The garbage disposal vehicle hasn't arrived for fifteen days! Who listens to the public's complaints?

ವರದಿ : ಪಂಚಯ್ಯ ಹಿರೇಮಠ.
ಕುಕನೂರು : ಪಟ್ಟಣದಲ್ಲಿ 19ವಾರ್ಡ್ ಗಳಿದ್ದು ಬೃಹದಾಕಾರವಾಗಿ ಬೆಳೆದಿದ್ದು, ಸುಮಾರು ನಲವತ್ತರಿಂದ ನಲವತೈದು ಸಾವಿರ ಜನ ಸಂಖ್ಯೆ ಹೊಂದಿದೆ. ಪ್ರತಿದಿನ ಸಾಕಷ್ಟು ಕಸ ಸಂಗ್ರಹಣೆಯಾಗುತ್ತಿದ್ದು ಇದನ್ನು ವಿಲೇವಾರಿ ಮಾಡಲು ವಾರ್ಡ್ ಗಳಲ್ಲಿ, ರಸ್ತೆ ಬದಿಗಳಿಗೆ ವಾಹನ ಬರದೇ ಇರುವುದರಿಂದ ಸಾರ್ವಜನಿಕರು ಕಸ ವಿಲೇವಾರಿ ಮಾಡಲು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ?
ಇಲ್ಲಿನ ಎಲ್ಲಾ ವಾರ್ಡ್ ನಿವಾಸಿಗಳು ಸೇರಿದಂತೆ ಅಂಗಡಿ ಮುಂಗಟ್ಟಿನವರು, ಕಾಯಿ ಪಲ್ಯೆ, ಸಂತೆ ಮಾರುಕಟ್ಟೆಯವರು ಸಂಗ್ರಹಿಸಿ ಒಂದೆಡೆ ಶೇಖರಿಸುವ ಕಸವನ್ನು ವಿಲೇವಾರಿ ಮಾಡುವುದೇ ಒಂದು ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.
ಇದರಿಂದ ಬೆಸತ್ತ ಏಷ್ಟೋ ಜನ ಮನೆ, ಅಂಗಡಿಗಳಲ್ಲಿ ಶೇಖರಿಸುವ ಕಸವೇ ಮನೆ, ಅಂಗಡಿಗಳಲ್ಲಿ ಸಾಕಷ್ಟು ತುಂಬುತ್ತಿರುವುದರಿಂದ ಎಲ್ಲಾ ಕಸವನ್ನು ಎಲ್ಲೆಂದರಲ್ಲಿ ಬಿಸಾಡುತ್ತಿದ್ದು, ವಾತಾವರಣ ಕಲುಷಿತಗೊಳ್ಳುತ್ತಿದೆ ಎಂದು ಪರಿಸರ ಪ್ರೇಮಿಗಳು ಆರೋಪಿಸಿದ್ದಾರೆ.
ಇಲ್ಲಿನ ಪಟ್ಟಣ ಪಂಚಾಯತಿಯಲ್ಲಿ ಎಲ್ಲಾ ವಾರ್ಡ್ ಸೇರಿದಂತೆ ಅಂಗಡಿ ಮುಂಗಟ್ಟುಗಳ ಕಸವನ್ನು ವಿಲೇವಾರಿ ಮಾಡಲು ಮೂರು-ನಾಲ್ಕು ವಾಹನಗಳಿದ್ದು, ಅವುಗಳಲ್ಲಿ ಎರಡೋ, ಮೂರು ವಾಹನ ದುರಸ್ಥಿಗೆ ಬಂದು ಒಂದು ತಿಂಗಳಾದರು ಅವುಗಳನ್ನು ತೀವ್ರವಾಗಿ ರಿಪೇರಿ ಮಾಡಲು ಪಟ್ಟಣ ಪಂಚಾಯಿತಿ ಮುಂದಾಗುತ್ತಿಲ್ಲಾ ಎನ್ನುವುದು ಇಲ್ಲಿನ ನಾಗರಿಕರ ಆರೋಪವಾಗಿದೆ.
ಈ ಕುರಿತು ಹಲವಾರು ಬಾರಿ ಪಟ್ಟಣ ಪಂಚಾಯತಿ ಸಿಬ್ಬಂದಿಗಳಿಗೆ ಹಾಗೂ ಅಧಿಕಾರಿಗಳಿಗೆ ಕೇಳಿದರೇ ಕಸದ ವಾಹನ ಕೆಟ್ಟಿವೆ ಅವುಗಳನ್ನು ರಿಪೇರಿ ಮಾಡಿಸಿದ ತಕ್ಷಣ ಕಳಿಸಿಕೊಡುತ್ತೇವೆ ಎಂದು ಹೇಳುತ್ತಾ ಸಾಗಿದ್ದಾರೆ. ಇದೆ ಪರಿಸ್ಥಿತಿ ಮುಂದುವರಿದರೆ ಸಾರ್ವಜನಿಕರು ಬೀದಿಗಿಳಿದು ಹೋರಾಟ ಮಾಡಲು ಅವಕಾಶ ಕೊಡದೆ ಬೇಗನೆ ಕಸ ವಿಲೇವಾರಿ ಮಾಡಲು ಸಾರ್ವಜನಿಕರು ವಿನಂತಿಸಿದ್ದಾರೆ.