Breaking News

ಲೈಂಗಿಕ ದೌರ್ಜನ್ಯ ಮತ್ತು ಜಾತಿ ನಿಂದನೆ ಪ್ರಕರಣದಆರೋಪಿಗಳನ್ನುಬಂಧಿಸದಪೊಲೀಸರು….???

Police not arresting accused in sexual assault and caste abuse cases….???

ಜಾಹೀರಾತು

ಮಹಿಳಿಯ ಸ್ಥಿತಿ ಚಿಂತಾಜನಕ…!!! ಹೈಕೋರ್ಟ್ ಮೆಟ್ಟಿಲೇರುವುದಾಗಿ ಮತ್ತು ಹೋರಾಟ ಮಾಡುವುದಾಗಿ ಭೋವಿ ಸಮಾಜ ಎಚ್ಚರಿಕೆ.

ಕೊಪ್ಪಳ, ಲೈಂಗಿಕ ದೌರ್ಜನ್ಯ ಮತ್ತು ಜಾತಿ ನಿಂದನೆ ಪ್ರಕರಣದ ಒಂದರ ಆರೋಪಿಗಳನ್ನು ಬಂಧಿಸದ ಕಾರಟಗಿ ಠಾಣೆ ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಭೋವಿ ಸಮಾಜ, ಹೈಕೋರ್ಟ್ ಮೆಟ್ಟಿಲೇರುವುದಾಗಿ ಮತ್ತು ಹೋರಾಟ ಮಾಡುವುದಾಗಿ ಭೋವಿ ಸಮಾಜ ಎಚ್ಚರಿಕೆ ನೀಡಿದೆ.

ತಾಲೂಕಿನ ಸಿದ್ಧಾಪುರ ಗ್ರಾಮದ ಎಸ್.ಡಿ.ಪಿ.ಐ ಲೀಡರ್ ಹಾಗೂ ರೌಡಿಶೀಟರ್ ಆಗಿರುವ ಪೆಂಡಾಲ್ ಮಹೀಬೂಬ್ (ಎಂ.ಡಿ.ಎಸ್) ಮತ್ತು ಇನ್ನಿತರರು ಸೇರಿ, ಅಕ್ರಮ‌ ಕೂಟಕಟ್ಟಿಕೊಂಡು, ಅದೇ ಗ್ರಾಮದ ಐದನೇ ವಾರ್ಡಿನ ನಿವಾಸಿ, ದಲಿತ ಮಹಿಳೆಯ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ, ಲೈಂಗಿಕ ಕಿರುಕುಳ ನೀಡಿ, ಮೈ ಮೇಲಿನ ಬಟ್ಟೆಗಳನ್ನು ಹಿಡಿದು ಎಳೆದಾಡಿ, ಅತ್ಯಾಚಾರ ಮಾಡಲು ಪ್ರಯತ್ನ ಮಾಡಿದ್ದಲ್ಲದೇ, ಒಡಿ-ಬಡಿ ಮಾಡಿ, ಚಪ್ಪಲಿಗಳಿಂದ ಥಳಿಸಿ, ದೈಹಿಕವಾಗಿ ಹಿಂಸೆ ನೀಡಿ, ಗುಪ್ತಾಂಗಕ್ಕೆ ಒದ್ದು, ಜೀವ ಬೆದರಿಕೆ ಹಾಕಿರುವುದಾಗಿ ಕಾರಟಗಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲು ಆಗಿರುತ್ತದೆ.

ನೊಂದ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದ್ದು, ಆರೋಗ್ಯದಲ್ಲಿ ಬಹಳ ಏರು-ಪೇರು ಉಂಟಾಗಿದ್ದು, ಕಾರಟಗಿ, ಗಂಗಾವತಿಯ ಸರಕಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಸಹ ಆರೋಗ್ಯದ ಸ್ಥಿತಿ ಸುಧಾರಿಸುತ್ತಿಲ್ಲಾ, ಹೆಚ್ಚಿನ ಚಿಕಿತ್ಸೆಗೆ ಉನ್ನತ ಆಸ್ಪತ್ರೆಗಳಿಗೆ ತೆರಳಲು ನೊಂದ ಮಹಿಳೆಯ ಹತ್ತಿರ ಹಣವಿಲ್ಲ. ದುಡಿದು ಮನೆ ನೆಡೆಸುವರು ಇವರೊಬ್ಬರೆ ಆಗಿದ್ದರಿಂದ ಈಗ ಮನೆಯ ಪರಿಸ್ಥಿತಿಯು ಕೂಡ ಬಹಳ ಗಂಭೀರವಾಗಿದೆ. ಹೀಗಿದ್ದರೂ ಸಹಿತ ತಹಶೀಲ್ದಾರರು, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸೇರಿದಂತೆ ಯಾವೊಬ್ಬಸರಕಾರಿ ಅಧಿಕಾರಿಗಳು ಸಹಿತ ಮಹಿಳೆಗೆ ಸಹಾಯ ಮಾಡುವುದು ದೂರ ಉಳಿಯುತು, ಒಂದು ಸಾಂತ್ವಾನ ಹೇಳಿಲ್ಲಾ, ಮನೆಯ ಕಡೆ ತಿರುಗಿ ನೋಡಿಲ್ಲ.

ಆದರೆ ಪ್ರಕರಣದ ಮುಖ್ಯ ಆರೋಪಿ ರೌಡಿಶೀಟರ್ ಮಹಿಬೂಬ್ ಪೋಸರಿಗೆ ತನ್ನ ಪ್ರಭಾವ ಬಳಸಿ,ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನ ಪಡುತ್ತಿದ್ದಾನೆ. ಅಲ್ಲದೇ ಪೋಸರೊಂದಿಗೆ ಡೀಲ್ ಮಾಡಿಕೊಂಡಿರುವುದಾಗಿ ಮತ್ತು ಕೆಲವರ ಜೀವ ತೆಗೆಯುವದಾಗಿ ಮುಖ್ಯ ಆರೋಪಿ ದೂರವಾಣಿ ಕರೆಯಲ್ಲಿ ಮಾತನಾಡಿರುವ ಆಡಿಯೋಗಳು ವೈರಲ್ ಆಗಿವೆ.

ಇಷ್ಟಿದ್ದರೂ ಸಹಿತ ಕಾರಟಗಿ ಪೊಲೀಸರು ಸದರಿ ಪ್ರಕರಣದ ಆರೋಪಿಗಳನ್ನು ಬಂಧಿಸಲು ಕ್ರಮ ಕೈಗೊಳ್ಳದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಇಂತಹ ಒಂದು ಗಂಭೀರ ಪ್ರಕರಣದಲ್ಲಿ ವಾರೆಂಟ್ ಇಲ್ಲದಿದ್ದರೂ ಸಹ ಆರೋಪಿಗಳನ್ನು ಪೊಲೀಸ್ ಅಧಿಕಾರಿಗಳು ಬಂಧಿಸಬಹುದು. ಹೀಗಿದ್ದೂ, ಪೊಲೀಸರು ಕಾನೂನು ಕ್ರಮ ಜರುಗಿಸದಿರುವುದು ಕರ್ತವ್ಯ ಲೋಪವಲ್ಲದೆ ಮತ್ತೇನು…..?

ಹೀಗಾಗಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಎಲ್ಲಾ ವಿಷಯಗಳನ್ನು ಇಟ್ಟುಕೊಂಡು ಕಾರಟಗಿ ತಾಲೂಕಿನ ಭೋವಿ ಸಮಾಜ ಹೈಕೋರ್ಟ್ ಮೆಟ್ಟಿಲೇರುವುದಾಗಿ ಮತ್ತು ಹೋರಾಟ ಮಾಡುವುದಾಗಿ ಪತ್ರಿಕಾ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದೆ.

ಈಗಲಾದರೂ ಪ್ರಕರಣಕ್ಕೆ ಸಂಬಂಧಿಸಿದ ಆರೋಪಗಳನ್ನು ಪೋಲಿಸರು ಬಂಧಿಸಿ, ನೊಂದ ಮಹಿಳಿಗೆ ಸಾಂತ್ವಾನ ಹೇಳಿ, ಧೈರ್ಯ ತುಂಬಿ, ಹೆಚ್ಚಿನ ಚಿಕಿತ್ಸೆಗೆ ಹಾಗೂ ಮನೆಯ ಪರಿಸ್ಥಿತಿಯ ಸುಧಾರಣಗೆ ಸಂಬಂಧಿಸಿದ ಸರಕಾರಿ ಅಧಿಕಾರಿಗಳು ಸಹಾಯ ಮಾಡುತ್ತಾರಯೇ ಕಾದು ನೋಡಬೇಕಾಗಿದೆ.

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.