Free distribution of ties, belts, ID cards, and photographs to government school students with the help of donors

ಗಂಗಾವತಿ: ತಾಲೂಕಿನ ವಡ್ಡರಹಟ್ಟಿ ಗ್ರಾಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣಪ್ರೇಮಿ ದಾನಿಗಳ ನೆರವಿನಿಂದ ಹದಿನೈದು ಸಾವಿರ ರೂಪಾಯಿ ಮೌಲ್ಯದ ಟೈ, ಬೆಲ್ಟ್, ಐಡಿ ಕಾರ್ಡ್, ಮತ್ತು ಪೋಟೋಗಳನ್ನು ಉಚಿತವಾಗಿ ವಿದ್ಯಾರ್ಥಿ ಗಳಿಗೆ ವಿತರಿಸಿದ್ದಾರೆ.
ಶಿಕ್ಷಕಿ ಸಂಧ್ಯಾ ಎ.ಎಸ್. ಅವರ ಸ್ನೇಹಿತೆಯಾದ ಶಿಕ್ಷಣಪ್ರೇಮಿ ಶಾಂತಾ ಅವರ ಹುಟ್ಟುಹಬ್ಬ ನಿಮಿತ್ಯ ಹಾಗೂ ಶ್ರೀಮತಿ ಭಾರತಿ, ಶ್ರೀಮತಿ ವೈಷ್ಣವಿ ಅವರ ಸಹಕಾರದಿಂದ ಮತ್ತು ಇದೇ ಶಾಲೆಯ ಶಿಕ್ಷಕರಾದ ಬಸವರಾಜ ಅವರಿಗೆ ಮಗು ಜನಿಸಿದ ಖುಷಿಯಿಂದ ದೇಣಿಗೆ ನೀಡಿದ್ದು, ಒಟ್ಟು ಸಂಗ್ರಹಗೊಂಡ ೧೫೦೦೦ ರೂ.ಗಳಲ್ಲಿ ಟೈ, ಬೆಲ್ಟ್, ಐಡಿ ಕಾರ್ಡ್, ಮತ್ತು ಪೋಟೊ ಗಳನ್ನು ಖರೀದಿಸಿ ಶಾಲಾ ಮಕ್ಕಳಿಗೆ ವಿತರಿಸಿದ್ದಾರೆ. ಟೈ, ಬೆಲ್ಟ್, ಐಡಿ ಕಾರ್ಡ್ ಧರಿಸಿದ ಮಕ್ಕಳು ಸಂಸತದಿAದ ಸಂಭ್ರಮಿಸಿ ದರು. ಶಾಲಾ ಮುಖ್ಯೋಪಾಧ್ಯಾರಾದ ವಿ. ನಾಗರತ್ನ ಅವರು ಶಿಕ್ಷಣಪ್ರೇಮಿ ದಾನಿಗಳಿಗೆ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷರಾದ ಹುಲುಗಪ್ಪ, ಸದಸ್ಯರಾದ ನಾಗಪದ್ಮಾವತಿ, ಶಿಕ್ಷಕರಾದ ಕಲ್ಪನಾ ರಾಯ್ಕರ್, ನೀಲಾಂಬಿಕಾ ಜಿ.ವಿ, ಅನುಷಾ, ಶಭಾನಾ ಪರ್ವಿನ್, ಸಂಧ್ಯಾ ಎ.ಎಸ್, ಬಸವರಾಜ್ ಉಪಸ್ಥಿತರಿದ್ದರು.