Raichur district's new Zilla Panchayat CEO Ishwar Kumar Kandu assumes office

ರಾಯಚೂರ ಜುಲೈ 9 (ಕ.ವಾ.): 2018ರ ಬ್ಯಾಚನ ಐಎಎಸ್ ಅಧಿಕಾರಿ ಈಶ್ವರ ಕುಮಾರ ಕಾಂದೂ ಅವರು ರಾಯಚೂರ ಜಿಲ್ಲಾ ಪಂಚಾಯತನ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಜುಲೈ 9ರಂದು ಅಧಿಕಾರ ಸ್ವೀಕರಿಸಿದರು.
ಮೂಲತಃ ಉತ್ತರ ಪ್ರದೇಶ ರಾಜ್ಯದವರಾದ ಈಶ್ವರ ಕುಮಾರ ಕಾಂದೂ ಅವರು ಈ ಮೊದಲು 2019-20ರಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಪ್ರೊಬೆಷನರಿ ಅವಧಿಯನ್ನು ಪೂರ್ಣಗೊಳಿಸಿದರು. ಬಳಿಕ
ಮಡಿಕೇರಿಯಲ್ಲಿ 19 ತಿಂಗಳು ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸಿದರು. ನಂತರ ಬೆಂಗಳೂರಿನಲ್ಲಿ
ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿ, ಆ ಬಳಿಕ ಕಾರವಾರ ಜಿಲ್ಲೆಯಲ್ಲಿ ಎರಡೂವರೆ ವರ್ಷಗಳ ಕಾಲ ಜಿಲ್ಲಾ ಪಂಚಾಯತ್ ಸಿಇಓ ಆಗಿ ಕಾರ್ಯನಿರ್ವಹಿಸಿದ್ದಾರೆ.
ಇಲ್ಲಿನ ಜಿಪಂ ಸಿಇಓ ಆಗಿದ್ದ ರಾಹುಲ್ ತುಕಾರಾಂ ಪಾಂಡ್ವೆ ಅವರನ್ನು ಸರ್ಕಾರವು ಬೇರೆಡೆ ವರ್ಗಾಯಿಸಿದೆ.