Farmers should use modern technology to increase their income: Agriculture Minister Chaluvarayaswamy

ಹನೂರು :ಕಾಲವು ಬದಲಾದಂತೆ ನಮ್ಮ ರೈತರು ಆಧುನಿಕ ವಿಧಾನಗಳನ್ನು ಬಳಕೆ ಮಾಡಿಕೊಂಡು ಹೆಚ್ಚಿನ ಮಟ್ಟದಲ್ಲಿ ಉತ್ಪಾದನೆ ಮಾಡುವುದನ್ನು ಕರಗತ ಮಾಡಿಕೊಂಡು ತಮ್ಮ ತಲಾಆದಾಯವನ್ನು ಹೆಚ್ಚು ಮಾಡಿಕೊಳ್ಳಬೇಕು ಎಂದು ಕೃಷಿ ಸಚಿವ ಚೆಲುವರಾಯ ಸ್ವಾಮಿ ಹೇಳಿದರು.
ಹನೂರು
ತಾಲೂಕಿನ ಚಿಂಚಳ್ಳಿ ಗ್ರಾಮದ ಸಮೀಪದಲ್ಲಿ ಪ್ರಗತಿ ಪರ ರೈತ ದಯಾನಂದರವರ ಶುದ್ಧ ಫಾರ್ಮ್ ಹೌಸ್ ನಲ್ಲಿ ಕೃಷಿ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಚಾಮರಾಜನಗರ ಜಿಲ್ಲಾ ರಾಗಿ ಬಿತ್ತನೆ ಅಭಿಯಾನ ಕಾರ್ಯಕ್ರಮದಲ್ಲಿ ರಾಗಿ ಬಿತ್ತನೆ ಮಾಡಿ ಮಾತನಾಡಿದ ಅವರು
ಇತ್ತೀಚಿನ ದಿನಗಳಲ್ಲಿ ರೈತರು ಹೊಲಗದ್ದೆಗಳಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ವಾರ್ಷಿಕ ಲಕ್ಷಾಂತರ ರೂ ಗಳಿಸುವ ಹಂತಕ್ಕೆ ಬಂದಿದ್ದಾರೆ.ಇದರ ಜೊತೆಗೆ ನಮ್ಮ ಇಲಾಖೆಯ ವತಿಯಿಂದ ಸಾಕಷ್ಟು ಪ್ರಮಾಣದಲ್ಲಿ ಪ್ರಯೋಜನ ಪಡೆದುಕೊಂಡು, ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಆದಾಯ ಗಳಿಸಬೇಕು. ರೈತರ ಪರವಾಗಿ ನಮ್ಮ ಸರ್ಕಾರ ಇದೆ. ರೈತರಿಗೆ ಸಾಕಷ್ಟು ಪ್ರಮಾಣದಲ್ಲಿ ನಾವು ನಮ್ಮ ಸರ್ಕಾರ ಸಾಕಷ್ಟು ಅನುಕೂಲವಾಗುವಂತೆ ನೋಡಿಕೊಂಡು , ಬಿತ್ತನೆ ಬೀಜಗಳ ಕೊರತೆಯಾಗದಂತೆ ನೋಡಿಕೊಂಡಿದ್ದೇವೆ.ಹಾಗಾಗಿ ರೈತರ ಪರವಾದ ಸರ್ಕಾರ ನಮ್ಮದಿದೆ. ಆ ನಿಟ್ಟಿನಲ್ಲಿ ರೈತರಿಗೆ ಒಳ್ಳೆಯ ಯೋಜನೆಗಳನ್ನು ನೀಡಲಾಗಿದೆ ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.
ಅಲ್ಲದೆ ಜಮಿನುಗಳಿಗೆ
ರಾಸಾಯನಿಕ ಗೊಬ್ಬರ ಬಳಕೆ ನಿಲ್ಲಸಬೇಕು ರೈತರು ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ಬಳಕೆ ಮಾಡುತ್ತಿದ್ದೂ ಇದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಅಲ್ಲದೇ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಸಾವು ನೋವು ಆಗುತ್ತಿದೆ. ಕಾರಣ ಇಷ್ಟೇ ವಿಷಯುಕ್ತ ಪದಾರ್ಥ ಗಳ ಸೇವನೆ ಸಹ ಇದಕ್ಕೆ ಕಾರಣ ಎನ್ನಬಹುದಾಗಿದೆ.ಹಾಗಾಗಿ ಹೆಚ್ಚು ರಾಸಾಯನಿಕ ಗೊಬ್ಬರಗಳ ಬದಲಿಗೆ ಸಾವಯವ ಗೊಬ್ಬರ ಬಳಕೆ ಹೆಚ್ಚಿನ ಪ್ರಮಾಣದಲ್ಲಿ ಆಗಬೇಕು ಎಂದರು.
ಕೃಷಿ ಭಾಗ್ಯ ಸದುಪಯೋಗ ಪಡೆದುಕೊಳ್ಳಿ : ಕೃಷಿ ಭಾಗ್ಯ ವನ್ನು ರೈತರು ಪಡೆದುಕೊಳ್ಳುವ ಮೂಲಕ ಮತ್ತಷ್ಟು ಪ್ರಗತಿ ಹೊಂದಬೇಕು ಎನ್ನುವ ನೂತನ ಪೋಸ್ಟರ್ ಅನ್ನು ಸಹ ವೇದಿಕೆಯಲ್ಲಿ ಸಚಿವರೂ ಹಾಗೂ ಗಣ್ಯರು ಬಿಡುಗಡೆ ಮಾಡಿದರು.
ಕೃಷಿ ಯಂತ್ರೋಪಕರಣಗಳ ವಿತರಣೆ : ಜಿಲ್ಲೆಯ ಉದ್ದಗಲಕ್ಕೂ ಸಹ ಆಯ್ಕೆಯಾದ ಫಲಾನುಭವಿಗಳಿಗೆ ಪವರ್ ಟಿಲ್ಲರ್, ಪವರ್ ಕಟರ್, ರೊಟವೇಟರ್, ಹುಲ್ಲು ಕಟ್ಟು ಮಾಡುವ ಮಿಷನ್ ಸೇರಿದಂತೆ ಇನ್ನಿತರ ವಿವಿಧ ಯಂತ್ರೋಪಕರಣಗಳನ್ನು ಸಚಿವರು, ಹಾಗೂ ಶಾಸಕರು ಅಧಿಕಾರಿಗಳು ವಿತರಣೆ ಮಾಡಿದರು.
ಪಶು ಸಂಗೋಪನೆ ಸಚಿವ ವೆಂಕಟೇಶ್ ಮಾತನಾಡಿ ರೈತರ ಸಂಕಷ್ಟ ನಮಗೂ ಚೆನ್ನಾಗಿ ಗೊತ್ತಿದೆ. ಹಾಗಾಗಿ ರೈತರು ಚೆನ್ನಾಗಿರಲಿ ಅವರ ಕಷ್ಟ ಸುಖಕ್ಕೆ ನಮ್ಮ ಸರ್ಕಾರ ಸದಾ ಜೊತೆಯಿರಲಿದೆ. ರೈತರು ಸ್ವಲ್ಪ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಒಳ್ಳೆಯ ಉತ್ಪಾದನೆ ಮಾಡುವಲ್ಲಿ ಮುಂದಾಗಬೇಕು ಎಂದರು.
ಇದೆ ಸಂದರ್ಭದಲ್ಲಿ ಪಶು ಸಂಗೋಪನೆ ಸಚಿವ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟೇಶ್, ಹಾಗೂ ಹನೂರು ವಿಧಾನ ಸಭಾ ಕ್ಷೇತ್ರ ಶಾಸಕ ಎಂ ಆರ್ ಮಂಜುನಾಥ್, ಮಾಜಿ ಶಾಸಕ ಆರ್ ನರೇಂದ್ರ, ಜಿಲ್ಲಾಧಿಕಾರಿ ಶಿಲ್ಪಾನಾಗ್,ಸಿ ಇ ಒ ಮೋನಾ ರೋಹತ್, ಎಸ್ ಪಿ ಡಾ. ಬಿ ಟಿ ಕವಿತಾ,ಕಾಡಾ ಅಧ್ಯಕ್ಷ ಮರಿಸ್ವಾಮಿ, ಕೃಷಿ ಇಲಾಖೆಯ ಉಪನಿರ್ದೇಶಕಿ ಸುಷ್ಮಾ,ಪ್ರಗತಿ ಪರ ರೈತ ದಯಾನಂದ.ರೈತ ಸಂಘದ ಅದ್ಯಕ್ಷ ರುಗಳಾದ .ಅಮ್ಜಾದ್ ಖಾನ್ ,ಚೆಂಗಡಿ ಕರಿಯಪ್ಪ , ಹರೀಶ್ ಕುಮಾರ್ , ಮುಖಂಡರುಗಳಾದ ಗೌಡೆಗೌಡ ,ಬೊಸ್ಕೊ ,ಪ್ರಸಾದ್ ,ಬಸವಣ್ಣ , ಸೇರಿದಂತೆ ಇನ್ನಿತರ ಅಧಿಕಾರಿಗಳು, ರೈತರೂ ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.