Permission to submit applications for public property through e-Aasti software

ಗಂಗಾವತಿ: ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ೩೧ ವಾರ್ಡುಗಳಲ್ಲಿ ವಾಸಿಸುತ್ತಿರುವ ಸಾರ್ವಜನಿಕರು ಇನ್ನುಮುಂದೆ ಇ-ಆಸ್ತಿ ತಂತ್ರಾಂಶದಲ್ಲಿ ಖಾತಾ ಅರ್ಜಿಗಳನ್ನು ಸಲ್ಲಿಸಲು ಸಿಟಿಜನ್ ಮಾಡ್ಯೂಲ್ ಒದಗಿಸಲಾಗಿರುತ್ತದೆ. ಸಾರ್ವಜನಿಕರು ತಮ್ಮ ಆಸ್ತಿಯ ಖಾತೆಯ ಅರ್ಜಿಗಳನ್ನು ಇನ್ನುಮುಂದೆ ಕರ್ನಾಟಕ ಒನ್ ನಾಲ್ಕು ಕೇಂದ್ರಗಳ ಮೂಲಕ ನಾಗರಿಕರಿಂದ ನೇರವಾಗಿ ಮಾಡ್ಯೂಲ್ ಮೂಲಕ ಹಾಗೂ ಹೆಲ್ಪ್ಡೆಸ್ಕ್ ಲಾಗಿನ್ ಮೂಲಕ ಸಲ್ಲಿಸಲು ಮಾನ್ಯ ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ, ಕೆ.ಎಂ.ಡಿ.ಎಸ್ ನಿಂದ ಅವಕಾಶ ಸಲ್ಲಿಸಿರುತ್ತಾರೆ. ಕಾರಣ ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.ಎಂದು ಗಂಗಾವತಿ.ನಗರಸಭೆ ಪೌರಾಯುಕ್ತರು, ಪ್ರಕಟಣೆ ಮೂಲಕ ತಿಳಿಸಿದ್ದೆ.
,