Unprecedented progress in Karnataka State Ganga Devotees Association: Immediate Past President Moulali

ಬೆಂಗಳೂರು, ಜೂ.18; ಹಿಂದುಳಿದ ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘದಲ್ಲಿ ಕಳೆದ 2018 ರಿಂದ 2024 ಏಪ್ರಿಲ್ ವರೆಗೆ ತಮ್ಮ ಆಡಳಿತಾವಧಿಯಲ್ಲಿ ಇತಿಹಾಸದಲ್ಲಿ ಕಂಡರಿಯದ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದು, ಸಂಘ ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಿದೆ ಎಂದು ನಿಕಟ ಪೂರ್ವ ಅಧ್ಯಕ್ಷ ಮೌಲಾನಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2018 ನವೆಂಬರ್ ನಲ್ಲಿ ಸಂಘಕ್ಕೆ ಕೇವಲ 16,000 ರೂ ಬಾಡಿಗೆ ಬರುತ್ತಿತ್ತು. ಇದೀಗ 3.8 ಲಕ್ಷ ರೂಗೆ ಏರಿಕೆಯಾಗಿದೆ. ಸಂಘದ ದಾಖಲಾತಿಗಳನ್ನು ಸರಿಪಡಿಸಿ, ತೆರಿಗೆ ಪಾವತಿಸಿ, ಸರ್ಕಾರದಿಂದ 2.5 ಕೋಟಿ ರೂ ಮತ್ತು ದಾನಿಗಳ ನೆರವಿನಿಂದ ಹಣ ಸಂಗ್ರಹಿಸಿ ಹಳೆ ವಿದ್ಯಾರ್ಥಿ ನಿಲಯವನ್ನು ಕೆಡವಿ ಹೊಸ ವಿದ್ಯಾರ್ಥಿ ನಿಲಯವನ್ನು ನಿರ್ಮಿಸಿದ್ದೇವೆ. ಕಟ್ಟಡ ಕಾಮಗಾರಿಯನ್ನು ಜಿಲ್ಲಾಧಿಕಾರಿಗಳು ವೀಕ್ಷಿಸಿ ಗುಣಮಟ್ಟದ ಪ್ರಮಾಣಪತ್ರ ನೀಡಿದ್ದಾರೆ. ಶಿಲ್ಪಿ ವಿಶ್ವನಾಥ್ ಭಟ್ ನೇತೃತ್ವದಲ್ಲಿ ಶ್ರೀ ಗಂಗಾಪರಮೇಶ್ವರಿ ದೇವಸ್ಥಾನದ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು.
ನಮ್ಮ ಸಂಘಕ್ಕೆ 13 ತಿಂಗಳಿಂದ ಆಡಳಿತಾಧಿಕಾರಿಗಳಿದ್ದು, ಇದೀಗ ಸಂವಿಧಾನ ಬದ್ಧವಾಗಿ ಚುನಾವಣೆ ನಡೆಯುತ್ತಿದೆ. ನಮ್ಮನ್ನು ಮತ್ತೆ ಆಯ್ಕೆ ಮಾಡಿದರೆ ಸರ್ಕಾರದಿಂದ ಮಂಜೂರು ಮಾಡಿರುವ 5 ಎಕರೆ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆ ನಿರ್ಮಿಸುವ ಗುರಿ ಹೊಂದಿದ್ದೇವೆ. ನಮ್ಮ ರಾಜ್ಯದ ಏಕೈಕ ಮಠಾಧೀಶರಾದ ಶಾಂತಭೀಷ್ಮ ಸ್ವಾಮೀಜಿಗಳ ಶಾಖ ಮಠವನ್ನು ಕೂಡ ಇದೇ ಜಾಗದಲ್ಲಿ ಸ್ಥಾಪನೆ ಮಾಡಬೇಕೆಂಬ ಆಕಾಂಕ್ಷೆಯನ್ನು ಹೊಂದಿದ್ದೇವೆ. ಜೊತೆಗೆ ಮಹಿಳಾ ವಿದ್ಯಾರ್ಥಿ ನಿಲಯವನ್ನು ನಿರ್ಮಿಸುವ ಗುರಿ ಇದೆ. ಪ್ರತಿ ಜಿಲ್ಲೆಗಳಲ್ಲೂ ಕೂಡ ನಮ್ಮ ಸಂಘದ ವಿದ್ಯಾರ್ಥಿ ನಿಲಯಗಳನ್ನು ನಿರ್ಮಿಸಲಾಗುವುದು. ಸಂಘದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಈ ಕುರಿತ ಅಪ ಪ್ರಚಾರಗಳಿಗೆ ಕಿವಿಗೊಡಬಾರದು ಎಂದು ಮೌಲಾನಿ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ನಿಕಟಪೂರ್ವ ಕಾರ್ಯದರ್ಶಿ ಕೆ ಮನೋಹರ್, ಮಾಜಿ ಉಪಾಧ್ಯಕ್ಷರಾದ ಮಹದೇವ ಕರ್ಜಗಿ, ತಮ್ಮಣ್ಣ, ಗೋಪಾಲ್, ಮಾಜಿ ಸಂಘಟನಾ ಕಾರ್ಯದರ್ಶಿ ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.