The Media Journalists Association will stand as the backbone of journalists.

ಉಡುಪಿ:ರಾಜ್ಯಾದ್ಯಂತ ಗ್ರಾಮೀಣ ಪತ್ರಕರ್ತರು ಸೇರಿದಂತೆ ಎಲ್ಲ ಪತ್ರಕರ್ತರ ಬೆನ್ನೆಲುಬಾಗಿ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ ನಿಲ್ಲಲಿದೆ ಎಂದು ಕರ್ನಾಟಕ ಮಾದ್ಯಮ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಜಿ,ಎಂ,ರಾಜಶೇಖರ್ ತಿಳಿಸಿದರು .
ಉಡುಪಿ ಜಿಲ್ಲೆಯ ಪತ್ರಕರ್ತರರೊಂದಿಗೆ ಸಂವಾದ ನಡೆಸಿದ ಅವರು ದಕ್ಷಿಣಕನ್ನಡ,ಉಡುಪಿ,ಉತ್ತರಕನ್ನಡ, ಮಡಿಕೆರಿ ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಯ ಕೆಲ ಪ್ರದೇಶಗಳು ಗುಡ್ಡಗಾಡುಗಳಿಂದ ಕೂಡಿದ್ದು ಸರ್ಕಾರ ನೀಡುವ ಜಾಹಿರಾತು ಇತರ ಸೌಲಭ್ಯಗಳಲ್ಲಿ ವಿಶೇಷ ರಿಯಾಯಿತಿ ನೀಡಿ ಈ ಭಾಗದ ಪತ್ರಕರ್ತರರಿಗೆ ಸೌಲಭ್ಯ ಒದಗಿಸಬೇಕು ಇಲ್ಲಿನ ಕರಾವಳಿ ಹಾಗೂ ಗುಡ್ಡ ಪ್ರದೇಶಗಳಾದ ಈ ಜಿಲ್ಲೆಗಳಿಗೆ ಸಾರಿಗೆ ವ್ಯವಸ್ಥೆ ಕೊರತೆಯಿರುವುದರಿಂದ ಪತ್ರಿಕೆ ತಲುಪಿಸುವುದು ಕಷ್ಠಸಾಧ್ಯ ಇದನ್ನು ಮನಗಂಡ ಸರ್ಕಾರ ಈ ಜಿಲ್ಲೆಗಳಿಗೆ ಮಾಧ್ಯಮ ಪಟ್ಟಿ ಹಾಗೂ ಮಾನ್ಯತೆ ಕಾರ್ಡು ಇತರ ಸೌಲಭ್ಯಗಳನ್ನು ನೀಡುವಲ್ಲಿ ವಿಶೇಷ ಜಿಲ್ಲೆಗಳೆಂದು ಪರಿಗಣಿಸಬೇಕು ಎಂದು ಒತ್ತಾಹಿಸಿದರು.
ಜೊತೆಗೆ 60 ವರ್ಷ ದಾಟಿದ ಹಿರಿಯ ಪತ್ರಕರ್ತರಿಗೆ ಪಿಂಚಣಿ ಸೌಲಭ್ಯ ಹಾಗೂ ಗ್ರಾಮೀಣ ಭಾಗದ ಪತ್ರಕರ್ತರಿಗೆ ನೀಡುವ ಬಸ್ ಪಾಸ್ ಸೌಲಭ್ಯದಲ್ಲಿ ಈ ಭಾಗದ ಬಹುತೇಕ ಪರ್ತಕರ್ತರು ಸೌಲಭ್ಯದಿಂದ ವಂಚಿತರಾಗಿರುವ ಕಾರಣ ಸರ್ಕಾರದ ಮಟ್ಟದ ಅಧಿಕಾರಿಗಳು ಮಾಡಿದ ನಿಯಮಗಳನ್ನು ಸಡಿಲಗೊಳಿಸಿ ರಾಜ್ಯಾದ್ಯಂತ ಸಂಚರಿಲು ಪತ್ರಕರ್ತರಿಗೆ ಅನುವುಮಾಡಿಕೊಡಬೇಕು ಎಂದರು.
ಮಾಧ್ಯಮ ಬಿಂಬ ಪತ್ರಿಕೆ ಸಂಪಾದಕರು ಹಾಗೂ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ವಸಂತ್ ಮಾತನಾಡಿ ರಾಜ್ಯ ಸಂಘದ ಸೌಲಭ್ಯಗಳು ಹಾಗೂ ಪತ್ರಿಕೊದ್ಯಮದ ಪೂರಕವಾದ ಅಂಶಗಳು ಪತ್ರಕರ್ತರ ಹಿತಕಾಯವುಂತಿದ್ದು ಇದರ ಸದುಪಯೋಗ ಪಡೆಯುವುದು ನಮ್ಮೆಲ್ಲರ ಜವಬ್ದಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘಕ್ಕೆ ಹೆಚ್ಚಿನ ಸದಸ್ಯತ್ವ ಬಲ ನೀಡಲಾಗುವುದು ಎಂದರು.
ರಾಜ್ಯ ಸಂಘದ ಉಪಾಧ್ಯಕ್ಷರಾದ ರವೀಂದ್ರಶೆಟ್ಟಿ ಮಾತನಾಡಿ ಪರ್ತಕರ್ತರನ್ನು ಸರ್ಕಾರಗಳು ಕಡೆಗಣಿಸಿದ್ದು ಪತ್ರಕರ್ತರು ಒಗ್ಗಟ್ಟು ಪ್ರದರ್ಶಿಸುವುದು ಅನಿವಾರ್ಯವಾಗಿದೆ ಸಂಕಷ್ಠದಲ್ಲಿರುವ ಪತ್ರಕರ್ತರಿಗೆ ಸರ್ಕಾರಗಳು ಆಧುನಿಕ ಯುಗಕ್ಕೆ ತಕ್ಕಂತೆ ಸುದ್ದಿ ಮಾಡಲು ಸೂಕ್ತ ತಂತ್ರಜ್ಞಾನ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಜೊತೆಗೆ ಆರ್ಥಿಕವಾಗಿ ಸದೃಡರಾಗಲು ಜಾಹಿರಾತು ಇನ್ನಿತರ ಸೌಲಭ್ಯಗಳನ್ನು ನೀಡಬೇಕು ಎಂದು ಒತ್ತಾಹಿಸಿದರು.
ಇದೇ ಸಂಧರ್ಭದಲ್ಲಿ ರಾಜ್ಯ ಸಂಘದ ಖಜಾಂಚಿ ಮಂಜು ಎಂ,ಹೊಸಹಳ್ಳಿ,ಪತ್ರಕರ್ತರಾದ ಪ್ರಮೋದ್ ಚಂದ್ರ ಪೈ,ಪ್ರಶಾಂತ್ ಆಚಾರ್ಯ, ಇಮ್ತಿಯಾಜ್, ಅಬುಬಕರ್,ಪುನಿತ್‍ಮೂಡಬಿದರೆ, ಸಂಪತ್, ಅಬಿಲ್,ಶಶಿಕಾಂತ್ ಸೇರಿದಂತೆ ಜಿಲ್ಲೆಯ ಪರ್ತಕರ್ತರು ಉಪಸ್ಥಿತರಿದ್ದರು