Before You Get There” poster released

ಬೆಂಗಳೂರ : ಶ್ರೀ ವೀರಭದ್ರೇಶ್ವರ ಸಿನಿ ಕ್ರಿಯೇಷನ್ ಅವರ ಮನು ಸಹಕಾರದ “ನೀ ಸಿಗುವ ಮೊದಲು” ಎಂಬ ಸ್ಟೋರಿ ಕಂಟೆAಟ್ ಆಲ್ಬಮ್ ಸಾಂಗ್ ಹಾಗೂ ಹೊಸಚಲನಚಿತ್ರದ ಪೋಸ್ಟರನ್ನು ಚಲನಚಿತ್ರ ನಟ ಆ್ಯಕ್ಷನ್‌ಪ್ರಿನ್ಸ್ ಧ್ರ‍್ರುವ ಸರ್ಜಾ ಬಿಡುಗಡೆ ಮಾಡಿದರು.
ಪೋಸ್ಟರ ಬಿಡುಗಡೆ ನಂತರ ಧ್ರ‍್ರುವ ಸರ್ಜಾ ಯುವ ಕಲಾವಿದರಿಗೆ, ತಂಡಕ್ಕೆ ಶುಭಕೋರಿದರು. ಹಿರಿಯ ಪ್ರಬುದ್ಧ ಕಲಾವಿದರಾÀದ ಧ್ರ‍್ರುವ ಸರ್ಜಾ ಅವರು ಪೋಸ್ಟರ್ ಬಿಡುಗಡೆ ಮಾಡಿ ಪ್ರೋತ್ಸಾಹಿಸಿ ಶುಭ ಹಾರೈಸಿದ್ದಾರೆ. ಅದು ನಮ್ಮ ಭಾಗ್ಯ. ನಿಜಕ್ಕೂ ತಂಡಕ್ಕೆ ಖುಷಿಯಾಗಿದೆ. ಮಡಿಕೇರಿ ಆನೆ ದುಬಾರಿ ಸಕಲೇಶಪುರ ಮತ್ತು ಬೆಂಗಳೂರು ಸುತ್ತಮುತ್ತ ಚಿತ್ರಿಕರಣ ನಡೆಸಲಾಗಿದ್ದು, ಕಲಾವಿದರಾದ ಮೋಹನ್ ಬಿ ಮತ್ತು ಅಶ್ವಿನಿ ಶೆಟ್ಟಿ ಮನೋಜ್ಞವಾಗಿ ನಟಿಸಿದ್ದಾರೆ. ಸದ್ಯ ಆಲ್ಬಂ ಸಾಂಗ್ ಮಾತ್ರ ಬಿಡುಗಡೆ ಮಾಡುತ್ತಿದ್ದು ಇದೇ ಹೆಸರಿನಲ್ಲಿ ಚಲನಚಿತ್ರ ನಿರ್ಮಾಣ ತಯ್ಯಾರಿ ನಡೆಸಿದ್ದೇವೆ. ಶೀಘ್ರದಲ್ಲೇ ಚಿತ್ರೀಕರಣ ಕೂಡ ಆರಂಭಿಸುತ್ತೇವೆ ಎಂದು ನಿರ್ದೇಶಕ ರಘು ತಿಳಿಸಿದರು.
ಚಿತ್ರಕಥೆ,ನಿರ್ದೇಶನ ರಘು ಅ ರೂಗಿ , ಸಂಭಾಷಣೆ, ಸಹನಿರ್ದೇಶನ ರಮೇಶ್ ಜಿ,ಆರ್ , ಕಥೆ,ಸಾಹಿತ್ಯ ,ಸಂಗೀತ ,ವಿಶಾಲ್ ಆಲಾಪ್ , ಹಿನ್ನಲೆ ಸಂಗೀತ ಎ ಟಿ ರವೀಶ್ , ಸಂಕಲನ, ಛಾಯಾಗ್ರಹಣ ಪ್ರೀತಮ್ ಪೂಜಾರಿ , ಗಾಯಕರು ವಿಶಾಕ್ ನಾಗಲಾಪುರ , ಕೀರ್ತನ ಚಂದ್ರು , ಮ್ಯುಜಿಷಿಯನ್ ಅಭಿನವ್ ಅಯ್ಯಂಗಾರ್ , ಸೌಂಡ್ ಇಂಜಿನಿಯರ್ ವಿಜಯ್ ಅರುಣ್ , ರಘು ರೂಗಿ , ಪ್ರೋಗ್ರಾಮ್, ತೇಜಸ್ ಮತ್ತು ಆಕಾಶ್ ,ಮಾಸ್ಟರಿಂಗ್ -ಮಿಕ್ಸಿಂಗ್ ಸುರಾಜ್ ಎಸ್ ವಾಸುದೇವ್, ಸಹಾಯ ಭಗವತಿ ಕಾಟೇಜ್ (ಮಡಿಕೇರಿ), ಮೋದಿ ತಳವಾರ. ಪ್ರೊಡಕ್ಷನ್ ಮ್ಯಾನೇಜರ್ ರಾಹುಲ್ ಎನ್.ಎಚ್, ಮಾಧ್ಯಮ ಸಂಪರ್ಕ ಡಾ. ಪ್ರಭು ಗಂಜಿಹಾಳ. ಡಾ. ವೀರೇಶ್ ಹಂಡಿಗಿ , ನಿರ್ಮಾಪಕರು ವನಿ ಕಾಂತರಾಜ್(ಬೇಲೂರು) ಆಗಿದ್ದಾರೆ,
**