಠಾಣೆ ಪಿಐ ಪ್ರಕಾಶ ಮಾಳಿ ಇವರನ್ನು ಎಸ್ಪಿ ಡಾ.ರಾಮ ಎಲ್ ಆರಸಿದ್ದಿ ಅವರು ಪ್ರಶಂಸನಾ ಪತ್ರ ನೀಡಿ ಗೌರವಿಸಿದರು.