Madhyamakademie President invites Karnataka Media Journalists Association President to Patika Day celebrations

ಬೆಂಗಳೂರು : ಪ್ರತಿವರ್ಷದಂತೆ ಈ ವರ್ಷವು ಸರ್ಕಾರದಿಂದ ಪತ್ರಿಕ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು ಕರ್ನಾಟಕ ಮಾದ್ಯಮ ಪತ್ರಕರ್ತರ ಸಂಘದ ಅಧ್ಯಕ್ಷರಾದ ಜಿ ಎಮ್ ರಾಜಶೇಖರ್ ರವರ ಮುಖಾಂತರ ಸಂಘದ ಸದಸ್ಯರು ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಆಹ್ವಾನ ಪತ್ರಿಕೆಯನ್ನು ಕರ್ನಾಟಕ ಮಾದ್ಯಮ ಅಕಾಡೆಮಿ ಅಧ್ಯಕ್ಷರಾದ ಶ್ರೀ ಯುತ ಆಯುಷ್ಯ ಖಾನಂ ರವರು ನೀಡಿದರು .
ಬೆಂಗಳೂರಿನ ವಿಶ್ವೇಶ್ವರಯ್ಯ ಗೋಪುರದದಲ್ಲಿರುವ ಮಾದ್ಯಮ ಅಕಾಡೆಮಿಯ ಕಛೇರಿಯಲ್ಲಿ ಜುಲೈ ಒಂದನೆ ತಾರೀಖಿನಂದು ಸಂಘದ ಪ್ರತಿಯೋಬ್ಬರು ಪಾಲ್ಗೊಂಡ ದಿನಾಚರಣೆ ಆಚರಿಸುವಂತೆ ಮನವಿ ಮಾಡಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ವಾರ್ತಾಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಪತ್ರಕರ್ತರ ಸಂಯುಕ್ತ ಆಶ್ರಯದಲ್ಲಿ ಜುಲೈ 1ರಂದು ಬೆಂಗಳೂರಿನ ವಾರ್ತಾ ಸೌಧದ ಸುಲೋಚನಾ ಸಭಾಂಗಣದಲ್ಲಿ ನಡೆಯಲಿರುವ ರಾಜ್ಯಮಟ್ಟದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು. ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅಕಾಡೆಮಿಯ ವಾರ್ಷಿಕ ವರದಿ ಬಿಡುಗಡೆ ಮಾಡಲಿದ್ದಾರೆ.
ಪ್ರಧಾನ ಭಾಷಣ ಪಿ ಸಾಯಿನಾಥ ಹಾಗೂ ರೆಹಮತ ತರೀಕೆರೆ ನಡೆಸಿಕೊಡಲಿದ್ದು, ಸಮಾರಂಭದಲ್ಲಿ ರಿಜ್ವಾನ್ ಅಹಮದ್ ಹಾಗೂ ಸಂಸದರಾದ ಪಿ ಸಿ ಮೋಹನ್ . ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ ವಿ ಪ್ರಭಾಕರ್ ಹಾಗೂ ಪ್ರಾಸ್ತವಿಕ ನುಡಿಯನ್ನು ಆಯುಷ್ಯ ಖಾನಂ ಅಧ್ಯಕ್ಷರು ಕರ್ನಾಟಕ ಮಾಧ್ಯಮ ಅಕಾಡೆಮಿ ಮತ್ತು ಬಿ ಬಿ ಕಾವೇರಿ .ವಾರ್ತಾ ಮತ್ತು ಸಾರ್ವಜನಿಕ ಇಲಾಖೆ ಕಾರ್ಯದರ್ಶಿ ಹೇಮಂತ್ ನಿಂಬಾಳ್ಕರ್ ಆಯುಕ್ತರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಾಗೇಂದ್ರ ಪ್ರಸಾದ್ ,ಆರ್ .ಶ್ರೀಧರ್
ಪದ್ಮ . ಕೆಯುಡಬ್ಲ್ಯೂ ಜೆ ಅಧ್ಯಕ್ಷರಾದ ಶಿವಾನಂದ ತಗಡೂರು . ಜಿ ಎನ್ ಮೋಹನ್ ಅತಿಥಿಗಳಾಗಿರುವ ಈ ಸಮಾರಂಭಕ್ಕೆ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಜಿ.ಎಂ.ರಾಜಶೇಖರ್ ಹಾಗು ಪದಾಧಿಕಾರಿಗಳನ್ನು ಬೆಂಗಳೂರಿನಲ್ಲಿ ಅಧಿಕೃತವಾಗಿ ಆಹ್ವಾನಿಸಿದ ಸಂದರ್ಭ.
ಇದೇ ಸಂದರ್ಭದಲ್ಲಿ ಕರ್ನಾಟಕ ಮಾದ್ಯಮ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಬಂಗಾರಪ್ಪ .ಸಿ .ಹನೂರು . ರಾಜ್ಯಸಂಘದ ಖಜಾಂಚಿಗಳಾದ ಮಂಜುನಾಥ್ . ರಾಜ್ಯಸಮಿತಿಯ ಪಧಾದಿಕಾರಿಗಳಾದ ರುಪೇಶ್ ಕುಮಾರ್ ,ರಾಮನಗರ , ಚಾಮರಾಜನಗರ ಜಿಲ್ಲೆಯ ಬಸವರಾಜು ಕಾಂಚಳ್ಳಿ ಸೇರಿದಂತೆ ಇನ್ನಿತರರು ಹಾಜರಿದ್ದರು .