Breaking News

೨೦೨೫-೨೬ನೇ ಸಾಲಿನ ಕ್ರೀಡಾಕೂಟಗಳ ಪೂರ್ವಭಾವಿಸಭೆ

Pre-conference for the 2025-26 Games

ಜಾಹೀರಾತು

ಗಂಗಾವತಿ: ಅಖಂಡ ಗಂಗಾವತಿ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರುಗಳಿಗೆ ಇಂದು ಗಂಗಾವತಿ ನಗರದ ಎಂ.ಎನ್.ಎA ವಿದ್ಯಾಗಿರಿ ಪ್ರೌಢಶಾಲೆಯಲ್ಲಿ ಇಂದು ೨೦೨೫-೨೬ ನೇ ಸಾಲಿನ ಕ್ರೀಡಾಕೂಟಗಳ ಬಗ್ಗೆ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿತ್ತು.
ಸಭೆಯ ಅಧ್ಯಕ್ಷತೆಯನ್ನು ಕ್ಷೇತ್ರಶಿಕ್ಷಣಾಧಿಕಾರಿಗಳಾದ ನಟೇಶ್ ಹಾಗೂ ಹೊಸದಾಗಿ ದೈಹಿಕ ಶಿಕ್ಷಣ ಪರೀಕ್ಷಕರಾಗಿ ಆಗಮಿಸಿದ ಶ್ರೀಮತಿ ಸರಸ್ವತಿ ಜೂಡಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಕೊಪ್ಪಳ ಜಿಲ್ಲಾಧ್ಯಕ್ಷರಾದ ಶರಣೇಗೌಡ ಪೊಲೀಸ್ ಪಾಟೀಲ್ ಮತ್ತು ತಾಲೂಕ ಪ್ರಾಥಮಿಕ ಶಾಲೆಗಳ ಶಿಕ್ಷಕರ ಸಂಘದ ಅಧ್ಯಕ್ಷರಾದ ಹನುಮಂತಪ್ಪ, ಕಾರ್ಯದರ್ಶಿಗಳಾದ ಬಿ.ಆರ್. ಜೋಷಿ, ಎನ್.ಜಿ.ಒ ಕಾರ್ಯದರ್ಶಿಗಳಾದ ಶರಣಪ್ಪ ಹಕ್ಕಂಡಿ, ಅಧ್ಯಕ್ಷರಾದ ಗ್ರೇಡ್-೧ ಸಂಘದ ಅಧ್ಯಕ್ಷರಾದ ಬಸವರಾಜ್ ವೆಂಕಟಗಿರಿ, ಪ್ರಾಥಮಿಕ ಶಾಲೆಯ ಗ್ರೇಡ್-೨ ಸಂಘದ ಅಧ್ಯಕ್ಷರಾದ ಶಿವಕಾಂತ ತಳವಾರ ಮತ್ತು ಕರ್ನಾಟಕ ರಾಜ್ಯ ದೈಹಿಕ ಶಿಕ್ಷಕರ ಸಂಘದ ತಾಲೂಕ ಘಟಕದ ಅಧ್ಯಕ್ಷರಾದ ಯಂಕಪ್ಪ ತಳವಾರ್, ಜಿಲ್ಲಾ ಕಾರ್ಯದರ್ಶಿ ಟಿ. ನಾಗರಾಜ್, ಕಾರಟಗಿ ತಾಲೂಕ ಪ್ರಾ.ಶಾ.ಶಿ ಸಂಘದ ಅಧ್ಯಕ್ಷರಾದ ವಿಠ್ಠಲ್ ಜಿರಗಾಳಿ, ನಾಗಪ್ಪ, ರವಿ ನಾಯಕ, ಸಾವಿತ್ರಿಬಾಯಿ ಫುಲೆ ಸಂಘದ ಅಧ್ಯಕ್ಷರಾದ ಜಯಶ್ರೀ ಸೇರಿದಂತೆ ಸುಮಾರು ಪ್ರಾಥಮಿಕ, ಪ್ರೌಢಶಾಲೆಯ ೭೦ ಶಿಕ್ಷಕರು ಈ ಸಭೆಯಲ್ಲಿ ಭಾಗವಹಿಸಿದ್ದರು.
ಸಭೆಯಲ್ಲಿ ೧೪ ವರ್ಷದೊಳಗಿನ ಬಾಲಕ ಬಾಲಕಿಯರಿಗೆ ೧೭ ವರ್ಷದೊಳಗಿನ ಪ್ರೌಢಶಾಲೆಯ ಬಾಲಕ ಬಾಲಕಿಯರಿಗೆ ಇರುವ ಆಟೋಟಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಹಾಗೂ ಸ.ಮಾ.ಹಿ.ಪ್ರಾ ಆನೆಗುಂದಿ ದೈಹಿಕ ಶಿಕ್ಷಕರಾದ ಶಿವಕಾಂತ್ ತಳವಾರ್ ಇವರು ದೈಹಿಕ ಶಿಕ್ಷಕರಿಗೆ ಟ್ರಾö್ಯಕ್‌ಶೂಟ್‌ನ್ನು ತಮ್ಮ ಸ್ವಂತ ಹಣದಿಂದ ನೀಡಿದರು.
ಇವರಿಗೆ ಎಲ್ಲಾ ಸಂಘಗಳ ವತಿಯಿಂದ ಸನ್ಮಾನಿಸಿ ಸತ್ಕರಿಸಲಾಯಿತು.

About Mallikarjun

Check Also

ಕಂದಾಯ ದಿನಾಚರಣೆ ಕಾರ್ಯಕ್ರಮ

Revenue Day Program ಕೊಟ್ಟೂರು:. ತಾಲೂಕು ಕಛೇರಿ, ಈದಿನ ಕಂದಾಯ ದಿನಾಚರಣೆಯನ್ನು ಆಚರಿಸಲಾಯಿತು. ತಹಶೀಲ್ದಾರರಾದ ಅಮರೇಶ್.ಜಿ.ಕೆ ಇವರು ಕಂದಾಯ ಇಲಾಖೆಯ …

Leave a Reply

Your email address will not be published. Required fields are marked *