Breaking News

ಮುಖ್ಯಮಂತ್ರಿಗಳು ಆಗಮನದಕಾರ್ಯಕ್ರಮದಸಿದ್ಧತೆಪರಿಶೀಲಿಸಿದ ರಾಯಚೂರ ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್

Raichur Rural MLA Basana Gowda Daddal reviews preparations for Chief Minister’s arrival

ಜಾಹೀರಾತು

ರಾಯಚೂರ ಜೂನ್ 20 (ಕ.ವಾ.): ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಜೂನ್ 23ರಂದು ರಾಯಚೂರ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡ ಹಿನ್ನೆಲೆಯಲ್ಲಿ ನಾನಾ ಕಾರ್ಯಕ್ರಮಗಳ ಸಿದ್ಧತೆಯ ಬಗ್ಗೆ ಶ್ರೀಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ಅಧ್ಯಕ್ಷರು ಆಗಿರುವ
ರಾಯಚೂರ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕರಾದಬಸನಗೌಡ ದದ್ದಲ್ ಅವರು ಜೂನ್ 20ರಂದು ಕಾರ್ಯಕ್ರಮದ ಸ್ಥಳಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿದರು.
ಬೆಳಗ್ಗೆ ತಮ್ಮ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ನಂತರ ನೇರವಾಗಿ ರಾಯಚೂರ ವಿಶ್ವವಿದ್ಯಾಲಯದ ಆವರಣಕ್ಕೆ ತೆರಳಿದರು.
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಹಿನ್ನೆಲೆಯಲ್ಲಿ ಹಬ್ಬದ ರೀತಿಯಲ್ಲಿ ಸಿದ್ಧವಾಗುತ್ತಿರುವ ವಿಶ್ವ ವಿದ್ಯಾಲಯದ ಆವರಣದಲ್ಲಿನ ನಾನಾ ಸಿದ್ಧತಾ ಕಾರ್ಯಗಳನ್ನು ಪರಿಶೀಲಿಸಿದರು.
ಬಳಿಕ ಶಾಸಕರು, ಹೆಲಿಪ್ಯಾಡ್ ಆವರಣಕ್ಕೆ ತೆರಳಿ ಅಲ್ಲಿನ ಸಿದ್ಧತೆ ಮತ್ತು ಸೂಕ್ತ ಭದ್ರತೆಯ ಬಗ್ಗೆ ಮಾಹಿತಿ ಪಡೆದುಕೊಂಡರು.
ಅಲ್ಲಿಂದ ಶಾಸಕರು, ಯರಗೇರಾ ಗ್ರಾಮಕ್ಕೆ ತೆರಳಿದರು. ಯರಗೇರಾ ಕ್ರಾಸ್ ಬಳಿಯಲ್ಲಿ, ಬೃಹತ್ ರೀತಿಯಲ್ಲಿ ಸಿದ್ಧವಾಗುತ್ತಿರುವ ಬುಡಕಟ್ಟು ಉತ್ಸವ ಹಾಗೂ 371 ಜೆ ದಶಮಾನೋತ್ಸವ ಮತ್ತು ರಾಯಚೂರ ಗ್ರಾಮೀಣ ಕ್ಷೇತ್ರ ವ್ಯಾಪ್ತಿಗೆ ಸಂಬಂಧಿಸಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭದ ಮುಖ್ಯ ವೇದಿಕೆಯ ಸಿದ್ಧತೆಯನ್ನು ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಶಾಸಕರು, ಮುಖ್ಯ ವೇದಿಕೆ ನಿರ್ಮಾಣ ಸೇರಿದಂತೆ ಎಲ್ಲಾ ಸಿದ್ಧತಾ ಕಾರ್ಯಗಳನ್ನು ವೇಗಗೊಳಿಸಲು ಸೂಚನೆ ನೀಡಿದರು. ವೇದಿಕೆ ನಿರ್ಮಾಣ ಸೇರಿದಂತೆ ಶಿಷ್ಠಾಚಾರ ಪಾಲನೆ ಹಾಗು ಇನ್ನೀತರೆ ಜವಾಬ್ದಾರಿ ವಹಿಸಿಕೊಂಡ ಅಧಿಕಾರಿಗಳು ಸ್ಥಳದಲ್ಲಿದ್ದು, ವೇದಿಕೆಯ ಮೇಲೆ ಮತ್ತು ಮುಂಭಾಗದಲ್ಲಿ ಗಣ್ಯರ ಆಸನದ ವ್ಯವಸ್ಥೆ, ಪತ್ರಿಕಾ ಗ್ಯಾಲರಿ, ಸಾರ್ವಜನಿಕರಿಗೆ ಆಸನ, ಪ್ರವೇಶ ದ್ವಾರ, ಗದ್ದಲ ಆಗದಂತೆ ಸೂಕ್ತ ಬ್ಯಾರಿಕೇಡ್ ವ್ಯವಸ್ಥೆ, ತಾತ್ಕಾಲಿಕ ಚಿಕಿತ್ಸಾ ವ್ಯವಸ್ಥೆ, ಕುಡಿಯುವ ನೀರು, ಉಪಹಾರ ಊಟದ ಗ್ಯಾಲರಿ ನಿರ್ಮಾಣ ಕಾರ್ಯಗಳು ಅಚ್ಚುಕಟ್ಟಾಗಿ ನಡೆಯುವಂತೆ ಶಾಸಕರು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಮುಖ್ಯ ವೇದಿಕೆಯ ಬಳಿ ಗದ್ದಲವಾಗದಂತೆ ವಾಹನಗಳಿಗೆ ಸೂಕ್ತ ಪಾರ್ಕಿಂಗ್, ತುರ್ತು ಸಂದರ್ಭದಲ್ಲಿ ಅಂಬುಲೆನ್ಸ್ ಸರಳವಾಗಿ ಮುಖ್ಯ ರಸ್ತೆಗೆ ಸಂಪರ್ಕಿಸಲು ಅನುಕೂಲವಾಗುವಂತೆ ಬ್ಯಾರಿಕೇಡ್ ಬಳಸಿ ಪ್ರತ್ಯೇಕ ಮಾರ್ಗ ನಿರ್ಮಾಣ ಸೇರಿದಂತೆ ಎಲ್ಲಾ ರೀತಿಯ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಇದೆ ವೇಳೆ ಶಾಸಕರು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ವಿಧಾನ ಪರಿಷತ್ ಶಾಸಕರಾದ ಎ ವಸಂತಕುಮಾರ, ಮುಖಂಡರಾದ ಬಸವರಾಜ ಪಾಟೀಲ ಇಟಗಿ, ರಜಾಕ್ ಉಸ್ತಾದ್, ಮಲ್ಲಿಕಾರ್ಜುನ ಗೌಡ ತಲಮಾರಿ, ಅಸ್ಲಂ ಪಾಶಾ ಸೇರಿದಂತೆ ಇನ್ನೀತರ ಮುಖಂಡರು, ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಯರಗೇರಾ ಗ್ರಾಮದ ಪ್ರಮುಖರು ಇದ್ದರು.

About Mallikarjun

Check Also

ಜಿಲ್ಲೆಯನ್ನು ಕ್ರೀಡೆಯಲ್ಲಿ ಮುಂದೆ ತರಲು ಪೂರ್ಣ ಯತ್ನ : ಹಿಟ್ನಾಳ

All efforts are being made to bring the district forward in sports: Hitnala ಕುಷ್ಟಗಿ (ಹನುಮಸಾಗರ): …

Leave a Reply

Your email address will not be published. Required fields are marked *