A pre-preparation meeting for the Basava Culture Campaign was held in Bidar city on the 4th:

ಬೀದರ್: ಲಿಂಗಾಯತ ಮಠಾಧಿಪತಿಗಳ ಒಕ್ಕೂಟದವತಿಯಿಂದ ಹಾಗೂ ವಿವಿಧ ಬಸವ ಪರ ಸಂಘಟನೆಗಳ ವತಿಯಿಂದ ರಾಜ್ಯ ತುಂಬ ಹಮ್ಮಿಕೊಳ್ಳಲಾದ ಬಸವ ಸಂಸ್ಕೃತ ಅಭಿಯಾನ, ಬೀದರ ನಗರದಲ್ಲಿ 3ನೆ ಸೆಪ್ಟೆಂಬರ 2025 ರಂದು ನಿರ್ಧರಿಸಲಾಗಿದೆ, ಆದ್ದರಿಂದ ಪೂರ್ವ ಸಿದ್ಧತಾ ಸಭೆಯನ್ನೂ ಅಧ್ಯಕ್ಷರಾದ ಪೂಜ್ಯ ಶ್ರೀ ಡಾ,ಬಸವಲಿಂಗ ಪಟ್ಟದ್ದೇವರು ಸಾನಿಧ್ಯದಲ್ಲಿ ಜರುಗಿತ್ತು ಹಾಗೂ ಪೂಜ್ಯರು ಅಭಿಯಾನದ ಕುರಿತು ಸಭೆಯನ್ನುದ್ದೇಶಿಸಿ ಮಾತನಾಡಿದರು. ಪೂಜ್ಯರಾದ ಡಾ ಹುಲಸೂರಿನ ಶಿವಾನಂದ ಮಹಾಸ್ವಾಮಿಗಳು, ಪೂಜ್ಯ ಡಾ ಸಿದ್ದರಾಮ ಶರಣರು ಬೆಲ್ದಾಳ ಅಭಿಯಾನ ಯಶಸ್ವಿಗೆ ಕೈಜೊಡಿಸುವುದಾಗಿ ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಶ್ರೀ ಬಸವರಾಜ ಧನ್ನೂರ ಅವರು ಅಭಿಯಾನದ ಮಹತ್ವ ಹಾಗು ರೂಪುರೇಷೆಗಳ ಕುರಿತು ಸಭೆಗೆ ಮಾಹಿತಿ ನೀಡಿ ಎಲ್ಲರೂ ಸಹಕರಿಸಿ ಯಶಸ್ವಿಗೊಳಿಸಲು ಕರೆ ಕೊಟ್ಟರು. ಈ ಸಭೆಯಲ್ಲಿ ಶ್ರೀ ಬಾಬು ವಾಲಿ, ಶ್ರೀ ಶ್ರೀಕಾಂತ ಸ್ವಾಮಿ, ಶ್ರೀ ಶರಣಪ್ಪ ಮಿಠಾರೆ , ಶ್ರೀ ಆನಂದ ದೇವಪ್ಪ, ಶ್ರೀ ಬಸವರಾಜ ಮಾಳಗೆ, ಶ್ರೀ ರಾಜೇಂದ್ರ ಗಂದಗೆ, ಮುಂತಾದವರು ಮಾತನಾಡಿ ಸಲಹೆ ನೀಡಿದರು ಹಾಗೂ ಯಶಸ್ವಿಗಾಗಿ ಕೈ ಜೋಡಿಸುವುದಾಗಿ ಸಭೆಗೆ ತಿಳಿಸಿದರು.ಜಿಲ್ಲೆಯ ವಿವಿಧ ಪೂಜ್ಯರು,ಲಿಂಗಾಯತ ಒಳ ಪಂಗಡಗಳ ಮುಖ್ಯಸ್ಥರು ಹಾಗು ಅನೇಕ ಸಂಘ ಸಂಸ್ಥೆಗಳ ಪ್ರಮುಖರು ಭಾಗವಹಿಸಿದ್ದರು.
ಶ್ರೀಕಾಂತ ಸ್ವಾಮಿ, ಕರ್ನಾಟಕ ರಾಜ್ಯ ಸಂಚಾಲಕ, ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ.