Money was raised by preparing bogus bills without installing high-mast lights under the KKRDB scheme: H. Vasanthakumar

ಗಂಗಾವತಿ: ನಗರದ ಗಣೇಶ ಸರ್ಕಲ್‌ನಲ್ಲಿ ಮತ್ತು ೧೮ ಸಮಾಜನ ಸ್ಮಶಾನದಲ್ಲಿ ಹೈ ಮಾಸ್ಕ್ ದೀಪಗಳನ್ನು ಅಳವಡಿಸಲು ಕೆ.ಕೆ.ಆರ್.ಡಿ.ಬಿ. ಯೊಜನೆ ಅಡಿಯಲ್ಲಿ ಹಣ ಮಂಜೂರಾಗಿರುತ್ತದೆ. ಆದರೆ ಸದರಿ ಕಾಮಗಾರಿಯನ್ನು ನಿರ್ವಹಿಸದೇ ಬೋಗಸ್ ದಾಖಲೆಗಳನ್ನು ಸೃಷ್ಟಿಮಾಡಿಕೊಂಡು ಸರ್ಕಾರದ ಹಣವನ್ನು ಲೂಟಿ ಮಾಡಿರುತ್ತಾರೆ ಎಂದು ಕರ್ನಾಟಕ ದಲಿತ ರಕ್ಷಣ ವೇದಿಕೆ ಜಿಲ್ಲಾಧ್ಯಕ್ಷರಾದ ಹೆಚ್. ವಸಂತಕುಮಾರ ಕಟ್ಟಿಮನಿ ಆರೋಪಿಸಿದರು.
ಅವರು ಸದರಿ ಕಾಮಗಾರಿಯಲ್ಲಿ ಭ್ರಷ್ಟಾಚಾರವೆಸಗಿದ ಅಧಿಕಾರಿಗಳನ್ನು ಅಮಾನತ್ತುಗೊಳಿಸಲು ಒತ್ತಾಯಿಸಿ, ಜೂನ್-೧೭ ರಂದು ತಾ.ಪಂ ನಡೆದ ಕೆ.ಡಿ.ಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಶಿವರಾಜ ತಂಗಡಗಿಯವರಿಗೆ ಮನವಿ ಸಲ್ಲಿಸಿ ಮಾತನಾಡಿದರು. ಸದರಿ ಕಾಮಗಾರಿ ಸಂ: ಏPಐ ಎಂದು ಇರುತ್ತದೆ. ಆದರೆ ಈ ಎರಡೂ ಕಡೆಗಳಲ್ಲಿ ಹೈಮಾಸ್ಕ್ ದೀಪಗಳನ್ನು ಅಳವಡಿಸದೇ ಬಿಲ್ಲುಗಳನ್ನು ಎತ್ತುವಳಿ ಮಾಡಿರುತ್ತಾರೆ. ಸದರಿ ಬೋಗಸ್ ಕಾಮಗಾರಿಯ ಬಗ್ಗೆ ತಿಳಿದ ಅಧಿಕಾರಿಗಳು/ಇಂಜಿನೀಯರುಗಳು ಯಾವುದೇ ರೀತಿಯ ಕ್ರಮ ಕೈಗೊಳ್ಳದೇ ಗುತ್ತೆದಾರರೊಂದಿಗೆ ಶಾಮೀಲಾಗಿ ತಮ್ಮ ಲಾಭಕ್ಕಾಗಿ ಸರ್ಕಾರಕ್ಕೆ ಮತ್ತು ಸಾರ್ವಜನಿಕರಿಗೆ ಮೋಸ ವಂಚನೆಯನ್ನು ಮಾಡಿದ್ದಾರೆ. ಇಂತಹ ಭ್ರಷ್ಟ ಇಂಜಿನೀಯರುಗಳನ್ನು ತಕ್ಷಣ ಅಮಾನತ್ತು ಮಾಡಬೇಕು ಮತ್ತು ಗುತ್ತೆದಾರರನ್ನು ತಕ್ಷಣ ಕಪ್ಪುಪಟ್ಟಿಯಲ್ಲಿ ಸೇರಿಸಬೇಕು ಹಾಗೂ ಸದರಿ ಲೂಟಿ ಆಗಿರುವ ಹಣವನ್ನು ಇವರಿಂದಲೇ ಸರ್ಕಾರಕ್ಕೆ ಭರಿಸಿಕೊಳ್ಳಬೇಕು ಹಾಗೂ ಸದರಿ ಕಾಮಗಾರಿಯನ್ನು ತನಿಖೆ ಮಾಡಬೇಕೆಂದು ಕೊಪ್ಪಳ ಕೆ.ಆರ್.ಐ.ಡಿ.ಎಲ್. ಕಛೇರಿಯ ಕಾರ್ಯಪಾಲಕ ಅಭಿಯಂತರರಿಗೆ ದೂರು ಸಲ್ಲಿಸಲಾಗಿರುತ್ತದೆ. ಆದರೆ ಈ ಭ್ರಷ್ಟ ಅಧಿಕಾರಿಗಳು ಯವುದೇ ಕ್ರಮ ಕೈಗೊಂಡಿರುವುದಿಲ್ಲ. ಕಾರಣ ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು ಸದರಿ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು ಮತ್ತು ಕಾಮಗಾರಿಯ ಅನುದಾನವನ್ನು ಪುನಃ ಸರ್ಕಾರದ ಬೊಕ್ಕಸಕ್ಕೆ ಮರುತುಂಬಿಸಿಕೊಳ್ಳಬೇಕೆAದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳಾದ ಶರಣಬಸವ, ಚನ್ನಬಸವ, ಪರಶುರಾಮ, ಹನುಮಂತ, ದೇವರಾಜ, ಮಹೇಶ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.