June-22 Inauguration ceremony of new office bearers of Lions Club

ಗಂಗಾವತಿ: ನಗರದ ಐ.ಎಂ.ಎ ಹಾಲ್‌ನಲ್ಲಿ ಜೂನ್-೨೨ ಭಾನುವಾರ ಸಂಜೆ ೭:೦೦ ಗಂಟೆಗೆ ಲಯನ್ಸ್ ಕ್ಲಬ್ ಗಂಗಾವತಿಯ ೨೦೨೫-೨೬ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜರುಗಲಿದೆ.
ಈ ಸಮಾರಂಭದಲ್ಲಿ ಪದಗ್ರಹಣ ಬೋಧನೆಯನ್ನು ಎಂ.ಜೆ.ಎಫ್ ಲಯನ್ ಸುದೇಶ ಬೋರಕರ್ ಅವರು ಮಾಡಲಿದ್ದಾರೆ. ಗಂಗಾವತಿ ಲಯನ್ಸ್ ಕ್ಲಬ್‌ಗೆ ೨೦೨೫-೨೬ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಡಾ|| ಶಿವಕುಮಾರ ಮಾಲಿಪಾಟೀಲ್, ಕಾರ್ಯದರ್ಶಿಯಾಗಿ ಲಯನ್ ಜಂಬಣ್ಣ ಐಲಿ, ಖಜಾಂಚಿಯಾಗಿ ಲಯನ್ ಶಿವಪ್ಪ ಗಾಳಿ ಯವರು ಆಯ್ಕೆಗೊಂಡಿರುತ್ತಾರೆ.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಿ.ಎಂ.ಜೆ.ಎಫ್ ಲಯನ್ ಡಾ|| ಮಾಧವಶೆಟ್ಟಿ ಹಾಗೂ ಎಂ.ಜೆ.ಎಫ್ ಲಯನ್ ಗವಿಸಿದ್ದಪ್ಪ ಎಂ. ಆಗಮಿಸಲಿದ್ದಾರೆ.
ಈ ಸಮಾರಂಭಕ್ಕೆ ಎಲ್ಲಾ ಪತ್ರಿಕಾ ಮಾಧ್ಯಮದ ಪ್ರತಿನಿಧಿಗಳು, ಸಂಘ-ಸAಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ನೂತನ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ|| ಶಿವಕುಮಾರ ಮಾಲಿಪಾಟೀಲ್ ಅವರು ವಿನಂತಿಸಿದ್ದಾರೆ.