Breaking News

ವಿಶೇಷ ಚೇತನರಿಗೆ  ಯಂತ್ರ ಚಾಲಿತ ತ್ರಿಚಕ್ರ ವಾಹನ ಹಾಗೂ ಹೊಲಿಗೆ,  ಹಾಗೂ ಹೊಲಿಗೆ, ಬಡಗಿತನ, ಧೋಬಿ ವೃತ್ತಿಯ ಉಪಕರಣಗಳ ವಿತರಣೆ

Distribution of motorized three-wheelers and sewing, carpentry, and laundry tools to the specially-abled




ಜಮಖಂಡಿ 05-01 : ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ, ತಾಲೂಕ ಪಂಚಾಯತ ಸಹಯೋಗದಲ್ಲಿ ನಡೆದ ವಿಶೇಷ ಚೇತನರಿಗೆ ಶೇ. 5ರಡಿಯಲ್ಲಿ ಯಂತ್ರ ಚಾಲಿತ ತ್ರಿಚಕ್ರ ವಾಹನ ಹಾಗೂ ಹೊಲಿಗೆ, ಬಡಗಿತನ, ಧೋಬಿ ವೃತ್ತಿಯ ಉಪಕರಣಗಳನ್ನು ವಿತರಣೆ ಸಮಾರಂಭಜರುಗಬೇಕಾದ ಕಾರ್ಯಕ್ರಮ ಸುಮಾರು 3 ಗಂಟೆಗಳ ಕಾಲ ವಿಳಂಬವಾದ ಹಿನ್ನಲೆಯಲ್ಲಿ ಶಾಸಕರಿಗೆ, ತಾ.ಪಂ.ಅಧಿಕಾರಿಗಳ ವಿರುದ್ಧ ವಿಶೇಷ ಚೇತನರು, ಫಲಾನುಭವಿಗಳು, ಸಾರ್ವಜನಿಕರು ಬೇಸರ ವ್ಯಕ್ತ ಪಡಿಸಿದ ಘಟನೆ ನಡೆಯಿತು.

ಜಾಹೀರಾತು

ನಗರದ ತಾಲೂಕ ಪಂಚಾಯತ ಕಾರ್ಯಾಲಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶೇಷ ಚೇತನರು, ವಿವಿಧ ಫಲಾನುಭವಿಗಳು ಬೆ. 9 ಗಂಟೆಗೆ ಆಗಮಿಸಿದರು. ಆದರೆ ಕಾರ್ಯಕ್ರಮ 3 ಗಂಟೆಗಳ ಕಾಲ ತಡವಾಗಿರುವ ಕಾರಣ ಚಿಕ್ಕ ಮಕ್ಕಳನ್ನು ತಂದಿರುವ ಮಹಿಳಾ ಫಲಾನುಭವಿಗಳು ಹಾಗೂ ವಿಶೇಷ ಚೇತನರ ಜೊತೆಗೆ ಆಗಮಿಸಿದ ಸಂಬಂಧಿಗಳು, ಸಾರ್ವಜನಿಕರು ಬಂದಿದ್ದು ಎಲ್ಲರೂ ತಾಲೂಕ ಪಂಚಾಯತ ಅಧಿಕಾರಿ ಮತ್ತು ಶಾಸಕರ ವಿರುದ್ಧ ಬೇಸರ ವ್ಯಕ್ತ ಪಡಿಸಿದರು.

ಗೊಂದಲದ ವಾತಾವರಣ : ವಿಶೇಷ ಚೇತನರಿಗೆ ಶೇ 5ರಡಿಯಲ್ಲಿ ಯಂತ್ರ ಚಾಲಿತ ತ್ರಿಚಕ್ರ ವಾಹನಗಳು 5 ಮಂಜೂರಾಗಿದ್ದು ಅವುಗಳನ್ನು ಸಾಲಾಗಿ ನಿಲ್ಲಿಸಲಾಗಿತ್ತು. ತ್ರಿಚಕ್ರ ವಾಹನಗಳ ಮೇಲೆ ಯಾವುದೇ ಸ್ಪೀಕ‌ರ್ ಇಲ್ಲದೆ ನಿಲ್ಲಿಸಿದರು. ಕೆಲವು ಸಮಯದ ಬಳಿಕ ಶಾಸಕರ ಪೋಟೋ ಹೊಂದಿರುವ ಸ್ಪೀಕರ್ ಅಂಟಿಸಲು ಗೊಂದಲದ ವಾತಾವರಣ ಸೃಷ್ಟಿಯಾಗಿತು. ನಂತರ ಶಾಸಕರ ಪೋಟೋ ಹೊಂದಿರುವ ಸ್ಪೀಕರ್‌ಗಳನ್ನು ತ್ರಿಚಕ್ರ ವಾಹನಗಳ ಮೇಲೆ ಅಂಟಿಸಿದರು. 3 ಗಂಟೆಗಳ ಕಾಲ ತಡವಾಗಿ ಬಂದ ಶಾಸಕ ಜಗದೀಶ ಗುಡಗುಂಟಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ವಿಶ್ವದಲ್ಲಿ ಜನಸಂಖ್ಯೆ ಹೆಚ್ಚಾಗಿದೆ. ಎಲ್ಲರೂ ಸರಕಾರಿ ಕೆಲಸದಲ್ಲಿಯೇ ಇರಬೇಕು ಎಂಬುವದನ್ನು ಮರೆತು. ಸ್ವಯಂ ಉದ್ಯೋಗವನ್ನು ಮಾಡುವ ಗುರಿ ಹೊಂದಬೇಕು. ಕೇಂದ್ರ, ರಾಜ್ಯ ಸರಕಾರ ಸಾಕಷ್ಟು ಸ್ವಯಂ ಉದ್ಯೋಗ ಮಾಡಲಿಕ್ಕೆ ಯೋಜನೆಗಳನ್ನು ಜಾರಿಗೆ ತಂದಿದೆ. ತಮ್ಮ ಮನೆಯ ಕುಟುಂಬಗಳನ್ನು ನಿರ್ವಹಿಸಲು ಮತ್ತು ಮೊತ್ತೊಬ್ಬರನ್ನು ಬೆಳೆಸಲು ತಾವುಗಳು ಸ್ವಯಂ ಉದ್ಯೋಗ ಮಾಡಿದರೆ ಮಾತ್ರ ಮುಂದೆ ಬರಲು ಸಾಧ್ಯ. ಎಲ್ಲರಿಗೂ ಸರಕಾರಿ ನೌಕರಿ ದೊರೆಯಲು ಸಾಧ್ಯವಿಲ್ಲ. ಕೌಶಲ್ಯ ಅಭಿವೃದ್ಧಿಗೆ ಸರಕಾರ ಸೌಲಭ್ಯಗಳನ್ನು ಫಲಾನುಭವಿಗಳಿಗೆ ನೀಡಿದೆ. ಅದನ್ನು ಪಡೆದುಸರಿಯಾಗಿಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ಸಹಾಯಕ ಕಾರ್ಯನಿರ್ವಹಕ ಅಧಿಕಾರಿ ಸಿದ್ದಾರ್ಥ ಗೋರೆ, ಜಿಲ್ಲಾ ಕೈಗಾರಿಕಾ ಉಪನಿರ್ದೇಶಕ ಬಳ್ಳೂರಗಿ ಹಾಗೂ ಫಲಾನುಭವಿಗಳು ಇದ್ದರು.

About Mallikarjun

Check Also

ಕರ್ನಾಟಕ ಮಾದ್ಯಮ ಪತ್ರಕರ್ತರ ಸಂಘದ ಸಾಮಾಜಿಕ ಕಾರ್ಯವು ಶ್ಲಾಘನೀಯವಾದುದ್ದು : ಕುಮಾರಸ್ವಾಮಿ .

The social work of the Karnataka Media Journalists Association is commendable: Kumaraswamy. ವರದಿ : ಬಂಗಾರಪ್ಪ …

Leave a Reply

Your email address will not be published. Required fields are marked *