Demonstration by fire station staff on fire accidents and emergency services

ಗಂಗಾವತಿ: ಸಮೀಪದ ವಡ್ಡರಹಟ್ಟಿ ಗ್ರಾಮದ ಸ.ಹಿ.ಪ್ರಾ. ಶಾಲೆಯಲ್ಲಿ ಅಗ್ನಿ ಅವಘಡಗಳು ಮತ್ತು ತುರ್ತು ಸೇವೆಗಳ ಕುರಿತು ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಗಳಿಂದ ಪ್ರಾತ್ಯಕ್ಷಿಕೆ ಜರುಗಿತು.
ಇದಕ್ಕೂ ಮುನ್ನ ಅಗ್ನಿಶಾಮಕ ಠಾಣೆಯ ಅಧಿಕಾರಿ ರಮೇಶ ಈಡಿಗೇರ ಅವರು ಅಗ್ನಿ, ವಿದ್ಯುತ್, ಸಿಲೆಂಡರ್, ನೀರಿನಿಂದಾಗುವ ಅವಘಡಗಳು ಮತ್ತು ಅದರಿಂದ ಪಾರಾಗುವ ಬಗ್ಗೆ ಮತ್ತು ಆಕಸ್ಮಿಕವಾಗಿ ಆಸ್ಪತ್ರೆಯಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಬೆಂಕಿ ಅವಗಡ ಸಂಭವಿಸಿದಾಗ ಆಗುವ ದುರ್ಘಟನೆ ಹಾಗೂ ಅಪಾಯ ತಡೆಗಟ್ಟಲು ಕೈಗೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ ವಿಧ್ಯಾರ್ಥಿಗಳಿಗೆ ಸವಿಸ್ತಾರವಾದ ಮಾಹಿತಿ ತಿಳಿಸಿದರು.
ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು, ಪಾಲಕರು, ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಆರ್.ವಿ. ಪೂಜಾರ್, ಸಿಬ್ಬಂದಿಗಳಾದ ಶರಣಪ್ಪ ಕುರಿ, ರುದ್ರೇಶ, ಚನ್ನಪ್ಪ, ಸುರೇಶ, ದೌಲತರಾಯ, ಆಕಾಶ, ಮಹೆಬೂಬ್ ಇದ್ದ