Breaking News

ಮೋಸ ಮಾಡಿದ ಕಂಪನಿಗಳು ಬಡವರ ಹಣ ಮಾಯ ಮರುಪಾವತಿಗಾಗಿ ಹೋರಾಟಕ್ಕೆ ಬನ್ನಿ : ಶರಣಬಸಪ್ಪ ದಾನಕೈ

Come and fight for the refund of money that was stolen from the poor by the companies that cheated them: Sharanabasappa Danakai

( ಜುಲೈ ೧೨ ರಂದು ಕೂಡಲಸಂಗಮದಲ್ಲಿ ರಾಜ್ಯ ಮಟ್ಟದ ಸಮಾವೇಶ )

ಜಾಹೀರಾತು

ಕೊಪ್ಪಳ: ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯವರ ಕಛೆರಿ ಮುಂಭಾಗದಲ್ಲಿ ೨ ತಿಂಗಳ ನಿರಂತವಾಗಿ ಟಿಪಿಜೆಪಿ ಸಂಘಟನೆಯಿಂದ ರಾಜ್ಯದ ಪ್ರತಿಯೊಂದು ಜಿಲ್ಲೇಯ ಅದ್ಯಕ್ಷರು ಹಾಗು ತಾಲೂಕು ಅದ್ಯಕ್ಷರು, ಪದಾಧಿಕಾರಿಗಳು, ರೈತ ಮುಖಂಡರು, ವಿವಿಧ ಜನಪರ ಸಂಘಟನೆಗಳ ಮುಖಂಡರ ಸಮ್ಮುಖದಲ್ಲಿ ಅನಿರ್ದಿಷ್ಟ ಹೋರಾಟವನ್ನು ಮಾಡುತ್ತಾ ಹೋರಾಟದ ಹಾದಿಯಲ್ಲಿ ಸಾಗಿ ,ವಿವಿಧ ಜಲ್ಲೆಯಲ್ಲಿ ಹೋರಾಟ ಮಾಡಿ ಈಗ ರಾಜ್ಯ ಮಟ್ಟದ ಸಮಾವೇಶವನ್ನು ಬಾಗಲಕೋಟಿ ಜಿಲ್ಲೆಯ ಹುನಗುಂದ ತಾಲೂಕಿನ ಕುಡಲಸಂಗಮ ಕ್ಷೇತ್ರದ ಸಭಾ ಭವನದಲ್ಲಿ ಜುಲೈ ೧೨ ರಂದು ಶನಿವಾರ ಬೆಳಿಗ್ಗೆ ೧೧ ಗಂಟೆಗೆ ಸಮಾವೇಶ ಜರುಗುವದು ಎಂದು ಹೋರಾಟ ಸಮಿತಿ ಹಾಗು ರೈತ ಮುಖಂಡ ಶರಣಬಸಪ್ಪ ದಾನಕೈ ಅವರು ಸಮಾವೇಶ ಯಶಸ್ವಿಗೋಳಿಸಲು ವಿನಂತಿಸಿದ್ದಾರೆ. ಸಭೆಯಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ,ಉಪ ಮುಖ್ಯಮಂತ್ರಿ ,ಹಾಗು ಕಂದಾಯ ಸಚಿವರು, ಸಂಸದರು,ಉಸ್ತುವಾರಿ ಸಚಿವರು ಶಾಸಕರು ,ಹಾಗು ಟಿ.ಪಿ.ಜೆ.ಪಿ ಸಂಘಟನೆಯ ರಾಜ್ಯ ಅದ್ಯಕ್ಚ ಅಪ್ಪಾಸಾಹೇಬ ಬುಗಡೆ ಸೇರಿದಂತೆ ಸಂಘಟೆಯ ರಾಜ್ಯದ ಹೊರಾಟಗಾರರು, ಜಿಲ್ಲಾ ಹಾಗು ತಾಲೂಕಾ ಅದ್ಯಕ್ಷರು ಪದಾಧಿಕಾರಿಗಳು, ಎಜೆಂಟರು, ಗ್ರಾಹಕರು ಸೇರಿ ಅಂದಾಜು ೨ ಲಕ್ಷ ಅಧಿಕವಾಗಿ ಸೇರುವ ನಿರೀಕ್ಷೆ ಇದೆ. ಜನರು ,ವಿವಿಧ ಕಂಪನಿಗಳಾದ ಗ್ರೀನ ಬಡ್ರ ಆಗ್ರೋ ಫಾರಂ.ಲಿಂ. ಸಮೃದ್ಧ ಜೀವನ, ಪಲ್ಸ, ವ್ಹಿತ್ರಿ, ಗುರುಟೀಕ್ ಹಿಗೇ ಹಲವಾರು ಕಂಪನಿಗಳಲ್ಲಿ ಮುಂದಿನ ಜೀವನಕ್ಕಾಗಿ, ಮಕ್ಕಳ ವಿಧ್ಯಾಭ್ಯಾಸ, ಮದುವೆ, ಮನೆ ಹೊಲ ಖರೀದಿಗಾಗಿ ಹಿಗೇ ಹಲವಾರು ಕನಸುಗಳನ್ನು ಇಟ್ಟು ಕೊಂಡು ಹಣ ಹೂಡಿಕೆ ಮಾಡಿ ಕಂಗಾಲಾಗಿದ್ದಾರೆ ಆದ್ದರಿಂದ ಹಣ ಕೊಡಿಸಿ ಪ್ರಾಣ ಉಳಿಸಿ ಕಾರ್ಯಕ್ರಮದಲ್ಲಿ ನಮ್ಮ ಹೋರಾಟಕ್ಕೆ ಜೀವ ಕೊಡುವಲ್ಲಿ ರಾಜ್ಯ ಹಾಗು ಕೇಂದ್ರ ಸರ್ಕಾರ ಮುಂದಾಗ ಬೇಕೆಂದು ಹೊರಾಟ ಸಮಿತಿಯ ಸಂಚಾಲಕ ಶರಣಬಸಪ್ಪ ದಾನಕೈ ವಿನಂತಿಸಿದ್ದಾರೆ. ನಿರಂತವಾಗಿ ನಮ್ಮ ಸಂಘಟನೆ ೨ -೩ ವರ್ಷಗಳಿಂದ ಹೋರಾಟದ ಹಾದಿಯಲ್ಲಿ ಸಾಗಿಬಂದಿದೆ ಬಡವರಿಗೆ ಹಣ ಕೊಡಿಸುವದೆ ನಮ್ಮ ಗುರಿ ,ಬಡವರಿಗೆ ೧೦ ವರ್ಷ ಕಳೆದರು ಹಣ ಇದುವರೆಗೂ ಮರುಪಾವತಿಯಾಗಿಲ್ಲ ಆದ್ದರಿಂದ ಪಲ್ಸ, ಸಮೃದ್ದ ಜೀವನ, ಗ್ರೀನ್ ಬಡ್ಸ ,ವ್ಹಿತ್ರಿ, ಗುರುಟೀಕ್ ಹಿಗೇ ವಿವಿಧ ಕಂಪನಿಗಳಲ್ಲಿ ಎಜೇಂಟರು ಗ್ರಾಹಕರು ಮೋಸ ಹೋಗಿದ್ದಾರೆ ನಾವೇಲ್ಲರು
ಹೋರಾಟದ ಮೂಲಕ ನಮ್ಮ ನಮ್ಮ ಸಮಸ್ಯೆಯ ಪರಿಹಾರಕ್ಕೆ ಹಗಲು ರಾತ್ರಿ ಚಿಂತನೆ ಮಾಡುತ್ತಿದ್ದೇವೆ ,ಗ್ರಾಹಕರ ಹಣ ಮರುಪಾವತಿಗಾಗಿ ನಾವೇಲ್ಲರೂ ನಮ್ಮ ಸಂಕಲ್ಪ ದೊಂದಿಗೆ ಹೋರಾಡುತ್ತಿದ್ದೇವೆ,ನಮಗೆಲ್ಲರಿಗೂ ನಿರುದ್ಯೋಗ ಸಮಸ್ಸೆಯಿದ್ದರು ಹೋರಾಟದ ಹಾದಿಯನ್ನು ಬಿಟ್ಟಿಲ್ಲ ಕೇಲವು ಏಜೇಂಟರು ಗ್ರಾಹಕರನ್ನು ನಡು ನಿರಿನಲ್ಲಿ ಬಿಟ್ಟು ಹೋಗಿದ್ದಾರೆ , ಈ ರೀತಿ ಮಾಡುವದು ಸಮಂಜಸವಾದುದುದಲ್ಲ, ಬಡ ಗ್ರಾಹಕರು ಯಾವದೇ ಕಂಪನಿಗಳ ಎಂಡಿ ಮುಖವನ್ನು ನೋಡಿ ಹಣ ಕಟ್ಟಿಲ್ಲ ,ನಮ್ಮನ್ನು ನೋಡಿ ಹಣ ಕಟ್ಟಿದ್ದಾರೆ ಆದ್ದರಿಂದ ಎಜೇಂಟರಾದವರು ಗ್ರಾಹಕರ ಋಣ ತೀರಿಸ ಬೇಕಾದರೆ ಹೋರಾಟದ ಹಾದಿಯಲ್ಲಿ ಸಾಗಿದಾಗ ಪ್ರತಿಫಲ ಸಿಕ್ಕೆ ಸಿಗುತ್ತದೆ.
ಒಗ್ಗಟ್ಟಿನಿಂದ ಪ್ರತಿಯೊಬ್ಬರೂ ಹೋರಾಟದಲ್ಲಿ ಕೈಜೋಡಿಸಿದರೆ ಮಾತ್ರ ಯಶಸ್ಸು ಹಾಗೂ ಹಣ ಮರುಪಾವತಿ ಮಾಡಿಸಲು ಸಾಧ್ಯ ಎಂದು ಸಂಘಟನೆಯ ಮುಖಂಡ ಹಾಗು ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆಯ ವಾಸುದೇವ ಮೇಟಿ ಬಣದ ಯಲಬುರ್ಗಾ ತಾಲೂಕ ಅದ್ಯಕ್ಷ ಶರಣಬಸಪ್ಪ ದಾನಕೈ ಅವರು ಜುಲೈ ೧೨ ರಂದು ಶನಿವಾರ ಬೆಳಿಗ್ಗೆ ೧೧ ಕ್ಕೆ ಕೂಡಲಸಂಗಮದಲ್ಲಿ ಜರುಗುವ ಸಮಾವೇಶ ಯಶಸ್ವಿಗೋಳಿಸಬೇಕೆಂದು ವಿನಂತಿಸಿದ್ದಾರೆ.

About Mallikarjun

Check Also

ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ ಸಭೆಯಲ್ಲಿ ಮಹತ್ವದ ನಿರ್ಣಯ

Important decision taken at the District Level Guarantee Scheme Implementation Authority Committee meeting ಬ್ಯಾಂಕಿನ ಸಾಲಕ್ಕೆ …

Leave a Reply

Your email address will not be published. Required fields are marked *