The nameplate of Siddagangasree Jella Tea Shop in Hirebenakal Bridge Village was released by the monks of Siddagangasree Mutt, Tumkur.

ಗಂಗಾವತಿ: ಜೂನ್-೨೮ ಶನಿವಾರದಂದು ತ್ರಿವಿಧ ದಾಸೋಹದ ನಾಡು ಪುಣ್ಯಕ್ಷೇತ್ರ ಶ್ರೀ ಸಿದ್ದಗಂಗಾ ಮಠದಲ್ಲಿ ಡಾ. ಶ್ರೀಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಗ್ರಂಥ ಲೋಕಾರ್ಪಣೆ ಸಮಾರಂಭದಲ್ಲಿ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಹಿರೇಬೆಣಕಲ್ ಸೇತುವೆಯಲ್ಲಿ ಸ್ಥಾಪಿಸಲಾದ ಸಿದ್ದಗಂಗಾಶ್ರೀ ಬೆಲ್ಲದ ಚಹಾ ಅಂಗಡಿಯ ನಾಮಫಲಕವನ್ನು ಸಿದ್ದಗಂಗೆಯ ಮಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಬಿಡುಗಡೆಗೊಳಿಸಿ ಆಶೀರ್ವಾದ ಮಾಡಿ ನಾಡಿನಾದ್ಯಂತ ಹೆಸರು ಪಸರಿಸಲಿ, ಗುರುಪರಂಪರೆ ಆಶೀರ್ವಾದ ಸದಾ ಕಾಲ ನಿಮ್ಮ ಮೇಲಿರಲಿ ಎಂದು ಬಸನಗೌಡ ಹೊಸಳ್ಳಿ ಮತ್ತು ಅವರ ಕುಟುಂಬ ವರ್ಗಕ್ಕೆ ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ನಾಡಿನ ಹೆಸರಂತ ಜಾನಪದ ವಿದ್ವಾಂಸರು ಡಾ. ಶ್ರೀ ಗೊ.ರು ಚೆನ್ನಬಸಪ್ಪನವರು ಹಾಗೂ ಸಿದ್ದಗಂಗೆಯ ಕಿರಿಯ ಶ್ರೀಗಳಾದ ಶ್ರೀ ಶಿವಸಿದ್ದೇಶ್ವರ ಮಹಾಸ್ವಾಮಿಗಳು ಮತ್ತು ಶ್ರೀಮಠದ ಹಳೆಯ ವಿದ್ಯಾರ್ಥಿಗಳು ಶಿಕ್ಷಕರು ಭಾಗಿಯಾಗಿದ್ದರು.