The new Anubhav Mantapa will be ready for public inauguration by 2026. - District In-charge Minister Ishwar Khandre.

ಜಗತ್ತಿಗೆ ಸಾಮಾಜಿಕ ನ್ಯಾಯ ಮತ್ತು ಪ್ರಜಾಪ್ರಭುತ್ವದ ಮಾರ್ಗ ತೋರಿದ ಪುಣ್ಯಭೂಮಿ ಬಸವಕಲ್ಯಾಣದಲ್ಲಿ ಈಶ್ವರ ಖಂಡ್ರೆ ಅವರ ಕನಸಿನ ಯೋಜನೆಯಾದ “ನೂತನ ಅನುಭವ ಮಂಟಪ” ನಿರ್ಮಾಣ ಕಾರ್ಯ ವೇಗವಾಗಿ ಸಾಗುತ್ತಿದೆ.
ಸಚಿವ ಈಶ್ವರ ಖಂಡ್ರೆ ಅವರು ಇಂದು ಸಂಬಂಧಿತ ಇಲಾಖಾಧಿಕಾರಿಗಳು ಹಾಗೂ ನಿರ್ಮಾಣ ಹೊಣೆ ಹೊತ್ತಿರುವ ಸಂಸ್ಥೆಗಳೊಂದಿಗೆ ಸಭೆ ನಡೆಸಿ ಕಾಮಗಾರಿ ಪ್ರಗತಿಯನ್ನು ಪರಿಶೀಲಿಸಿದರು.ಈಗಾಗಲೇ 60% ಕೆಲಸ ಮುಕ್ತಾಯಗೊಂಡಿದ್ದು, ಉಳಿದ ಕಾಮಗಾರಿ 2026ರೊಳಗೆ ಪೂರ್ಣಗೊಳ್ಳಲಿದೆ. ಅಗತ್ಯ ಅನುದಾನವನ್ನೂ ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
ಐಐಟಿ ವಿಜ್ಞಾನಿಗಳ ಸಹಕಾರದಿಂದ ಈ ಮಂಟಪದಲ್ಲಿ ಧ್ಯಾನ, ವಚನ ಪಠಣ ಇತ್ಯಾದಿಯಿಂದ ಮೆದುಳಿನ ಬದಲಾವಣೆಗಳ ಅಧ್ಯಯನ ನಡೆಯಲಿದೆ. ತಂತ್ರಜ್ಞಾನ ಮತ್ತು ಅಧ್ಯಾತ್ಮದ ಸಮನ್ವಯದ ಜಾಗತಿಕ ಮಾದರಿಯಾಗಿ ಈ ಮಂಟಪ ರೂಪುಗೊಳ್ಳಲಿದೆ.
ಬಸವಣ್ಣನವರ ದರ್ಶನ, ವಚನ ಮತ್ತು ಶರಣ ಸಂಸ್ಕೃತಿಯ ಸಾರವನ್ನು ಮುಂದಿನ ಪೀಳಿಗೆಗೆ ಪೂರೈಸುವ ನಿಜವಾದ ಜ್ಞಾನಮಂದಿರವೆಂದು ಇದು ಪರಿಗಣಿಸಲಿದೆ.